fbpx
ಸಮಾಚಾರ

ಕಪ್ಪು ಪಟ್ಟಿ ಧರಿಸಿ ಕಣ್ಕಕ್ಕಿಳಿದ ಭಾರತ-ಆಸೀಸ್​ ಪ್ಲೇಯರ್ಸ್​​! ಕಾರಣ ಗೊತ್ತಾ?

ಓವಲ್‌ನಲ್ಲಿ 2023ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಭಾರತವು ಆಸ್ಟ್ರೇಲಿಯಾವನ್ನು ಎದುರಿಸುತ್ತಿದೆ. ಪ್ಯಾಟ್ ಕಮಿನ್ಸ್ ನೇತೃತ್ವದ ತಂಡದ ವಿರುದ್ಧ ಭಾರತ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಟಾಸ್ ಬಳಿಕ ಉಭಯ ತಂಡಗಳು ಮೈದಾನಕ್ಕೆ ಹೊರಡುತ್ತಿದ್ದಂತೆ ಭಾರತ ಮತ್ತು ಅಸ್ತ್ರಲಿಯಾ ತಂಡದ ಆಟಗಾರರು ಕೈಗೆ ಕಪ್ಪು ಪಟ್ಟಿ ಧರಿಸಿ ಗಮನ ಸೆಳೆದರು.

ಒಡಿಶಾ ರೈಲು ದುರಂತದಲ್ಲಿ ಮಡಿದವರಿಗೆ ಶ್ರದ್ಧಾಂಜಲಿ ಸಲ್ಲಿಸಲು ಭಾರತೀಯ ಆಟಗಾರರು ತೋಳುಪಟ್ಟಿ ಧರಿಸುತ್ತಿದ್ದಾರೆ ಎಂದು ಘೋಷಿಸಲಾಯಿತು. ಅತ್ಯಂತ ದುರಂತ ಅಪಘಾತಗಳಲ್ಲಿ 250 ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡರು ಮತ್ತು ಸಾವಿರಾರು ಪ್ರಯಾಣಿಕರು ಗಾಯಗೊಂಡಿದ್ದರು.

 

 

ಅದಲ್ಲದೆ ಭಾರತದಲ್ಲಿ ನಡೆದ ಒಡಿಶಾ ರೈಲು ದುರಂತದಲ್ಲಿ ಸಾವನ್ನಪ್ಪಿದವರಿಗಾಗಿ ಉಭಯ ದೇಶದ ಆಟಗಾರರು ರಾಷ್ಟ್ರಗೀತೆ ಹೇಳುವ ಮುನ್ನ ಒಂದು ಕ್ಷಣ ಮೌನವನ್ನು ಆಚರಿಸಿದ್ದಾರೆ. ಇದಲ್ಲದೇ, ಒಡಿಶಾ ರೈಲು ದುರಂತದಲ್ಲಿ ಮೃತರಾದವರ ನೆನಪಿಗಾಗಿ ಭಾರತೀಯ ಕ್ರಿಕೆಟ್ ತಂಡವು ಒಂದು ಕ್ಷಣ ಮೌನವನ್ನು ಆಚರಿಸಿ ಸಂತಾಪ ವ್ಯಕ್ತಪಡಿಸಿದೆ. ಸಂತ್ರಸ್ತರೊಂದಿಗೆ ನಾವಿದ್ದೇವೆ ಎಂಬ ಸೂಚಕವಾಗಿ ಟೀಂ ಇಂಡಿಯಾ ಮತ್ತು ಆಸೀಸ್​ ಕಪ್ಪು ಪಟ್ಟಿಗಳನ್ನು ಧರಿಸಿ ಆಡುತ್ತಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top