fbpx
ಸಮಾಚಾರ

OTT ಗೆ ಕಾಲಿಡಲು ರೆಡಿಯಾದ ಅವತಾರ್-2 ಸಿನಿಮಾ! ದಿನಾಂಕ ಫಿಕ್ಸ್

ಪ್ರಪಂಚದಾದ್ಯಂತ ಹೆಚ್ಚು ಸೌಂಡ್ ಮಾಡಿದ್ದ ಹಾಲಿವುಡ್ ಸಿನಿಮಾಗಳಲ್ಲಿ ಅವತಾರ್ ಸಿನಿಮಾ ಕೂಡ ಒಂದು. ಅವತಾರ್ ಸಿನಿಮಾ ಹಿಟ್ ಆದ ಹಲವು ವರ್ಷಗಳ ಬಳಿಕ ಅವತಾರ್-2 ಸಿನಿಮಾ ಬಿಡುಗಡೆಯಾಗಿ ಕೋಟಿ ಕೋಟಿ ಹಣ ಬಾಚಿಕೊಂಡಿತ್ತು. ಆದರೆ ಈ ಸಿನಿಮಾವನ್ನು ಚಿತ್ರಮಂದಿರದಲ್ಲಿ ನೋಡಲು ಕೆಲವು ಸಿನಿಪ್ರಿಯರಿಗೆ ಅವಕಾಶ ಸಿಕ್ಕಿರಲಿಲ್ಲ. ಇದೀಗ ಸಿನಿಮಾ ತಂಡ ಮತ್ತೆ ಸಿನಿ ರಸಿಕರಿಗೆ ಮನೆಯಲ್ಲೇ ಕೂತು ಸಿನಿಮಾ ನೋಡುವ ಅವಕಾಶ ನೀಡುತ್ತಿದ್ದಾರೆ.

ಜೇಮ್ಸ್ ಕ್ಯಾಮೆರಾನ್ ನಿರ್ದೇಶನದ `ಅವತಾರ್ 2′ ಸಿನಿಮಾ ವಿವಿಧ ಭಾಷೆಗಳಲ್ಲಿ ಕಳೆದ ವರ್ಷ ಡಿ.22ರಂದು ಪ್ರಪಂಚದಾದ್ಯಂತ ಬಿಡುಗಡೆಯಾಗಿತ್ತು. ಈ ಸಿನಿಮಾವನ್ನು ಚಿತ್ರಮಂದಿರದಲ್ಲಿ ವೀಕ್ಷಿಸಿದ ಸಿನಿ ರಸಿಕರು ಇದನ್ನು ಬಹಳಷ್ಟು ಹೊಗಳಿದ್ದರು. ಇದೀಗ ಈ ಸಿನಿಮಾ OTT ಗೆ ಕಾಲಿಡುತ್ತಿದೆ.

ಮಾ.28ರಂದು ವಿವಿಧ ಒಟಿಟಿಯಲ್ಲಿ ಬಿಡುಗಡೆಯಾಗಲು ಅವತಾರ್ ಸಿನಿಮಾ ರೆಡಿಯಾಗುತ್ತಿದೆ. ಅಮೇಜಾನ್ ಪ್ರೈಂ ಸೇರಿದಂತೆ ಮುಂತಾದ ಒಟಿಟಿ ಸಂಸ್ಥೆಗಳು ಇದರ ಸ್ಟ್ರೀಮಿಂಗ್ ಹಕ್ಕುಗಳನ್ನು ಪಡೆದುಕೊಂಡಿವೆ. ಹೀಗಾಗಿ ಚಿತ್ರಮಂದಿರದಲ್ಲಿ ಈ ಸಿನಿಮಾವನ್ನು ಮಿಸ್ ಮಾಡಿಕೊಂಡ ಸಿನಿ ಪ್ರಿಯರು ಇದೀಗ ಈ ಸಿನಿಮಾವನ್ನು OTT ಮೂಲಕ ಕಣ್ತುಂಬಿಕೊಳ್ಳಲು ಕಾತುರದಿಂದ ಕಾಯುತ್ತಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top