ರಾಜ್ಯದ ರೈಲು ಪ್ರಯಾಣಿಕರಿಗೆ ಮತ್ತಷ್ಟು ಸಿಹಿ ಸುದ್ದಿ ಕಾದಿದೆ. ಬೆಂಗಳೂರು-ಹುಬ್ಬಳ್ಳಿ ನಡುವೆ ಸಾಕಷ್ಟು ಜನ ರೈಲು ಪ್ರಯಾಣಿಕರಿದ್ದು, ಈ ಹಿನ್ನೆಲೆ ನೈಋತ್ಯ ರೈಲ್ವೆ ಬೆಂಗಳೂರು ಮತ್ತು ಹುಬ್ಬಳ್ಳಿ ನಡುವೆ ಇನ್ನೂ 2 ನೂತನ ರೈಲುಗಳನ್ನು ಓಡಿಸಲು ನಿರ್ಧರಿಸಿದೆ.
ಮಾರ್ಚ್ 20 ರಿಂದ ಈ ನೂತನ ರೈಲುಗಳ ಸಂಚಾರ ಆರಂಭವಾಗಲಿದೆ. ಬೆಂಗಳೂರು ಮತ್ತು ಹುಬ್ಬಳ್ಳಿ ನಡುವೆ ಒಂದು ರಾತ್ರಿ ರೈಲು ಮತ್ತು ಒಂದು ಹಗಲು ರೈಲು ಓಡಿಸಲು ನೈರುತ್ಯ ರೈಲ್ವೆ (South Western Railway) (SWR) ನಿರ್ಧರಿಸಿದೆ.
ರೈಲು ಸಂಖ್ಯೆ 07339 ಹುಬ್ಬಳ್ಳಿ – ಬೆಂಗಳೂರು ದಿನನಿತ್ಯ ಎಕ್ಸ್‌ಪ್ರೆಸ್ ವಿಶೇಷ ರೈಲು ಹುಬ್ಬಳ್ಳಿಯಿಂದ ರಾತ್ರಿ 11:15 ಕ್ಕೆ ಹೊರಟು ಬೆಳಿಗ್ಗೆ 6:50 ಕ್ಕೆ ಬೆಂಗಳೂರು ತಲುಪುತ್ತದೆ.
ರೈಲು ಸಂಖ್ಯೆ 07340 ಬೆಂಗಳೂರು – ಹುಬ್ಬಳ್ಳಿ ಡೈಲಿ ಎಕ್ಸ್‌ಪ್ರೆಸ್ ವಿಶೇಷರೈಲು ಬೆಂಗಳೂರಿನಿಂದ ರಾತ್ರಿ 11:55 ಕ್ಕೆ ಹೊರಟು ಮರುದಿನ ಬೆಳಿಗ್ಗೆ 7:30 ಕ್ಕೆ ಹುಬ್ಬಳ್ಳಿ ತಲುಪುತ್ತದೆ ಎಂದು ತಿಳಿದುಬಂದಿದೆ.
ಇನ್ನೊಂದು ರೈಲು ಬೆಂಗಳೂರಿನಿಂದ ಹುಬ್ಬಳ್ಳಿಗೆ ಡೈಲಿ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 07354) ಬೆಂಗಳೂರಿನಿಂದ ಬೆಳಗ್ಗೆ 7:45 ಕ್ಕೆ ಹೊರಟು ಮಧ್ಯಾಹ್ನ 2:30 ಕ್ಕೆ ಹುಬ್ಬಳ್ಳಿ ತಲುಪುತ್ತದೆ.
ರೈಲು ಸಂಖ್ಯೆ 07353 ಹುಬ್ಬಳ್ಳಿ – ಬೆಂಗಳೂರು ದಿನನಿತ್ಯ ಎಕ್ಸ್‌ಪ್ರೆಸ್ ಹುಬ್ಬಳ್ಳಿಯಿಂದ ಮಧ್ಯಾಹ್ನ 3:15 ಕ್ಕೆ ಹೊರಟು ರಾತ್ರಿ 11:10 ಕ್ಕೆ ಬೆಂಗಳೂರು ತಲುಪುತ್ತದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
