IPL 2023 ರ ಮೊದಲ ಫೈನಲ್ ತಂಡವಾಗಿ ಚೆನ್ನೈ ಪ್ರವೇಶಿಸಿದೆ. ಗುಜರಾತ್ ವಿರುದ್ಧ ನಡೆದ ಮೊದಲ ಕ್ವಾಲಿಫೈರ್ ಪಂದ್ಯದಲ್ಲಿ 15 ರನ್ ಗಳಲ್ಲಿ ಜಯಿಸಿ ಫೈನಲ್ ತಲುಪಿದೆ. ಇವೆಲ್ಲದರ ನಡುವೆ ಇದೀಗ CSK ತಂಡದ ನಾಯಕ ಎಂ. ಎಸ್ ಧೋನಿ ವಿರುದ್ಧ ಮೋಸದ ಆರೋಪ ಕೇಳಿ ಬರುತ್ತಿದೆ.
ಗುಜರಾತ್ ಇನ್ನಿಂಗ್ಸ್ ನ 16ನೇ ಓವರ್ ಅನ್ನು ಬೌಲ್ ಮಾಡಲು ಮಥೀಶ ಪತಿರನ ಸಿದ್ಧಗೊಳ್ಳುತ್ತಿದ್ದಾಗ ಅಂಪೈರ್ ಅನಿಲ್ ಚೌಧರಿ ಪತಿರನ ಅವರನ್ನು ತಡೆದರು. ಆಗ ಲೆಗ್ ಅಂಪೈರ್ ಕ್ರಿಸ್ ಗ್ಯಾಫನಿ ಬಳಿ ತೆರಳಿದ ಧೋನಿ ವಿಷಯ ಏನೆಂದು ವಿಚಾರಿಸಿದರು. ಪತಿರನ ತಮ್ಮ ಮೊದಲ ಓವರ್ ಬೌಲ್ ಮಾಡಿದ ಬಳಿಕ 9 ನಿಮಿಷ ಮೈದಾನದಿಂದ ಹೊರಗಿದ್ದರು. ನಿಯಮದ ಪ್ರಕಾರ ಆಟದ ಮಧ್ಯೆ ಆಟಗಾರ ಮೈದಾನ ತೊರೆದರೆ, ಎಷ್ಟು ಸಮಯ ಹೊರಗಿದ್ದರೋ ಅಷ್ಟು ಸಮಯ ಕಳೆದ ಬಳಿಕವಷ್ಟೇ ಬೌಲ್ ಮಾಡಬಹುದು. ಪತಿರನ ಬೌಲ್ ಮಾಡಬೇಕಿದ್ದರೆ ಇನ್ನೂ 4 ನಿಮಿಷವಾಗಬೇಕಿತ್ತು.
Dhoni held on to discuss with the umpire just to ensure that Pathirana would bowl that over, despite knowing that it would result in a slow over rate.
This has to be one of the mastermind moment in the game of cricket #CSKvsGT #msd #Dhoni #MSDhoni #pathirana #CSK pic.twitter.com/5iFBZqA2XJ— asviranjith (@asviranjith1605) May 23, 2023
ಇದಕ್ಕೆ ಧೋನಿ, ಈಗಾಗಲೇ ಚಹರ್, ಜಡೇಜಾ, ತೀಕ್ಷಣ ತಲಾ 4 ಓವರ್ ಮುಗಿಸಿದ್ದಾರೆ. ಉಳಿದಿರುವುದು ತುಷಾರ್ ದೇಶಪಾಂಡೆ ಮಾತ್ರ. ಅವರ 2 ಓವರ್, ಪತಿರನ ಅವರದ್ದು 3 ಓವರ್ ಬಾಕಿ ಇದೆ. ತಂಡದಲ್ಲಿರುವ ಮತ್ತೊಂದು ಬೌಲಿಂಗ್ ಆಯ್ಕೆ ಎಂದರೆ ಅದುಮೋಯಿನ್ ಅಲಿ. ಇದಲ್ಲದೆ 30 ಎಸೆತದಲ್ಲಿ ಟೈಟಾನ್ಸ್‌ಗೆ ಗೆಲ್ಲಲು 71 ರನ್ ಬೇಕಿದೆ. ವಿಜಯ್ ಶಂಕರ್, ರಶೀದ್ ಖಾನ್ ಇಬ್ಬರು ಬಲಗೈ ಬ್ಯಾಟರ್‌ಗಳು ಆಡುತ್ತಿರುವಾಗ ಬಲಗೈ ಸ್ಪಿನ್ನರ್‌ನನ್ನು ದಾಳಿಗಿಳಿಸುವ ರಿಸ್ಕ್ ತೆಗೆದುಕೊಳ್ಳಲು ಇಷ್ಟವಿರಲಿಲ್ಲ. 4 ನಿಮಿಷ ಮಾಡನಾಡುತ್ತಲೇ ಕಳೆಯೋಣ ಎಂದು ಅಂಪೈರ್‌ಗಳಿಗೆ ಮನವರಿಕೆ ಮಾಡಿದರು ಎನ್ನಲಾಗಿದೆ.
ಇದಲ್ಲದೆ ನಿಯಮದ ಪ್ರಕಾರ ಫೀಲ್ಡಿಂಗ್ ಮಾಡುತ್ತಿರುವ ತಂಡ ಉದ್ದೇಶಪೂರ್ವಕವಾಗಿ ಸಮಯ ವ್ಯರ್ಥ ಮಾಡಿದರೆ 5 ರನ್ ದಂಡ ಹಾಕಬೇಕು. ಆದರೆ ಅಂಪೈರ್ ಕಡೆ ಇಂದ ಇದು ಕೂಡ ಆಗಿಲ್ಲ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಯಾವ ಬೌಲರ್‌ನಿಂದಾಗಿ ಆಟ ವಿಳಂಬವಾಗುತ್ತಿದೆಯೋ ಆತನನ್ನು ಬೌಲಿಂಗ್ ಮಾಡದಂತೆ ಸೂಚಿಸಿ ಹೊರಹಾಕಲಿಸುವ ನಿರ್ಧಾರ ಅಂಪೈರ್ ಕೈಯಲ್ಲಿದೆ. ಆದರೆ ಧೋನಿಯ ವಿಚಾರದಲ್ಲಿ ಅಂಪೈರ್‌ಗಳು ಮೃದು ಧೋರಣೆ ತೋರಿದರೆ ಎಂಬ ಚರ್ಚೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗುತ್ತಿದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
