fbpx
ಸಮಾಚಾರ

ಜೂನ್ 21: ನಾಳೆಯ ಪಂಚಾಂಗ ಮತ್ತು ದಿನ ಭವಿಷ್ಯ

ಜೂನ್ 21, 2023 ಬುಧವಾರ
ವರ್ಷ : 1945, ಶೋಭಾಕೃತ
ತಿಂಗಳು : ಆಷಾಢ, ಪಕ್ಷ : ಶುಕ್ಲಪಕ್ಷ

Panchangam
ತಿಥಿ : ತೃತೀಯಾ : Jun 20 01:07 pm – Jun 21 03:10 pm; ಚತುರ್ಥೀ : Jun 21 03:10 pm – Jun 22 05:28 pm
ನಕ್ಷತ್ರ : ಪುಷ್ಯ: Jun 20 10:36 pm – Jun 22 01:21 am; ಆಶ್ಲೇಷ: Jun 22 01:21 am – Jun 23 04:18 am
ಯೋಗ : ವ್ಯಾಘಾತ: Jun 21 01:47 am – Jun 22 02:34 am; ಹರ್ಷನ: Jun 22 02:34 am – Jun 23 03:31 am
ಕರಣ : ಗರಿಜ: Jun 21 02:06 am – Jun 21 03:10 pm; ವಾಣಿಜ: Jun 21 03:10 pm – Jun 22 04:17 am; ವಿಷ್ಟಿ: Jun 22 04:17 am – Jun 22 05:28 pm

Time to be Avoided
ರಾಹುಕಾಲ : 12:21 PM to 1:57 PM
ಯಮಗಂಡ : 7:34 AM to 9:09 AM
ದುರ್ಮುಹುರ್ತ : 11:55 AM to 12:46 PM
ವಿಷ : 03:43 PM to 05:31 PM
ಗುಳಿಕ : 10:45 AM to 12:21 PM

Good Time to be Used
ಅಮೃತಕಾಲ : 06:13 PM to 08:00 PM

Other Data
ಸೂರ್ಯೋದಯ : 5:58 AM
ಸುರ್ಯಾಸ್ತಮಯ : 6:44 PM

 

 

 

ಮೇಷ (Mesha)

ಧನಾತ್ಮಕ ಚಿಂತನೆಯಿಂದ ಹಮ್ಮಿಕೊಂಡ ಕಾರ್ಯಗಳಲ್ಲಿ ಯಶಸ್ಸು ಕಾಣುವಿರಿ. ಆರೋಗ್ಯ ಉತ್ತಮವಾಗಿರುವುದು. ಬಂಧುಗಳಿಂದ ಸುವಾರ್ತೆ ಕೇಳುವಿರಿ. ಉದರ ಶೂಲೆಗೆ ಸಂಬಂಧಪಟ್ಟಂತೆ ತೊಂದರೆ ಎದುರಾಗುವ ಸಂಭವ. ಸೂಕ್ತ ವೈದ್ಯರ ಸಲಹೆ ಪಡೆಯಿರಿ.

 

ವೃಷಭ (Vrushabha)

ಸಂಸಾರದಲ್ಲಿ ಏರುಪೇರು ಸಹಜ. ಆದರೆ ಅದೇ ಜೀವನವಲ್ಲ. ಹಾಗಾಗಿ ಇಂದಿನ ಸೋಲು ನಾಳಿನ ಗೆಲುವು ಎಂಬ ವಿಶ್ವಾಸದಿಂದ ಮುನ್ನೆಡೆದಲ್ಲಿ ಒಳಿತಾಗುವುದು. ಮಹತ್ತರ ಕಾರ್ಯಗಳನ್ನು ಮುಂದೂಡಿರಿ. ಹಣವು ನೀರಿನಂತೆ ಖರ್ಚಾಗುವ ಸಾಧ್ಯತೆ.

 

ಮಿಥುನ (Mithuna)

ಈ ದಿನ ನೀವಾಡುವ ಮಾತಿಗೆ ಹೆಚ್ಚು ಬೆಲೆ ಸಿಗುವುದು. ಎಲ್ಲರೂ ನಿಮ್ಮನ್ನು ಕೊಂಡಾಡುವರು. ಮನೋರಥ ಈಡೇರುವುದು. ಕೌಟುಂಬಿಕವಾಗಿ ನೆಮ್ಮದಿಯ ದಿನ. ಬೆಲೆಯುಳ್ಳ ವಸ್ತುಗಳ ಖರೀದಿಗೆ ಮನಸು ಮಾಡುವಿರಿ.

 

ಕರ್ಕ (Karka)

ವ್ಯಾಪಾರಸ್ಥರಿಗೆ ಅಧಿಕ ಲಾಭಾಂಶ ಬರುವುದು. ಧಾರ್ಮಿಕ ವಿಷಯಗಳ ಬಗ್ಗೆ ಸದ್ಭಾವನೆ ಮೂಡುವುದು. ದೈವಾನುಕೂಲತೆಯಿಂದ ಇಚ್ಛಿಸಿದ ಕಾರ್ಯಗಳು ನೆರವೇರುವುದು. ಹಣಕಾಸಿನ ಪರಿಸ್ಥಿತಿ ಉತ್ತಮಗೊಳ್ಳುವುದು.

 

ಸಿಂಹ (Simha)

ಉದಾಸಿನವೇ ಅಧೋಗತಿಗೆ ಮೂಲ ಎಂದರು ಹಿರಿಯರು. ಈ ದಿನ ಕೆಲಸ ಕಾರ್ಯಗಳಲ್ಲಿ ಉದಾಸಿನ ತೋರಿದರೆ ಭಾರಿ ಪ್ರಮಾಣದ ದಂಡ ತೆರಬೇಕಾಗುವುದು. ಸಂಗಾತಿಯ ಸಲಹೆಯನ್ನು ಆಧರಿಸಿ ಕಾರ್ಯಕ್ರಮ ರೂಪಿಸಿಕೊಳ್ಳಿ, ಒಳಿತಾಗುವುದು.

 

ಕನ್ಯಾರಾಶಿ (Kanya)

ಹಮ್ಮಿಕೊಂಡ ಕಾರ್ಯಗಳು ಯಶಸ್ಸಿನತ್ತ ಸಾಗುವವು. ವಾದ ಸ್ಪರ್ಧೆಯಲ್ಲಿ ಜಯ ವಿದ್ಯಾಬುದ್ಧಿಯಲ್ಲಿ ಯಶಸ್ಸು. ಸಮಾಜದಲ್ಲಿ ಮಾನ ಸನ್ಮಾನಗಳು ಏರ್ಪಡುವ ಸಾಧ್ಯತೆ. ಕೆಲವರಿಗೆ ವಿದೇಶ ಪ್ರವಾಸ ಹೋಗುವ ಸಾಧ್ಯತೆ ಇರುವುದು.

 

ತುಲಾ (Tula)

ಸ್ತ್ರೀ ಸಂಬಂಧ ವಿಷಯದಲ್ಲಿ ಅನಗತ್ಯ ಮೂಗು ತೂರಿಸದಿರಿ. ಗಾಳಿಗುದ್ದಿ ಮೈ ನೋಯಿಸಿಕೊಂಡಂತೆ ಈ ದಿನ ವಿಚಾರಗಳಲ್ಲಿ ಹೆಚ್ಚಿನ ಶುಭ ಹೊಂದಲಾಗುವುದಿಲ್ಲ. ಸ್ನೇಹಿತನ ಸಹಕಾರ ಪಡೆಯಿರಿ ಮತ್ತು ಕುಲದೇವತಾ ಪ್ರಾರ್ಥನೆ ಮಾಡಿ.

 

ವೃಶ್ಚಿಕ (Vrushchika)

ಕೋರ್ಟು ಕಚೇರಿ ಕೆಲಸಗಳಲ್ಲಿ ಜಯ ದೊರೆಯುವುದು. ಹಣಕಾಸಿನ ತೊಂದರೆ ಇರುವುದಿಲ್ಲ. ವೃತ್ತಿಪರರಿಗೆ ಸ್ವಲ್ಪ ವಿಶ್ರಾಂತಿಯ ಅಗತ್ಯವಿದೆ. ಹಿರಿಯರ ಸಲಹೆ-ಸಹಕಾರಗಳನ್ನು ಪಡೆಯಿರಿ. ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ.

 

ಧನು ರಾಶಿ (Dhanu)

ಗ್ರಹಗತಿಗಳು ನಿಮ್ಮ ನಡೆಯನ್ನು ಪರೀಕ್ಷಿಸುತ್ತಿರುವವು. ಹಾಗಾಗಿ ನೀವು ಪ್ರತಿಯೊಂದು ಕಾರ್ಯದಲ್ಲೂ ಎಚ್ಚರಿಕೆಯಿಂದ ಇರಿ. ಲೆಕ್ಕಪತ್ರಗಳನ್ನು ಸರಿಯಾಗಿಡಿ. ಇದರಿಂದ ಮೇಲಧಿಕಾರಿಗಳ ಪ್ರೀತಿಗೆ ಪಾತ್ರರಾಗುವಿರಿ. ಆರ್ಥಿಕ ಸ್ಥಿತಿ ಉತ್ತಮವಾಗಿರುವುದು.

 

ಮಕರ (Makara)

ಅಮೂಲ್ಯ ವಸ್ತುವಿನ ಖರೀದಿ-ವಿಕ್ರಯದಿಂದ ಲಾಭವಾಗುವುದು. ವಿರೋಧಿಗಳಿಗೆ ಸೋಲು ಉಂಟಾಗುವುದು. ಆರೋಗ್ಯದ ಕಡೆ ಗಮನ ಹರಿಸುವುದು ಒಳ್ಳೆಯದು ಮತ್ತು ಮಗನ ಭವಿಷ್ಯದ ಕುರಿತು ಚಿಂತೆ ಕಾಡುವುದು. ಗುರುವಿನ ಮೊರೆ ಹೋಗಿ.

 

ಕುಂಭರಾಶಿ (Kumbha)

ಕೆಲವು ಘಟನೆಗಳು ನಿಮ್ಮ ಆಸಕ್ತಿಯನ್ನು ಹೆಚ್ಚಿಸುವ ಸಾಧ್ಯತೆ ಇದೆ. ಮಿತ್ರರ ಸಹಕಾರವೂ ದೊರೆಯಲಿದ್ದು ಈ ಮಂಗಳವಾರ ನಿಮಗೆ ಮಂಗಳವನ್ನು ಉಂಟುಮಾಡುವುದು. ಆರ್ಥಿಕ ಸ್ಥಿತಿ ಉತ್ತಮವಾಗಿರುವುದು.

 

ಮೀನರಾಶಿ (Meena)

ಪರಾಕ್ರಮ ಕೆಲಸ ಕಾರ್ಯಗಳಲ್ಲಿ ಜಯ. ಮಹತ್ವದ ಪತ್ರ ಕೈಸೇರುವುದು. ಉದ್ಯೋಗ-ವ್ಯವಹಾರಗಳಲ್ಲಿ ಉತ್ಕರ್ಷ. ಬಂಧು ಬಳಗದವರ ಭೇಟಿ. ಆರ್ಥಿಕ ಸ್ಥಿತಿ ಉತ್ತಮವಾಗಿರುವುದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top