fbpx
ಸಮಾಚಾರ

ರಾಮ ಮತ್ತು ಹನುಮಂತನು ಮೊದಲು ಭೇಟಿ ಬಗ್ಗೆ ಇಲ್ಲಿದೆ ಮಹತ್ವದ ಮಾಹಿತಿ

ರಾಮ ಮತ್ತು ಹನುಮಂತನು ಮೊದಲು ಭೇಟಿಯಾಗಿದ್ದು ಎಲ್ಲಿ ಗೊತ್ತಾ..? ರಾಮ ಮತ್ತು ಹನುಮಂತನ ಮೊದಲ ಭೇಟಿಯ ಬಗ್ಗೆ ನೀವಿಲ್ಲಿ ತಿಳಿದುಕೊಳ್ಳಬಹುದು. ರಾಮಾಯಣದಲ್ಲಿ ಹನುಮಂತ ಮತ್ತು ರಾಮನ ಭೇಟಿ ಹೇಗಿತ್ತು ಎಂಬುದನ್ನು ಈ ಲೇಖನ ನಿಮಗೆ ಅರ್ಥೈಸುತ್ತದೆ.

ವಾಲ್ಮೀಕಿ ರಾಮಾಯಣದ ಕಿಷ್ಕಿಂದ ಕಾಂಡವು ಭಗವಾನ್ ರಾಮ ಮತ್ತು ಭಗವಾನ್ ಹನುಮಂತನ ಮೊದಲ ಭೇಟಿ ಕುರಿತು ತಿಳಿಸುತ್ತದೆ. ಶ್ರೀರಾಮ ಮತ್ತು ಅವನ ಸಹೋದರ ಲಕ್ಷ್ಮಣನು ಪಂಪಾ ನದಿಯ ಸಮೀಪವಿರುವ ಋಷ್ಯಮುಖ ಪರ್ವತದ ಅರಣ್ಯದಲ್ಲಿ ನಡೆದುಕೊಂಡು ಹೋಗುತ್ತಿರುತ್ತಾರೆ. ಇವರನ್ನು ನೋಡಿದ ಸುಗ್ರೀವನು ತಪ್ಪಾಗಿ ತಿಳಿದುಕೊಳ್ಳುತ್ತಾನೆ. ಸುಗ್ರೀವನು ಕೂಡ ಅದೇ ಮಾರ್ಗವಾಗಿ ಹೋಗುತ್ತಿರುವಾಗ ಇಬ್ಬರು ಶಸ್ತ್ರಸಜ್ಜಿತ ಯುವಕರನ್ನು ಕಂಡು ಅವರು ರಾಮ, ಲಕ್ಷ್ಮಣರೆಂದು ತಿಳಿಯದೇ ತನ್ನ ಸಹೋದರನಾದ ವಾಲಿಯು ತನ್ನನ್ನು ಕೊಲ್ಲಲು ಕಳುಹಿಸಿದವರೆಂದು ತಪ್ಪಾಗಿ ತಿಳಿದು ಅಲ್ಲಿಂದ ಓಡಲು ನಿರ್ಧರಿಸುತ್ತಾನೆ.

ಸುಗ್ರೀವನು ಭಯದಿಂದ ಓಡುತ್ತಿದ್ದುದ್ದನ್ನು ಕಂಡ ಸುಗ್ರೀವನ ಮಂತ್ರಿಗಳಲ್ಲಿ ಒಬ್ಬನಾದ ಹನುಮಂತನು ವಾನರ ರಾಜ ಸಗ್ರೀವನನ್ನು ತಡೆದು ಭಯದಿಂದ ಓಡಲು ಕಾರಣವೇನೆಂದು ಕೇಳುತ್ತಾನೆ.  ”ನಾನು ನೋಡಿದ ಆ ಇಬ್ಬರೂ ಯೋಧರು ಭಯವೇ ಇರದವರಂತೆ ಕಾಣುತ್ತಾರೆ, ಹೆಚ್ಚು ಆತ್ಮವಿಶ್ವಾಸಿಗಳಾಗಿದ್ದಾರೆ. ಶಸ್ತ್ರಸಜ್ಜಿತರಾದ ಅವರು ನೋಡಲು ದೈವಿಕ ಗುಣವುಳ್ಳವರಂತೆ ಕಾಣುತ್ತಾರೆ. ನೀನು ಅವರನ್ನು ವಾಲಿಯ ಸೈನಿಕರಲ್ಲ ಎಂದು ಹೇಳಬಹುದು. ಆದರೆ, ನಾನು ಅವರನ್ನು ನೋಡಿದ್ದೇನೆ. ಅವರು ನೋಡಲು ವಾಲಿಯ ಸೈನಿಕರಂತೆ ಇದ್ದಾರೆ ಎಂದು ಹೇಳುತ್ತಾನೆ. ನೀನು ಈ ತಕ್ಷಣ ವಾನರ ರೂಪವನ್ನು ಬಿಟ್ಟು, ಸನ್ಯಾಸಿ ರೂಪವನ್ನು ಧರಿಸಿ ಅವರ ಬಗ್ಗೆ ತಿಳಿದುಕೊಂಡು ಬಾ ಎಂದು ಸುಗ್ರೀವ ಹನುಮಂತನಿಗೆ ಆದೇಶವನ್ನು ನೀಡುತ್ತಾನೆ.

ಹನುಮಂತನು ಸನ್ಯಾಸಿಯ ವೇಷ ಧರಿಸಿ ಆ ಇಬ್ಬರು ವೀರರಾದ ರಾಮ ಮತ್ತು ಲಕ್ಷ್ಮಣರ ಬಳಿಗೆ ಹೋಗುತ್ತಾನೆ. ರಾಮನನ್ನು ನೋಡುತ್ತಿದ್ದಂತೆ ಹನುಮಂತನ ತನ್ನ ಸನ್ಯಾಸಿ ರೂಪವನ್ನು ತೆಗೆದು, ನಿಜ ರೂಪಕ್ಕೆ ಬರುತ್ತಾನೆ. ಹೀಗೆ ಹನುಮಂತ ಹಾಗೂ ರಾಮ, ಲಕ್ಷ್ಮಣರ ಒಡನಾಟ ಪ್ರಾರಂಭವಾಯಿತು. ಸುಗ್ರೀವನಿಂದ ಆರಂಭವಾದ ಹನುಮಂತ ಮತ್ತು ರಾಮನ ಒಡನಾಟವು ರಾವಣನ ಅಂತ್ಯಕ್ಕೆ ಕಾರಣವಾಗುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top