ಗೋ ಗ್ರೀನ್ ಅಭಿಯಾನ ಕುರಿತು ನಮ್ಮ RCB ತಂಡ ಪ್ರತಿ ವರ್ಷ ಒಂದು ಪಂದ್ಯದಲ್ಲಿ ಗ್ರೀನ್ ಜೆರ್ಸಿ ಧರಿಸುವ ಮೂಲಕ ಜಾಗೃತೆ ಮೂಡಿಸುತ್ತಿದ್ದರು. ಇದೀಗ BCCI ಈ ಅಭಿಯಾನಕ್ಕೆ ಮತ್ತಷ್ಟು ಹೆಚ್ಚು ಮಹತ್ವವನ್ನು ಕೊಡುವ ಮೂಲಕ ಈ ಬಾರಿಯ ಪ್ಲೇಆಫ್ ಪಂದ್ಯದಲ್ಲಿ ಪ್ರತಿ ಡಾಟ್ ಬಾಲಿಗೆ 500 ಗಿಡಗಳನ್ನು ನೆಡುವುದಾಗಿ ಘೋಷಿಸಿದ್ದಾರೆ.
ಕ್ರಿಕೆಟ್ ಮಂಡಳಿಯಲ್ಲಿ ಅತ್ಯಂತ ಶ್ರೀಮಂತ ಮಂಡಳಿ ಎಂದರೆ ಅದು BCCI. ಇದೀಗ ಹಸಿರು ಸಂರಕ್ಷಣೆಗೆ ಒತ್ತು ನೀಡುವ ಉದ್ದೇಶದಿಂದ ಬಿಸಿಸಿಐ ಐಪಿಎಲ್ ಪ್ಲೇ-ಆಫ್ ಪಂದ್ಯಗಳಲ್ಲಿ ದಾಖಲಾಗುವ ಪ್ರತಿ ಡಾಟ್ ಬಾಲ್‌ಗೆ 500 ಗಿಡಗಳನ್ನು ನೆಡಲು ಬಿಸಿಸಿಐ ಯೋಜಿಸಿದೆ. ಇದೇ ಕಾರಣಕ್ಕೆ ಪ್ರತಿ ಬಾರಿ ಬೌಲರ್ ಡಾಟ್ ಬಾಲ್ ಎಸೆದಾಗ ಟೀವಿ ಸ್ಕೋರ್ ಪಟ್ಟಿಯಲ್ಲಿ ಮರದ ಚಿತ್ರವನ್ನು ತೋರಿಸಲಾಗುತ್ತಿದೆ. ಜೊತೆಗೆ ಎಷ್ಟುಡಾಟ್ ಬಾಲ್‌ಗಳು ದಾಖಲಾಗಿವೆ ಎನ್ನುವ ಅಂಕಿ-ಅಂಶಗಳನ್ನೂ ಪ್ರದರ್ಶಿಸಲಾಗುತ್ತಿದೆ.
ಆದರೆ BCCI ಗಿಡಗಳನ್ನು ಯಾವ ನಗರದಲ್ಲಿ ಅಥವಾ ಯಾವ ಪ್ರದೇಶದಲ್ಲಿ ನೆಡಲಿದೆ ಎಂಬುದನ್ನು ತಿಳಿಸಿಲ್ಲ. ಆದರೆ BCCI ಅವರ ಈ ಯೋಜನೆಗೆ ಎಲ್ಲ ಕಡೆ ಬಾರಿ ಮೆಚ್ಚುಗೆ ವ್ಯಕ್ತವಾಗಿದೆ. ಇದಲ್ಲದೆ ನೆನ್ನೆ ನಡೆದ ಪಂದ್ಯದಲ್ಲಿ ಒಟ್ಟು 84 ಡಾಟ್ ಬಾಲ್‌ಗಳನ್ನು ಹಾಕಲಾಗಿದ್ದು, ಒಟ್ಟಾರೆ 42,000 ಗಿಡಗಳನ್ನು ಬಿಸಿಸಿಐ ನಡಲಿದೆ. ಹೀಗಾಗಿ ಇನ್ನು ಎಲಿಮಿನೇಟರ್, ಎರಡನೇ ಕ್ವಾಲಿಫೈಯರ್ ಹಾಗೂ ಫೈನಲ್ ಪಂದ್ಯಗಳಿದ್ದು, ಈ ಪಂದ್ಯದಲ್ಲಿ ಎಷ್ಟು ಡಾಟ್ ಬಾಲ್ ಬರುತ್ತದೆ ಎಂಬುದು ಕುತೂಹಲಕಾರಿ ಸಂಗತಿಯಾಗಿದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
