fbpx
ಸಮಾಚಾರ

ಜುಲೈ 28: ನಾಳೆಯ ಪಂಚಾಂಗ ಮತ್ತು ದಿನ ಭವಿಷ್ಯ

ಜುಲೈ 28, 2023 ಶುಕ್ರವಾರ
ವರ್ಷ : 1945, ಶೋಭಾಕೃತ
ತಿಂಗಳು : ಶ್ರಾವಣ, ಪಕ್ಷ : ಶುಕ್ಲಪಕ್ಷ

Panchangam
ತಿಥಿ : ದಶಮೀ : Jul 27 03:48 pm – Jul 28 02:51 pm; ಏಕಾದಶೀ : Jul 28 02:51 pm – Jul 29 01:05 pm
ನಕ್ಷತ್ರ : ಅನುರಾಧ: Jul 28 01:28 am – Jul 29 12:55 am; ಜ್ಯೇಷ್ಠ: Jul 29 12:55 am – Jul 29 11:34 pm
ಯೋಗ : ಶುಕ್ಲ: Jul 27 01:38 pm – Jul 28 11:56 am; ಬ್ರಹ್ಮ: Jul 28 11:56 am – Jul 29 09:34 am
ಕರಣ : ಗರಿಜ: Jul 28 03:26 am – Jul 28 02:51 pm; ವಾಣಿಜ: Jul 28 02:51 pm – Jul 29 02:04 am; ವಿಷ್ಟಿ: Jul 29 02:04 am – Jul 29 01:05 pm

Time to be Avoided
ರಾಹುಕಾಲ : 10:51 AM to 12:26 PM
ಯಮಗಂಡ : 3:35 PM to 5:09 PM
ದುರ್ಮುಹುರ್ತ : 08:39 AM to 09:29 AM, 12:51 PM to 01:41 PM
ವಿಷ : 06:12 AM to 07:43 AM
ಗುಳಿಕ : 7:42 AM to 9:17 AM

Good Time to be Used
ಅಮೃತಕಾಲ : 02:45 PM to 04:19 PM
ಅಭಿಜಿತ್ : 12:00 PM to 12:51 PM

Other Data
ಸೂರ್ಯೋದಯ : 6:08 AM
ಸುರ್ಯಾಸ್ತಮಯ : 6:44 PM

 

 

 
 

 

ವ್ಯಕ್ತಿಯ ಪೂರ್ವಾಪರ ವಿಚಾರ ತಿಳಿದುಕೊಳ್ಳದೆ ಹಣಕಾಸಿನ ಸಹಾಯ ಮಾಡದಿರಿ. ಕೊಟ್ಟ ಹಣ ನಿಮಗೆ ವಾಪಸ್ಸು ಬರದೇ ಹೋಗುವ ಸಾಧ್ಯತೆ ಇದೆ. ಈ ವಿಷಯದಲ್ಲಿ ಯಾವುದಕ್ಕೂ ಸಂಗಾತಿ ಸಲಹೆಯನ್ನು ಕೇಳಿ.

ನಂಬಿಸಿ ಕೈಕೊಡುವಂತಹ ಜನರು ಬಣ್ಣದ ಮಾತುಗಳಿಂದ ಕನಸನ್ನು ಬಿತ್ತಲಿದ್ದಾರೆ. ಅದರ ಪ್ರಭಾವಕ್ಕೆ ಒಳಗಾಗಿ ನೀವು ದುಡಿದ ಹಣವನ್ನು ಖರ್ಚು ಮಾಡಿ ಮೋಸಕ್ಕೆ ಒಳಗಾಗುವಿರಿ. ಯಾವುದೇ ತರಹದ ಒಪ್ಪಂದಗಳಿಗೆ ಒಪ್ಪಿಗೆ ಸೂಚಿಸದಿರಿ.

ನಿಮ್ಮ ಅನುಭವದ ಹಿನ್ನೆಲೆಯಲ್ಲಿ ಬಂದ ಜನರಿಗೆ ಸಾಂತ್ವನ ನೀಡುತ್ತಾ ಬಂದಿರುವ ನೀವು ನಿಮ್ಮನ್ನು ಪುನರೂಪಿಸಿಕೊಳ್ಳುತ್ತ ಬರುವಿರಿ. ಇದರಿಂದ ಸಮಾಜದಲ್ಲಿ ನಿಮ್ಮ ಗೌರವ, ಘನತೆ ಹೆಚ್ಚಾಗುವವು.

 

ಸಣ್ಣಸಣ್ಣ ಮಾತುಗಳಿಗೆ ಮನಸ್ತಾಪ ಉಂಟಾಗುವ ಸಾಧ್ಯತೆ ಇದೆ. ಗಾಜಿನ ಮನೆಯಲ್ಲಿರುವವರ ಮನಸ್ಥಿತಿ ನಿಮ್ಮದಾಗಿರುತ್ತದೆ. ಆದಷ್ಟು ತಾಳ್ಮೆಯಿಂದ ಇರಿ. ಒಂದು ವೇಳೆ ನೀವು ನಿಮ್ಮ ಮಾತಿನಲ್ಲಿ ದುಡುಕಿದರೆ ಪರಿಣಾಮ ಘೋರವಾಗಿರುತ್ತದೆ.

 

 

ತಮ್ಮ ಸ್ವಾರ್ಥಕ್ಕಾಗಿ ನಿಮ್ಮನ್ನು ಇತರರು ಬಳಸಿಕೊಳ್ಳುವ ಸಾಧ್ಯತೆ ಇದೆ. ಹಾಗಾಗಿ ಇಲ್ಲದ ಸಬೂಬು ಹೇಳಿ ಜಾಣ್ಮೆಯಿಂದ ಅವರಿಂದ ತಪ್ಪಿಸಿಕೊಳ್ಳುವುದು ಒಳ್ಳೆಯದು. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುತ್ತದೆ.

 

 

ದೂರದ ಸಂಬಂಧಿಗಳು ಅಥವಾ ಹಳೆಯ ಸ್ನೇಹಿತರು ನಿಮ್ಮನ್ನು ಭೇಟಿ ಮಾಡುವ ಸಾಧ್ಯತೆ ಇದೆ. ಅವರಿಗೆ ಅಗತ್ಯವಾದ ಸಲಹೆ ಸಹಕಾರ ನೀಡಿ ಸಂತೋಷ ಪಡಿಸುವಿರಿ.

 

 

ಯಾರನ್ನೂ ದಿಢೀರನೆ ನಂಬಬೇಡಿ. ಅಂತೆಯೇ ನಿಮ್ಮ ಕಾರ್ಯ ಯೋಜನೆಗೆ ಸಹಾಯವಾಗುವ ವಿಷಯವನ್ನು ಖಂಡಿತವಾಗಿ ಪರಿಶೀಲಿಸಿ. ಮನೆ ಸದಸ್ಯರೊಡನೆ ಮತ್ತು ನೆರೆಹೊರೆ ಜನರೊಂದಿಗೆ ಉತ್ತಮ ಬಾಂಧವ್ಯಇರಿಸಿಕೊಳ್ಳುವುದು ಕ್ಷೇಮ.

 

 

ಬಹುದಿನಗಳ ಕನಸು ಭಾವನಾತ್ಮಕ ಸಂಬಂಧದಿಂದ ನನಸಾಗುವುದು. ಅನಿರೀಕ್ಷಿತವಾಗಿ ಹೊಸದಾದ ಆಲೋಚನೆ ನಿಮ್ಮನ್ನು ಹೊಸ ಕಾರ್ಯಕ್ಕೆ ಪ್ರೇರೇಪಿಸುವುದು. ಹಣಕಾಸು ಕೂಡಾ ಸೂಕ್ತ ಸಮಯದಲ್ಲಿ ದೊರೆಯುವುದು.

ನಿಮ್ಮನ್ನು ಎದುರಿಗೆ ಹಾಡಿ ಹೊಗಳುವವರೇ ನಿಮ್ಮನ್ನು ಮಟ್ಟಹಾಕಲು ಒಳಸಂಚು ರೂಪಿಸುವರು. ದುಷ್ಮನ್‌ ಕಹಾ ಹೇ ಅಂತ ನೋಡಿದರೆ ಬಗಲ್‌ಮೇ ಹೇ ಎನ್ನುವಂತಹ ಸ್ಥಿತಿ ನಿರ್ಮಾಣವಾಗುವುದು. ಯಾವುದಕ್ಕೂ ಸನ್ನದ್ಧರಾಗಿರಿ.

 

ಹಿಂದಿನ ಅನುಭವಗಳ ನೆಲೆಯಲ್ಲಿ ಜಾಗ್ರತೆಯ ಹೆಜ್ಜೆ ಇಡಿ. ಕಿರಿಕಿರಿ ಮಾಡುವವರನ್ನು ನಿಯಂತ್ರಿಸಿ. ಜಯವಿರುವವರೆಗೂ ಭಯವಿಲ್ಲ. ಧೈರ್ಯವಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಿ. ಯಶಸ್ಸು ನಿಮ್ಮದಾಗುವುದು.

 

ಹಿರಿಯರ ಮಾತುಗಳನ್ನು ತಾಳ್ಮೆಯಿಂದ ಕೇಳಿಸಿಕೊಳ್ಳಿ ಮತ್ತು ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಿ. ಕೂಡಿಟ್ಟ ಹಣವೆಲ್ಲಾ ನೀರಿನಂತೆ ಖರ್ಚಾಗುತ್ತಿರುವದರಿಂದ ಹಣದ ಉಳಿತಾಯಕ್ಕೆ ಸಂಚಕಾರ ಬರಲಿದೆ. ಹಣಕಾಸಿನ ವಿಚಾರದಲ್ಲಿ ಜಾಗ್ರತೆ ಇರಲಿ.

ನೀವು ಎಷ್ಟೇ ಶ್ರಮ ವಹಿಸಿ ಕೆಲಸ ಮಾಡಿದರೂ ಈಚಲ ಮರದ ಅಡಿಯಲ್ಲಿ ಕುಳಿತು ಮಜ್ಜಿಗೆ ಕುಡಿದಂತೆ ನಿಮ್ಮ ಕೆಲಸ ಕಾರ್ಯಗಳಲ್ಲಿ ಇಲ್ಲದ ತಪ್ಪುಗಳನ್ನು ತೋರಿಸಿ ನಿಮ್ಮನ್ನು ಅವಮಾನಗೊಳಿಸುವ ಸಾಧ್ಯತೆ ಇದೆ. ಈ ಬಗ್ಗೆ ಎಚ್ಚರದಿಂದ ಇರಿ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top