ಜೂನ್ 16, 2023 ಶುಕ್ರವಾರ
ವರ್ಷ : 1945, ಶೋಭಾಕೃತ
ತಿಂಗಳು : ಜ್ಯೇಷ್ಠ, ಪಕ್ಷ : ಕೃಷ್ಣಪಕ್ಷ
Panchangam
ತಿಥಿ : ತ್ರಯೋದಶೀ : Jun 15 08:32 am – Jun 16 08:40 am; ಚತುರ್ದಶೀ : Jun 16 08:40 am – Jun 17 09:11 am
ನಕ್ಷತ್ರ : ಕೃತಿಕೆ: Jun 15 02:12 pm – Jun 16 03:07 pm; ರೋಹಿಣಿ: Jun 16 03:07 pm – Jun 17 04:25 pm
ಯೋಗ : ಧೃತಿ: Jun 16 02:02 am – Jun 17 01:22 am; ಶೂಲ: Jun 17 01:22 am – Jun 18 01:01 am
ಕರಣ : ವಾಣಿಜ: Jun 15 08:33 pm – Jun 16 08:40 am; ವಿಷ್ಟಿ: Jun 16 08:40 am – Jun 16 08:53 pm; ಶಕುನಿ: Jun 16 08:53 pm – Jun 17 09:12 am
Time to be Avoided
ರಾಹುಕಾಲ : 10:44 AM to 12:20 PM
ಯಮಗಂಡ : 3:31 PM to 5:07 PM
ದುರ್ಮುಹುರ್ತ : 08:30 AM to 09:21 AM, 12:45 PM to 01:36 PM
ವಿಷ : 07:59 AM to 09:40 AM
ಗುಳಿಕ : 7:33 AM to 9:08 AM
Good Time to be Used
ಅಮೃತಕಾಲ : 12:37 PM to 02:17 PM
ಅಭಿಜಿತ್ : 11:54 AM to 12:45 PM
Other Data
ಸೂರ್ಯೋದಯ : 5:57 AM
ಸುರ್ಯಾಸ್ತಮಯ : 6:42 PM
ಮೇಷ (Mesha)
ನಿಮ್ಮ ಮಕ್ಕಳು ಆರೋಗ್ಯ ಸಮಸ್ಯೆಗಳನ್ನು ಹೊಂದಬಹುದು. ನಿಮ್ಮ ಪ್ರೇಮ ಜೀವನದಲ್ಲಿ ಉತ್ತಮ. ಸಮತೋಲನ ಕಾಯ್ದುಕೊಳ್ಳಿ, ವಹಿವಾಟು ನಡೆಸುವ ವ್ಯಕ್ತಿಗಳು ತಮ್ಮ ಸುತ್ತ ನಡೆಯುವ ಚಟುವಟಿಕೆಗಳ ಬಗ್ಗೆ ಎಚ್ಚರ ವಹಿಸಬೇಕು.
ವೃಷಭ (Vrushabha)
ಹಣಕಾಸಿನ ಮುಗ್ಗಟ್ಟು ಟೀಕೆ ಮತ್ತು ವಾದಗಳಿಗೆ ಕಾರಣವಾಗಬಹುದು , ನಿಮ್ಮಿಂದ ಬಹಳಷ್ಟು ನಿರೀಕ್ಷಿಸುವವರಿಗೆ ಇಲ್ಲ ಎಂದು ಹೇಳಲು ಸಿದ್ಧರಾಗಿರಿ, ನಿಮ್ಮ ಹಿರಿಯನ್ನು ಲಘುವಾಗಿ ತೆಗೆದುಕೊಳ್ಳಬೇಡಿ.
ಮಿಥುನ (Mithuna)
ಬಾಳಸಂಗಾತಿಯೊಡನೆ ಜಗಳ , ಮನಸ್ತಾಪ ಬೇಡ. ನಿಮ್ಮ ಸಮಸ್ಯೆಗಳನ್ನು ಬಹಿರಂಗವಾಗಿ ಆಕೆಗೆ ತಿಳಿಸಿ. ಸದ್ಯದ ಪರಿಸ್ಥಿತಿಯ ನೈಜ ದರ್ಶನ ಮಾಡಿಸಿರಿ. ನೀವು ಆರಂಭಿಸಿದ ಎಲ್ಲವೂ ಸರಿಯಾದ ಸಮಯಕ್ಕೆ ನಡೆಯುತ್ತದೆ. ನಿಮ್ಮ ಎಲ್ಲ ಚಿಂತೆಗಳೂ ನಿವಾರಣೆಯಾಗುತ್ತವೆ.
ಕರ್ಕ (Karka)
ನೀವು ವಿವಾದಗಳು ಮತ್ತು ಸಂಘರ್ಷಗಳಿಂದ ದೂರವಿರಬೇಕು. ಇದರಿಂದ ನಿಮಗೆ ಆರ್ಥಿಕ ನಷ್ಟವಾಗುತ್ತದೆ, ನಿಮ್ಮ ಬಯಕೆಗಳು ಪುಣ್ಯ ಹಾಗೂ ಧಾರ್ಮಿಕ ಕಾರ್ಯಗಳಿಂದ ಹೆಚ್ಚಾಗುತ್ತವೆ. ಸಮಾಜ, ಕುಟುಂಬ ಮತ್ತು ನಿಮ್ಮ ಕೌಶಲ್ಯಗಳಿಗೆ ವ್ಯವಹಾರದಿಂದ ಮೆಚ್ಚಿಗೆ ಪಡೆಯುತ್ತವೆ.
ಸಿಂಹ (Simha)
ಆಂಜನೇಯ ಸ್ತೋತ್ರ ಪಠಿಸಿರಿ. ಈದಿನ ಪ್ರಯಾಣದಲ್ಲಿ ತುಸು ಎಚ್ಚರಿಕೆ ಅಗತ್ಯ. ಹಣಕಾಸಿನ ಸ್ಥಿತಿ ಸಾಧಾರಣವಾಗಿರುತ್ತದೆ, ಮ್ಮ ವೈಯಕ್ತಿಕ ವಿಚಾರಗಳಲ್ಲಿ ಹಳೆಯ ಸ್ನೇಹಿತರ ಸಹಕಾರ ದೊರೆಯುವುದು.
ಕನ್ಯಾರಾಶಿ (Kanya)
ಗುರಿ ತಲುಪಲು ಹೊಸ ಅವಕಾಶ ಒದಗಿ ಬರುವುದು. ನೆಚ್ಚಿನ ಸ್ನೇಹಿತರು ಇಂದು ನಿಮಗೆ ಸಹಾಯಕರಾಗಿ ಸೇವೆ ಸಲ್ಲಿಸುವರು. ಆರ್ಥಿಕ ಸ್ಥಿತಿ ಸಾಧಾರಣವಾಗಿರುತ್ತದೆ, ಅವಕಾಶವಾದಿಗಳು, ಹೊಣೆಗೇಡಿಗಳು ನಿಮ್ಮ ಜೊತೆ ಸೇರಿ ನಿಮಗೆ ಅವಮಾನ ಪ್ರಸಂಗಗಳನ್ನು ಹುಟ್ಟುಹಾಕುವ ಸಾಧ್ಯತೆ. ಈ ಬಗ್ಗೆ ಎಚ್ಚರದಿಂದಿರಿ.
ತುಲಾ (Tula)
ನೀವು ಗೌರವವನ್ನು ಗಳಿಸಬಹುದು ಮತ್ತು ವೃತ್ತಿ ಜೀವನವೂ ವೃದ್ಧಿಸಬಹುದು. ನಿಮ್ಮ ಸಾಮಾಜಿಕ ಸ್ಥಿತಿಗತಿಗಳು ಸುಧಾರಿಸಬಹುದು, ವೈವಾಹಿಕ ಖುಷಿ ಹೆಚ್ಚಾಗಬಹುದು. ನಿಮ್ಮ ಜೀವನ ಮುಂದೆ ಸಾಗಿ, ಸನ್ನಿವೇಶಗಳು ನಿಮ್ಮ ಪರವಾಗಿರುತ್ತದೆ ಮತ್ತು ಹಣಕಾಸಿನ ವಿಚಾರದಲ್ಲಿ ನೀವು ಉತ್ತಮವಾಗಿರುವುದನ್ನು ನೀವು ಮನಗಾಣುತ್ತೀರಿ.
ವೃಶ್ಚಿಕ (Vrushchika)
ಅಲಸ್ಯವನ್ನು ನಿವಾರಿಸಿಕೊಳ್ಳಬೇಕು. ನಿಮ್ಮ ಪ್ರಯತ್ನಗಳು ಹೊಸ ಸಾಧ್ಯತೆಗಳನ್ನು ತೆರೆಯಬಹುದು, ನಿಮ್ಮ ವಿರೋಧಿಗಳ ಮೇಲೆ ನೀವು ಯಶಸ್ಸು ಸಾಧಿಸುತ್ತೀರಿ.ಅತಿಯಾಗಿ ಕೆಲಸ ಮಾಡಬೇಡಿ. ಇದರಿಂದ ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು.
ಧನು ರಾಶಿ (Dhanu)
ಜೀವನದಲ್ಲಿ ಕೆಲವು ತಪ್ಪುಗ್ರಹಿಕೆಗಳು ಕಂಡುಬರಬಹುದು. ಇದನ್ನು ನೀವು ನಿವಾರಿಸಬೇಕು, ವಿದ್ಯಾರ್ಥಿಗಳು ಕಠಿಣ ಪರಿಶ್ರಮ ವಹಿಸಬೇಕು ಮತ್ತು ಮಕ್ಕಳು ಸ್ವಲ್ಪ ಕಿರಿಕಿರಿ ಅನುಭವಿಸುತ್ತಾರೆ. ಆದರೆ ನಿಮ್ಮ ಪ್ರೀತಿ ಮತ್ತು ಕಾಳಜಿ ಅವರನ್ನು ಉತ್ತಮಗೊಳಿಸುತ್ತದೆ.
ಮಕರ (Makara)
ಉತ್ತಮ ಫಲಿತಾಂಶಗಳನ್ನು ನೀಡುವ ಅಡ್ಡ ದಾರಿಗಳನ್ನು ನೀವೂ ಹಿಡಿಯಬಹುದು. ಆದರೆ ಅವುಗಳನ್ನು ನಿಲ್ಲಿಸಬೇಕಿರುತ್ತದೆ, ನಿಮ್ಮ ಆರೋಗ್ಯದ ಮೇಲೆ ನೀವು ಮೊದಲ ಆದ್ಯತೆ ನೀಡಬೇಕು , ಪ್ರಯಾಣವೂ ನಿಮಗೆ ಲಾಭ ತಂದು ಕೊಡುತ್ತದೆ. ವ್ಯಾಪಾರಿಗಳಿಗೆ ವ್ಯಾಪಾರ ಲಾಭ ತಂದು ಕೊಡುತ್ತದೆ..
ಕುಂಭರಾಶಿ (Kumbha)
ಅವಿವಾಹಿತರು ಬಂದ ಅವಕಾಶ ಗಳನ್ನು ನಿರಾಕರಿಸದೆ ಮುಂದುವರಿಯುವುದು ಉತ್ತಮ, ಉದ್ಯೋಗಿಗಳಿಗೆ ಹೊಸ ಉದ್ಯೋಗಾವಕಾಶಗಳು ಒದಗಿಬರುವುದು. ಅದೃಷ್ಟವು ನಿಮ್ಮ ಜತೆಗಿದೆ. ಯಾವುದೇ ಕಾರಣಕ್ಕೂ ಬದ್ಧತೆಯನ್ನು ಕಳಕೊಳ್ಳದಿರಿ. ಆರೋಗ್ಯದ ಬಗ್ಗೆ ಗಮನವಿರಲಿ
ಮೀನರಾಶಿ (Meena)
ಸಾಂಸಾರಿಕ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲು ಇದು ಸಕಾಲ.ವೃತ್ತಿರಂಗದಲ್ಲಿ, ಸಾಮಾಜಿಕ ರಂಗದಲ್ಲಿ ಹಿತಶತ್ರುಗಳು ನಿಮ್ಮನ್ನು ದುರುಪಯೋಗಮಾಡಿಕೊಂಡಾರು, ಹಿರಿಯರ ಆರೋಗ್ಯ ಆಗಾಗ ಏರುಪೇರಾಗಿ ಕಿರಿಕಿರಿಯೆನಿಸಬಹುದು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
