fbpx
ಸಮಾಚಾರ

ಜೂನ್ 08: ನಾಳೆಯ ಪಂಚಾಂಗ ಮತ್ತು ದಿನ ಭವಿಷ್ಯ

ಜೂನ್ 8, 2023 ಗುರುವಾರ
ವರ್ಷ : 1945, ಶೋಭಾಕೃತ
ತಿಂಗಳು : ಜ್ಯೇಷ್ಠ, ಪಕ್ಷ : ಕೃಷ್ಣಪಕ್ಷ

Panchangam
ತಿಥಿ : ಪಂಚಮೀ : Jun 07 09:51 pm – Jun 08 06:59 pm; ಷಷ್ಠೀ : Jun 08 06:59 pm – Jun 09 04:21 pm
ನಕ್ಷತ್ರ : ಶ್ರವಣ: Jun 07 09:02 pm – Jun 08 06:59 pm; ಧನಿಷ್ಠ: Jun 08 06:59 pm – Jun 09 05:09 pm
ಯೋಗ : ಇಂದ್ರ: Jun 07 10:23 pm – Jun 08 06:59 pm; ವೈಧೃತಿ: Jun 08 06:59 pm – Jun 09 03:46 pm
ಕರಣ : ಕುಲವ: Jun 07 09:51 pm – Jun 08 08:23 am; ತೈತುಲ: Jun 08 08:23 am – Jun 08 06:59 pm; ಗರಿಜ: Jun 08 06:59 pm – Jun 09 05:38 am; ವಾಣಿಜ: Jun 09 05:38 am – Jun 09 04:21 pm

Time to be Avoided
ರಾಹುಕಾಲ : 1:54 PM to 3:29 PM
ಯಮಗಂಡ : 5:56 AM to 7:31 AM
ದುರ್ಮುಹುರ್ತ : 10:11 AM to 11:02 AM, 03:16 PM to 04:07 PM
ವಿಷ : 10:40 PM to 12:09 AM
ಗುಳಿಕ : 9:07 AM to 10:43 AM

Good Time to be Used
ಅಮೃತಕಾಲ : 09:28 AM to 10:56 AM
ಅಭಿಜಿತ್ : 11:53 AM to 12:44 PM

Other Data
ಸೂರ್ಯೋದಯ : 5:56 AM
ಸುರ್ಯಾಸ್ತಮಯ : 6:40 PM

 

 

 

ಮೇಷ (Mesha)

ತಪ್ಪು ಮಾಡಿ ಪಶ್ಚಾತ್ತಾಪ ಪಡುವುದು ಒಳ್ಳೆಯ ಲಕ್ಷ ಣ. ಆದರೆ ಮಾಡಿದ ತಪ್ಪನ್ನೇ ಪುನಃ ಪುನಃ ಮಾಡುತ್ತಿದ್ದರೆ ನಿಮ್ಮನ್ನು ಯಾರೂ ಕ್ಷ ಮಿಸಲಾರರು. ಆದಷ್ಟು ಸೇಡಿನ ಮನೋಭಾವ ಬಿಟ್ಟು ವಿಶಾಲ ಹೃದಯದೊಂದಿಗೆ ಬೆರೆಯಿರಿ.

ವೃಷಭ (Vrushabh)


ನಿಮ್ಮ ಕ್ಷ ಣಕಾಲದ ಸುಖಕ್ಕಾಗಿ ಮಹತ್ತರ ಯೋಜನೆಯಿಂದ ವಿಮುಖರಾಗುವಿರಿ. ಅದರಿಂದ ಮುಂದೆ ಹಾನಿ ಆಗುವುದು. ಹಾಗಾಗಿ ತಾತ್ಕಾಲಿಕ ಸುಖದ ಕಡೆ ಗಮನ ಕೊಡದೆ ಕಠಿಣ ಪ್ರಸಂಗವನ್ನು ಸವಾಲಾಗಿ ಸ್ವೀಕರಿಸಿ.

ಮಿಥುನ (Mithuna)


ಆತ್ಮವಿಶ್ವಾಸ, ಹೃದಯ ಶ್ರೀಮಂತಿಕೆಗಳ ಜೊತೆ ಪರರನ್ನು ಸುಧಾರಿಸಿಕೊಂಡು ಮುನ್ನಡೆಯಿರಿ. ಇದರಿಂದ ಸಮಾಜದಲ್ಲಿ ಅಧಿಕ ಮನ್ನಣೆ ಗಳಿಸುವಿರಿ. ಹಣಕಾಸಿನ ದಾರಿ ತನ್ನಿಂದ ತಾನೇ ತೆರೆದುಕೊಳ್ಳುವುದು.

ಕರ್ಕ (Karka)


ವಿರೋಧಿಗಳು ನಿಮ್ಮನ್ನು ಭೂತಕನ್ನಡಿ ಮೂಲಕ ಗಮನಿಸುತ್ತಿದ್ದಾರೆ. ನೀವು ಮಾಡುವ ಸಣ್ಣ ತಪ್ಪನ್ನೇ ದೊಡ್ಡದು ಎಂದು ಪ್ರಚಾರ ಮಾಡುವ ವಿಕೃತ ಮನಸ್ಸಿನವರನ್ನು ಎದುರಿಸಬೇಕಾಗುವುದು. ವೈಯಕ್ತಿಕ ದೌರ್ಬಲ್ಯಗಳನ್ನು ಮೆಟ್ಟಿ ನಿಲ್ಲಿ.

ಸಿಂಹ (Simha)


ವೃಥಾ ಮಿಥ್ಯಾರೋಪಗಳನ್ನು ಮಾಡಿ ಮನಸ್ಸಿನ ಸಂತೋಷ ಕೆಡಿಸುವ ಜನರಿರುತ್ತಾರೆ. ಆದರೆ ಪೂರ್ವ ಪುಣ್ಯಸ್ಥಾನದಲ್ಲಿ ಗುರು ಸಂಚಾರದಿಂದಾಗಿ ಎಲ್ಲೆಡೆ ನಿಮ್ಮ ಮಾತಿಗೆ ಬೆಲೆ ಬರುವುದರಿಂದ ಮಿಥ್ಯಾರೋಪಗಳಿಗೆ ಬೆಲೆ ನೀಡದಿರಿ.

ಕನ್ಯಾರಾಶಿ (Kanya)


ಅನುಭವವಿಲ್ಲದಿರುವ ಕಾರ್ಯಕ್ಷೇತ್ರಕ್ಕೆ ಧುಮುಕಿ ಮನಸ್ಸಿನ ಶಾಂತತೆಯನ್ನು ಹಾಳು ಮಾಡಿಕೊಳ್ಳದಿರಿ. ಸದ್ಯಕ್ಕೆ ಇರುವ ನೌಕರಿ ನಿಮಗೆ ವಿರುದ್ಧವಾಗಿದ್ದಲ್ಲಿ ಬೇರೆ ನೌಕರಿಯನ್ನು ಹೊಂದುವಿರಿ. ತಾಯಿಯ ಆರೋಗ್ಯದಲ್ಲಿ ಸುಧಾರಣೆ ಕಂಡುಬರುವುದು.

ತುಲಾ (Tula)


ಅನೇಕ ರೀತಿಯ ವಾಣಿಜ್ಯದ ವಿಚಾರಗಳನ್ನು ಪೂರ್ಣವಾಗಿ ತಿಳಿದುಕೊಳ್ಳದೆ ಅದರ ಅನುಕರಣೆ ಮತ್ತು ಅನುಷ್ಠಾನಕ್ಕೆ ತರುವುದರಿಂದ ತೊಂದರೆ ಎದುರಿಸುವಿರಿ. ನೀವು ಆಡುವ ಮಾತಿನಿಂದಲೇ ವೈರತ್ವವನ್ನು ಕಂಡುಕೊಳ್ಳುವಿರಿ. ತಾಳ್ಮೆ ಇರಲಿ.

ವೃಶ್ಚಿಕ (Vrushchika)


ನಿಮ್ಮ ಅವಿರತವಾದ ಪ್ರಯತ್ನಶೀಲತೆಯಿಂದ ಕಾರ್ಯ ಸಿದ್ಧಿಸುವುದು. ಇದರಿಂದ ಮೇಲಧಿಕಾರಿಗಳ ಮೆಚ್ಚುಗೆಗೆ ಪಾತ್ರರಾಗುವಿರಿ. ಆಂಜನೇಯ ಸ್ತೋತ್ರವನ್ನು ಪಠಿಸಿ ಮತ್ತು ದೇವಿ ಆರಾಧನೆ ಮಾಡುವುದು ಒಳ್ಳೆಯದು.

ಧನು ರಾಶಿ (Dhanu)


ನಿಮ್ಮ ಸಹನ ಶೀಲತೆ, ಚಾತುರ್ಯಗಳಿಗೆ ಎಲ್ಲರೂ ಬೆರಗಾಗುತ್ತಾರೆ ಇದರಿಂದ ನಿಮಗೆ ಸಮಾಧಾನ ಉಂಟಾಗುವುದು. ಬಹುದಿನಗಳಿಂದ ಕಾಡುತ್ತಿದ್ದ ಆಂತರಿಕ ಮತ್ತು ಬಾಹ್ಯದ ತೊಂದರೆಗಳು ನಿವಾರಣೆ ಆಗುವವು.

ಮಕರ (Makara)


ನಿಮ್ಮ ಸಲಹೆ ಸೂಚನೆಗಳನ್ನು ನಿಮ್ಮ ಕೈಕೆಳಗಿನವರು ಪಾಲಿಸುವುದಿಲ್ಲ ಎಂಬ ಕೊರಗು ನಿಮ್ಮನ್ನು ಕಾಡುವುದು. ಗ್ರಹಗಳು ಕೆಟ್ಟಾಗ ಮನೆಮಂದಿಯೇ ಆದರಿಸುವುದಿಲ್ಲ. ಹಾಗಾಗಿ ಈ ಸತ್ಯವನ್ನು ತಿಳಿದು ತಾಳ್ಮೆಯಿಂದ ಇರುವುದು ಒಳ್ಳೆಯದು.

ಕುಂಭರಾಶಿ (Kumbha)


ನಿಮ್ಮ ಮಾತಿನ ಶಕ್ತಿಗೆ ದೈವದ ಸಹಾಯವಿದೆ. ಹಾಗಾಗಿ ನೀವು ಎಲ್ಲೆಡೆ ವಿಜೃಂಭಿಸುವಿರಿ. ಬರಬೇಕಾದ ಹಣವು ವಿವಿಧ ಮೂಲಗಳಿಂದ ನಿಮ್ಮ ಕೈಸೇರುವುದು. ಮಾತಾಪಿತರ ಆರೋಗ್ಯದ ಕಡೆ ಗಮನ ಕೊಡಿ.

ಮೀನರಾಶಿ (Meena)


ಆಪ್ತರು ಅನಿರೀಕ್ಷಿತವಾಗಿ ನಿಮ್ಮನ್ನು ಭೇಟಿ ಮಾಡಲಿದ್ದಾರೆ ಮತ್ತು ಒಂದು ಮಹತ್ತರ ಕಾರ್ಯಕ್ಕಾಗಿ ಆಪ್ತ ಸಮಾಲೋಚನೆ ನಡೆಸುವರು. ಅವರು ಕೊಡಮಾಡುವ ಸಲಹೆಯನ್ನು ನೀವು ಪಾಲಿಸುವುದರಿಂದ ಇನ್ನು ಹೆಚ್ಚಿನ ಅನುಕೂಲಗಳು ಕಂಡು ಬರುತ್ತವೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top