ದೆಹಲಿಯ ಕೌಟುಂಬಿಕ ನ್ಯಾಯಾಲಯವು ಕ್ರಿಕೆಟಿಗ ಶಿಖರ್ ಧವನ್ ಅವರ ವಿಚ್ಛೇದಿತ ಪತ್ನಿ ಏಶಾ ಮುಖರ್ಜಿ ಅವರಿಗೆ ತಮ್ಮ ಒಂಬತ್ತು ವರ್ಷದ ಮಗ ಜೋರಾವರ್ ಅವರನ್ನು ಭಾರತಕ್ಕೆ ಕರೆತರುವಂತೆ ಆದೇಶಿಸಿದೆ. ಮಗುವಿನ ಮೇಲೆ ತಾಯಿಗೆ ವಿಶೇಷ ಹಕ್ಕು ಇಲ್ಲ ಎಂದು ನ್ಯಾಯಾಲಯ ಒತ್ತಿ ಹೇಳಿದೆ.
ಧವನ್ ಅವರ ಜೊತೆಗೆ ವೈವಾಹಿಕ ಜೀವನಕ್ಕೆ ವಿಚೇದನ ಪಡೆದ ನಂತರ ಆಯೇಷಾ ಅವರು ತಮ್ಮ ಮಗುವಿನ ಜೊತೆ ಆಸ್ಟ್ರೇಲಿಯಾದಲ್ಲಿ ನೆಲೆಸಿದ್ದಾರೆ. ಅಲ್ಲದೆ ಧವನ್ ಅವರಿಗೆ ಮಗುವನ್ನು ಭೇಟಿಯಾಗಲು ಅವಕಾಶ ನೀಡಿಲ್ಲವಂತೆ. ಆ ಕಾರಣಕ್ಕಾಗಿ ಧವನ್ ಅವರು ದೆಹಲಿ ಕೌಟುಂಬಿಕ ಕೋರ್ಟ್ ಮೊರೆ ಹೋಗಿದ್ದರು. ಇದೀಗ ಕೋರ್ಟ್ ಧವನ್ ಅವರ ವಿಚ್ಛೇದಿತ ಪತ್ನಿ ಏಶಾ ಮುಖರ್ಜಿ ಅವರಿಗೆ ಛೀಮಾರಿ ಹಾಕಿದೆ.
2020ರ ಆಗಸ್ಟ್ ತಿಂಗಳಿನಿಂದ ತಮ್ಮ ಮಗುವನ್ನು ನೋಡಿಲ್ಲ ಎಂದು ಶಿಖರ್ ಧವನ್ ಅವರ ಕುಟುಂಬ ನ್ಯಾಯಾಲಯಕ್ಕೆ ತಿಳಿಸಿತ್ತು. ಭಾರತದಲ್ಲಿರುವ ಧವನ್ ಅವರ ಮನೆ ಮತ್ತು ಸಂಬಂಧಿಕರು ತಮ್ಮ ಪುತ್ರನಿಗೆ ಪರಿಚಯವಿಲ್ಲ ಎಂದು ವಿಚ್ಛೇದಿತ ಪತ್ನಿ ಮುಖರ್ಜಿ ಹೇಳಿದ್ದರು. ಆದರೆ, ಇದನ್ನು ನ್ಯಾಯಾಧೀಶರು ಅಲ್ಲಗೆಳೆದರು. ಕೊನೆಗೆ ಪುತ್ರನನ್ನು ಭೇಟಿಯಾಗಲು ಮೊದಲಿಗೆ ಜೂನ್ 17 ರಂದು ದಿನಾಂಕ ನಿಗದಿಪಡಿಸಲಾಗಿತ್ತು. ಆದರೆ ಮಗನ ಶಾಲೆ ತಪ್ಪಿಸಿಕೊಳ್ಳಬೇಕಾಗುತ್ತದೆ ಎಂಬ ಕಾರಣ ನೀಡಿ ನಿರಾಕರಿಸಿದ್ದರು. ಇದೀಗ ಶಾಲೆಯ ರಜೆ ದಿನಗಳಲ್ಲಿ ತಮ್ಮ ಮಗನನ್ನು ಶಿಖರ್ ಧವನ್ ಸ್ವಲ್ಪ ದಿನಗಳ ಕಾಲ ಭಾರತಕ್ಕೆ ಕರೆದೊಯ್ಯಬಹುದು ಎಂದು ನ್ಯಾಯಾಲಯ ಆದೇಶ ನೀಡಿದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
