ಇಂದು ಮಹಿಳೆಯರ ದಿನಾಚರಣೆ. ಹೀಗಿನ ಕಾಲದಲ್ಲಿ ಮಹಿಳೆಯರು ಪ್ರತಿಯೊಂದು ಕ್ಷೇತ್ರದಲ್ಲೂ ದೊಡ್ಡ ಮಟ್ಟದಲ್ಲಿ ಸಾಧನೆ ಮಾಡುತ್ತಾ ಬಂದಿದ್ದಾರೆ. ಪ್ರತಿಯೊಂದು ಕ್ಷೇತ್ರದಲ್ಲೂ ತಮ್ಮ ಚಾಪನ್ನು ಮೂಡಿಸುತ್ತಿದ್ದಾರೆ. ಇದೀಗ ನಮ್ಮ ಕರ್ನಾಟಕದ ಹೆಮ್ಮೆಯ ಮಹಿಳೆ ಮೌಂಟ್ ಎವರೆಸ್ಟ್ ಶಿಖರ ಏರುವ ಮೂಲಕ ದೊಡ್ಡ ಸಾಧನೆ ಮಾಡಿದ್ದಾರೆ.
ಭಾರತೀಯ ಸೇನೆಯಲ್ಲಿ ಮೇಜರ್ ಆಗಿರುವ ಸ್ಮಿತಾ ಲಕ್ಷ್ಮಣ್ ಅವರು ಜಗತ್ತಿನ ಅತಿ ಎತ್ತರದ ಶಿಖರವಾಗಿರುವ ಮೌಂಟ್ ಎವರೆಸ್ಟ್ ಶಿಖರ ಏರಿದ ಕರ್ನಾಟಕದ ಮೊದಲ ಮಹಿಳೆ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. ಮೌಂಟ್ ಎವರೆಸ್ಟ್ ಅಟ್ಟುವ ಮುನ್ನ ಇವರು ಎರಡು ಆಯ್ಕೆ ಶಿಬಿರದಲ್ಲಿ ಭಾಗವಹಿಸಿದ್ದರು. ಮೊದಲ ಶಿಬಿರದಲ್ಲಿ 659 ಅಭ್ಯರ್ಥಿಗಳಲ್ಲಿ ಸ್ಮಿತಾ 26ನೆಯವರಾಗಿದ್ದರು. ಎರಡನೆಯ ಶಿಬಿರದಲ್ಲಿ ಅವರು 22ನೆಯವರಾಗಿ ಹೊರಹೊಮ್ಮಿದ್ದರು.
ಎವರೆಸ್ಟ್ ಶಿಖರ ಏರುವ ಹಾದಿಯಲ್ಲಿ 4 ಶಿಬಿರಗಳನ್ನು (19,000 ಅಡಿ, 21,000 ಅಡಿ, 23,000 ಅಡಿ) ದಾಟಿ, ಮೇ 25, 2012ರ ಬೆಳಗಿನ 4 ಗಂಟೆಗೆ ಅವರು ಎವರೆಸ್ಟ್ ಶಿಖರ ಏರಿದ್ದರು. ಇದೇ ಮೊದಲ ಬಾರಿಗೆ ಸೇನಾ ಮಹಿಳೆಯರ ತಂಡ ಸೌತ್ ರಿಡ್ಜ್ ಮಾರ್ಗದ ಮೂಲಕ ಮೌಂಟ್ ಎವರೆಸ್ಟ್ ಶಿಖರವನ್ನು ಏರಿದ್ದರು.
ಸ್ಮಿತಾ ಲಕ್ಷ್ಮಣ್ ಅವರು ಒಂದು ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ್ದರು. ಇವರ ತಂದೆ ಸರ್ಕಾರಿ ಮುದ್ರಣ ಇಲಾಖೆಯ ನಿವೃತ್ತ ಉದ್ಯೋಗಿಯಾಗಿದ್ದಾರೆ. ಇವರು ಪದವಿ ಮುಗಿಸಿದ ಬಳಿಕ ಪ್ರಮುಖ ಐಟಿ ಕಂಪನಿಯಲ್ಲಿ ಉದ್ಯೋಗ ದೊರಕಿತು. ಆದರೆ ಅದನ್ನು ತ್ಯಜಿಸಿ ಸೇನೆಗೆ ಸೇರಿಕೊಂಡು ದೇಶಕ್ಕಾಗಿ ಸೇವೆ ಮಾಡುತ್ತಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
