ಜೂನ್ 22, 2023 ಗುರುವಾರ
ವರ್ಷ : 1945, ಶೋಭಾಕೃತ
ತಿಂಗಳು : ಆಷಾಢ, ಪಕ್ಷ : ಶುಕ್ಲಪಕ್ಷ
Panchangam
ತಿಥಿ : ಚತುರ್ಥೀ : Jun 21 03:10 pm – Jun 22 05:28 pm; ಪಂಚಮೀ : Jun 22 05:28 pm – Jun 23 07:54 pm
ನಕ್ಷತ್ರ : ಆಶ್ಲೇಷ: Jun 22 01:21 am – Jun 23 04:18 am; ಮಖ: Jun 23 04:18 am – Jun 24 07:18 am
ಯೋಗ : ಹರ್ಷನ: Jun 22 02:34 am – Jun 23 03:31 am; ವಜ್ರ: Jun 23 03:31 am – Jun 24 04:31 am
ಕರಣ : ವಿಷ್ಟಿ: Jun 22 04:17 am – Jun 22 05:28 pm; ಬಾವ: Jun 22 05:28 pm – Jun 23 06:41 am
Time to be Avoided
ರಾಹುಕಾಲ : 1:57 PM to 3:33 PM
ಯಮಗಂಡ : 5:58 AM to 7:34 AM
ದುರ್ಮುಹುರ್ತ : 10:13 AM to 11:04 AM, 03:20 PM to 04:11 PM
ವಿಷ : 05:48 PM to 07:36 PM
ಗುಳಿಕ : 9:10 AM to 10:45 AM
Good Time to be Used
ಅಮೃತಕಾಲ : 02:30 AM to 04:18 AM
ಅಭಿಜಿತ್ : 11:55 AM to 12:46 PM
Other Data
ಸೂರ್ಯೋದಯ : 5:58 AM
ಸುರ್ಯಾಸ್ತಮಯ : 6:44 PM
ಕೆಲಸದ ಸ್ಥಳದಲ್ಲಿ ಹೊಸದಾದ ಜವಾಬ್ದಾರಿಗಳು ನಿಮ್ಮನ್ನು ಸುತ್ತಿಕೊಳ್ಳುವ ಸಾಧ್ಯತೆಗಳಿವೆ. ಮಕ್ಕಳು ನಿಮಗೆ ಸಂತೋಷವನ್ನುಂಟು ಮಾಡುವರು. ನಿಮ್ಮ ವೈಯಕ್ತಿಕ ಆರೋಗ್ಯದ ಕಡೆ ಗಮನ ಕೊಡಿ., ಸಾಲ ಬಾಧೆಯ ತೀವ್ರತೆ ಕಡಿಮೆ ಆಗುವುದು.
ಅನೇಕ ದಿನಗಳಿಂದ ಕಾಡುತ್ತಿರುವ ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ದೊರೆಯುವವು. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುತ್ತದೆ. ನಿಮಗೆ ಬರಬೇಕಾದ ಹಣ ಶೀಘ್ರದಲ್ಲಿಯೇ ಕೈಸೇರುವ ಸಾಧ್ಯತೆ ಇರುತ್ತದೆ, ಮನಸ್ಸಿನ ಒತ್ತಡವನ್ನು ಒಬ್ಬರೇ ಮನಸ್ಸಿನಲ್ಲಿಟ್ಟುಕೊಂಡು ಕೊರಗದಿರಿ. ನಿಮ್ಮ ಆತ್ಮೀಯ ಸ್ನೇಹಿತರ ಸಂಗಡ ವಿಚಾರಗಳನ್ನು ಹಂಚಿಕೊಳ್ಳಿ.
ನೀವು ಎದುರಿಸುತ್ತಿರುವ ಸಮಸ್ಯೆಗೆ ಸೂಕ್ತ ಉತ್ತರ ದೊರೆಯುವುದು, ನಿಮ್ಮಿಂದ ಕೆಲಸ ಕಾರ್ಯಗಳನ್ನು ಮಾಡಿಸಿಯೇ ನಿಮಗೆ ಹಣಕಾಸಿನ ಸಹಕಾರ ನೀಡುವರು. ಹಾಗಾಗಿ ಉದಾಸೀನ ತೋರದೆ ಕೆಲಸ ಮಾಡಿ, ಸಂಬಂಧಿಗಳ ಬಳಿ ಹಳೆಯ ವಿಚಾರಗಳನ್ನು ಕೆದಕಲು ಪ್ರಯತ್ನಿಸದಿರಿ.
ವ್ಯಾಪಕ ಬುದ್ಧಿ ಚಾತುರ್ಯದಿಂದ ನಿಮ್ಮ ಬಂಧುಬಾಂಧವರೇ ನಿಮ್ಮ ಸನಿಹಕ್ಕೆ ಬರುವರು. ಆದರೆ ಕುಟಿಲ ಯೋಜನೆಗಳಿಗೆ ಬಲಿಯಾಗದಿರಿ. ಬಹುದಿನದ ನಿಮ್ಮ ಕಾರ್ಯ ಕೈಗೂಡುವುದು. ಅದಕ್ಕಾಗಿ ಹಣವೂ ಖರ್ಚಾಗುವುದು.
ಕೆಲಸ ಕಾರ್ಯಗಳನ್ನು ಸಂಪೂರ್ಣವಾಗಿ ನಿಭಾಯಿಸಲು ಸಾಧ್ಯವಾಗುತ್ತಿಲ್ಲ ಎಂದು ಕೊರಗುತ್ತ ಕೂರದಿರಿ. ಗುರುವಿನ ಮಂತ್ರ ಪಠಿಸಿ. ಆಂಜನೇಯ ಸ್ವಾಮಿ ದೇವಾಲಯಕ್ಕೆ ಹೋಗಿ ಬನ್ನಿ. ಮನಸ್ಸಿಗೆ ಶಾಂತಿ ದೊರಕುವುದು. ಮೌನದಿಂದ ಕಾರ್ಯ ನಿರ್ವಹಿಸಿ.
ವ್ಯಾಪಾರದ ವಿಷಯದಲ್ಲಿ ಅಂತಿಮ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ. ಆದರೆ ನೀವು ಧೈರ್ಯದಿಂದ ಮುಂದೆ ಹೆಜ್ಜೆಯನ್ನು ಇಡಿ. ಕುಲದೇವರ ಆಶೀರ್ವಾದದಿಂದ ನೀವು ಹಮ್ಮಿಕೊಂಡ ಕಾರ್ಯಗಳು ಸುಲಲಿತವಾಗಿ ಆಗುತ್ತದೆ.
ವ್ಯಾಜ್ಯದ ವಿಚಾರವೊಂದರಲ್ಲಿ ನಿಮ್ಮನ್ನು ಸಿಲುಕಿಸಲು ನಡೆಯುತ್ತಿರುವ ಷಡ್ಯಂತ್ರದ ಬಗೆಗೆ ಎಚ್ಚರ ಇರಲಿ. ಯಾವುದೇ ರೀತಿಯ ಹಣಕಾಸಿನ ವಿಷಯದಲ್ಲಿ ಹುಷಾರು, ಒಂದು ಶುಭ ಸಮಾರಂಭದಲ್ಲಿ ಭಾಗವಹಿಸುವಿರಿ. ಹೆತ್ತವರ ಜೊತೆ ಸಮಯವನ್ನು ಕಳೆಯುವಿರಿ.
ಜನಪ್ರಿಯತೆ ಹಾಗೂ ಸಂಭಾವನೆ ಹೆಚ್ಚಾಗಲಿದೆ. ಹಣಕಾಸಿನ ಸ್ಥಿತಿ ಸಾಕಷ್ಟು ಸುಧಾರಿಸಲಿದೆ. ಚಿಕ್ಕ ಮಕ್ಕಳ ಆರೋಗ್ಯದ ಕಡೆ ಗಮನ ಹರಿಸುವುದು ಒಳ್ಳೆಯದು. ಸಹೋದರನ ಸಂಗಡ ವಾದ ವಿವಾದ ಬೇಡ.
ಸಾಧ್ಯವಾದಷ್ಟು ನೀವು ನಿಮ್ಮ ಪಾಡಿಗೆ ಇರುವುದು ಕ್ಷೇಮ. ಮನಸ್ಸು ಧಾರ್ಮಿಕ ವಿಚಾರಗಳ ಕಡೆ ಸೆಳೆಯಲಿದ್ದು ಅಂತಹ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸುವಿರಿ. ರೈತರು ರಾಜಕೀಯ ವ್ಯಕ್ತಿಗಳನ್ನು ನಂಬದಿರುವುದು ಒಳ್ಳೆಯದು.
ಲದೇವತಾನುಗ್ರಹದಿಂದ ನೀವು ಅಂದುಕೊಂಡ ಕಾರ್ಯಗಳು ಸುಸೂತ್ರವಾಗಿ ನೆರವೇರಲಿವೆ. ಮಡದಿ ಮಕ್ಕಳು ನಿಮಗೆ ಸಂತಸ ನೀಡುವರು. ಕಾರಣವಿಲ್ಲದೆ ಮತ್ತೊಬ್ಬರನ್ನು ಅವಮಾನಿಸಬೇಡಿ. ಆಡುವ ಮಾತಿನಲ್ಲಿ ಹಿಡಿತವಿರಲಿ.
ಗುರು ಹಿರಿಯರ ಆಶೀರ್ವಾದದಿಂದ ಕಚೇರಿ ಕೆಲಸಗಳಲ್ಲಿ ಅನುಕೂಲವಾಗುವವು. ಬಂಧುಗಳ ನಡುವೆ ಇದ್ದ ವೈರತ್ವವು ಹಿರಿಯರ ಮಧ್ಯಸ್ಥಿಕೆಯಿಂದ ತಿಳಿಯಾಗುವುದು. ಸಂಗಾತಿಯ ಆರೋಗ್ಯದ ಕಡೆ ಗಮನ ನೀಡಿ.
ಅತಿಯಾದ ಲಾಭಾಂಶದ ಆಸೆಗೆ ಬಿದ್ದು ನಿಮ್ಮ ಶಕ್ತಿಗೆ ಮೀರಿ ಕೆಲಸ ಕಾರ್ಯಗಳನ್ನು ಪೂರೈಸಿಕೊಡುತ್ತೇನೆ ಎಂದು ಭಾವಿಸಿ ಏಕಕಾಲಕ್ಕೆ ಕೆಲಸಗಳನ್ನು ಕೈಗೆತ್ತಿಕೊಳ್ಳದಿರಿ. ಇದರಿಂದ ಮಾನಸಿಕ ಕ್ಷೋಭೆ ಮತ್ತು ಹಣಕಾಸಿನ ತೊಂದರೆ ಎದುರಿಸಬೇಕಾಗುವುದು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
