ಮದುವೆ ಅಂತ ಬಂದಾಗ ನಾವು ಚಿತ್ರ ವಿಚಿತ್ರವಾದ ರೀತಿಯಲ್ಲಿ ಮದುವೆ ಮಾಡುವುದನ್ನು ನೋಡಿದ್ದೇವೆ. ಕೆಲವರ ಮದುವೆ ನೋಡುವುದು ಎಂದರೆ ಒಂದು ಖುಷಿ. ಆದರೆ ಇತ್ತೀಚಿಗೆ ಕೇವಲ ಮನುಷ್ಯರು ಮಾತ್ರ ಮದುವೆಯಾಗುತ್ತಿಲ್ಲ, ಬದಲಾಗಿ ಪ್ರಾಣಿಗಳಿಗೂ ಸಹ ಮದುವೆ ಮಾಡುತ್ತಿದ್ದಾರೆ.
ಹಳ್ಳಿ ಕಡೆ ನಾವು ಕಪ್ಪೆ ಮದುವೆ, ಕತ್ತೆ ಮದುವೆ ಹೀಗೆ ಹಲವು ರೀತಿಯ ಮದುವೆಗಳನ್ನು ನೋಡಿದ್ದೇವೆ ಇಲ್ಲ ಕೇಳಿದ್ದೇವೆ. ಇದನ್ನು ಸಂಪ್ರದಾಯ ಅನ್ನಬೇಕೋ ಅಥವಾ ಮೂಢನಂಬಿಕೆ ಅನ್ನಬೇಕೋ ಗೊತ್ತಿಲ್ಲ, ಆದರೆ ಇದೀಗ ನಾಯಿಮರಿಗು ಸಹ ಮದುವೆ ಮಾಡಿದ್ದೂ, ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗುತ್ತಿದೆ.
They Had An Indian Wedding For Their Dogs.
😭😭😭😭
Deo Aapne Vichaar… pic.twitter.com/BsxMpi1nmE
— ਹਤਿੰਦਰ ਸਿੰਘ (@Hatindersinghr3) March 8, 2023
ವೈರಲ್ ಆಗುತ್ತಿರುವ ವಿಡಿಯೋ ದಲ್ಲಿ ನಾಯಿಮರಿಯೊಂದು ಮದುಮಗಳಂತೆ ರೆಡಿಯಾಗಿ ಪುಟ್ಟ ಕಾರಿನಲ್ಲಿ ಬರುತ್ತದೆ. ಇದರ ಜೊತೆಗೆ ಡೋಲು ಬಾರಿಸುತ್ತ ಇವರ ಮನೆಯವರು ಬಹಳಷ್ಟು ಸಂಭ್ರಮಿಸುತ್ತಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗುತ್ತಿದ್ದು, ನೆಟ್ಟಿಗರು ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
