ಜುಲೈ 7, 2023 ಶುಕ್ರವಾರ
ವರ್ಷ : 1945, ಶೋಭಾಕೃತ
ತಿಂಗಳು : ಆಷಾಢ, ಪಕ್ಷ : ಕೃಷ್ಣಪಕ್ಷ
Panchangam
ತಿಥಿ : ಪಂಚಮೀ : Jul 07 03:12 am – Jul 08 12:17 am; ಷಷ್ಠೀ : Jul 08 12:17 am – Jul 08 09:51 pm
ನಕ್ಷತ್ರ : ಶತಭಿಷ: Jul 07 12:25 am – Jul 07 10:16 pm; ಪೂರ್ವಾ ಭಾದ್ರ: Jul 07 10:16 pm – Jul 08 08:36 pm
ಯೋಗ : ಆಯುಷ್ಮಾನ್: Jul 07 12:00 am – Jul 07 08:29 pm; ಸೌಭಾಗ್ಯ: Jul 07 08:29 pm – Jul 08 05:22 pm
ಕರಣ : ಕುಲವ: Jul 07 03:13 am – Jul 07 01:42 pm; ತೈತುಲ: Jul 07 01:42 pm – Jul 08 12:17 am; ಗರಿಜ: Jul 08 12:17 am – Jul 08 11:00 am
Time to be Avoided
ರಾಹುಕಾಲ : 10:48 AM to 12:24 PM
ಯಮಗಂಡ : 3:35 PM to 5:11 PM
ದುರ್ಮುಹುರ್ತ : 08:35 AM to 09:26 AM, 12:49 PM to 01:40 PM
ವಿಷ : 04:13 AM to 05:42 AM
ಗುಳಿಕ : 7:37 AM to 9:13 AM
Good Time to be Used
ಅಮೃತಕಾಲ : 03:43 PM to 05:10 PM
ಅಭಿಜಿತ್ : 11:59 AM to 12:49 PM
Other Data
ಸೂರ್ಯೋದಯ : 6:02 AM
ಸುರ್ಯಾಸ್ತಮಯ : 6:46 PM
ಶಾಂತವಾಗಿ ಆರಂಭವಾಗುವ ಈ ದಿನ ಸಂಜೆ ವೇಳೆಗೆ ಉದ್ವಿಗ್ನಗೊಳ್ಳುವ ಸಾಧ್ಯತೆ ಇರುವುದು. ದೂರ ಪ್ರಯಾಣಕ್ಕೆ ಸಿದ್ಧತೆ ಮಾಡಿಕೊಳ್ಳುವಿರಿ. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ. ಮಕ್ಕಳು ನಿಮಗೆ ಸಂತಸ ನೀಡುವರು.
‘ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ’ ಎಂದು ತಿಳಿದು ಕೂಡ ಬೆಟ್ಟವನ್ನು ಹತ್ತುವ ಸಾಹಸ ಮಾಡುವಿರಿ. ಅರ್ಥಾತ್ ನೀವಾಗಿಯೇ ಗೊತ್ತಿದ್ದು ಸಂಕಷ್ಟಕ್ಕೆ ಸಿಲುಕಿಕೊಳ್ಳುವಿರಿ. ಗುರುಹಿರಿಯರ ಸಲಹೆಯನ್ನು ತಪ್ಪದೆ ಪಾಲಿಸಿ.
ಬಂಧುಗಳ ಆಗಮನದಿಂದ ಮನಸ್ಸಿಗೆ ಆನಂದವಾಗುವುದು. ಮನೆಯಲ್ಲಿ ಸಂಭ್ರಮದ ವಾತಾವರಣ ಮೂಡುವುದು. ಅತಿಯಾದ ಆತ್ಮವಿಶ್ವಾಸ ಒಳ್ಳೆಯದಲ್ಲ. ಮಾತಿನ ರೂಪದಲ್ಲಿ ಅಪಮಾನ ಆಗುವ ಸಾಧ್ಯತೆ ಇರುತ್ತದೆ.
ಕಠಿಣ ಪರಿಶ್ರಮ ಬಿಟ್ಟರೆ ಅನ್ಯಮಾರ್ಗವಿಲ್ಲ ಮತ್ತು ಯಾವುದು ಪುಕ್ಕಟೆಯಾಗಿ ದೊರೆಯದು ಎನ್ನುವ ಕಟು ಸತ್ಯ ನಿಮಗೆ ಈಗಾಗಲೇ ಮನವರಿಕೆ ಆಗಿರುವುದು. ಹಣಕಾಸಿನ ಪರಿಸ್ಥಿತಿ ಸುಧಾರಿಸಲು ಕನಕಧಾರಾ ಸ್ತೋತ್ರವನ್ನು ಪಠಿಸುವುದು ಒಳ್ಳೆಯದು.
ದುಡಿದ ಹಣವೆಲ್ಲವೂ ಜರಡಿಗೆ ಹಾಕಿದ ನೀರಿನಂತೆ ಸೋರಿ ಹೋಗುವುದು. ಹಾಗಾಗಿ ತುರ್ತು ಕಾರ್ಯ ನಿರ್ವಹಣೆಗಾಗಿ ಸಾಲ ಮಾಡಬೇಕಾಗುವುದು. ಬಂಧುಗಳು ಸಹ ನಿಮ್ಮ ಈ ಪರಿಸ್ಥಿತಿಯಲ್ಲಿ ಸಹಾಯ ಮಾಡಲು ಹಿಂದೇಟು ಹಾಕುವರು.
ನಿಮ್ಮ ಮಾತಿನ ಜಾಣ್ಮೆ ಸರಳವಾದ ನಡೆ ನುಡಿಗಳಿಂದ ಜನರ ಪ್ರಶಂಸೆಯನ್ನು ಪಡೆಯಲು ಹೇರಳ ಅವಕಾಶಗಳು ಒದಗಿ ಬರುವುದು. ಸಂಗಾತಿಯ ಸಹಕಾರ ದೊರೆಯುವುದು. ಆರ್ಥಿಕ ಸಮಸ್ಯೆ ಕಡಿಮೆ ಆಗುವುದು.
ಸಾಕ್ಷಾತ್ ಗುರುವೆ ನಿಮ್ಮ ಬಳಿ ಬಂದು ನಿಮ್ಮನ್ನು ತಿದ್ದುವುದಿಲ್ಲ. ಮನೆಯ ಹಿರಿಯರ ರೂಪದಲ್ಲಿ ಇದ್ದು ನಿಮಗೆ ಸಕಾಲಿಕ ಎಚ್ಚರಿಕೆಯನ್ನು ನೀಡುವರು. ಹಾಗಾಗಿ ಹಿರಿಯರ ಮಾತನ್ನು ಉದಾಸೀನ ಮಾಡದಿರಿ.
ಬಹುವಿಧ ಪ್ರತಿಭೆಯು ಅನಾವರಣಗೊಳ್ಳುವುದು. ನಿಮ್ಮ ನಿರೀಕ್ಷೆಯಂತೆಯೇ ಕೆಲಸ ಕಾರ್ಯಗಳು ನಡೆಯುವುದರಿಂದ ಮನಸ್ಸಿಗೆ ಸಮಾಧಾನ ಮತ್ತು ಆತ್ಮಸ್ಥೈರ್ಯ ಹೆಚ್ಚಾಗುವುದು. ಹಣಕಾಸಿನ ಪರಿಸ್ಥಿತಿಯು ಉತ್ತಮವಾಗಿರುತ್ತದೆ.
ಮನೆ ಮಂದಿಯ ಸಹಾಯಕ್ಕಿಂತ ಮನೆ ಹೊರಗಿನ ಗೆಳೆಯರೇ ನಿಮ್ಮನ್ನು ಇಷ್ಟಪಡುವರು ಮತ್ತು ನಿಮ್ಮ ಕಾರ್ಯವನ್ನು ಕೊಂಡಾಡುವರು. ನಿಮ್ಮ ಹಳೆಯ ಗೆಳೆಯರಿಗೆ ಫೋನ್ ಮಾಡಿ ಮಾತುಕತೆ ನಡೆಸಿ.
ಹಿತಶತ್ರುಗಳು ನಿಮ್ಮ ನೆಮ್ಮದಿಯನ್ನು ಕೆಡಿಸುವ ಹುನ್ನಾರದಲ್ಲಿದ್ದಾರೆ ಮತ್ತು ನಿಮ್ಮ ತಪ್ಪುಗಳನ್ನು ಎತ್ತಿ ಆಡುವರು. ಇದರಿಂದ ಕೋಪಗೊಳ್ಳುವ ನೀವು ಮಾತಿನ ಭರದಲ್ಲಿ ಸತ್ಯವನ್ನು ನುಡಿದು ಪೇಚಿಗೆ ಸಿಲುಕೊಳ್ಳುವಿರಿ. ತಾಳ್ಮೆಯಿಂದ ಇರಿ.
ಮಾತೇ ಮುತ್ತು ಮಾತೇ ಶತ್ರು ಎನ್ನುವಂತೆ ನೀವು ನಿಮ್ಮ ಮಾತಿನ ಮೂಲಕ ಉತ್ತಮ ಬಾಂಧವ್ಯವನ್ನು ಬೆಳೆಸಿಕೊಳ್ಳುವಿರಿ. ಆ ಮೂಲಕ ಹಣಕಾಸಿನ ಹರಿವಿಗೆ ಕಾರಣವಾಗುವುದು. ಸಂಗಾತಿಯ ಆರೋಗ್ಯದ ಕಡೆ ಗಮನ ಹರಿಸಿ.
ರೋಗ್ಯದ ವಿಚಾರದಲ್ಲಿ ಎಚ್ಚರದಿಂದ ಇರುವುದು ಕ್ಷೇಮ. ಪ್ರಯಾಣದಲ್ಲಿ ವಾಹನವನ್ನು ಚಲಿಸುವಾಗ ಎಡ ಮತ್ತು ಬಲಬದಿಯ ವಾಹನಗಳನ್ನು ಗಮನಿಸಿ. ಸ್ನೇಹಿತರ ಸಕಾಲಿಕ ಎಚ್ಚರಿಕೆಯಿಂದ ನಿಮಗೆ ಒಳಿತಾಗುವುದು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
