ಜುಲೈ 29, 2023 ಶನಿವಾರ
ವರ್ಷ : 1945, ಶೋಭಾಕೃತ
ತಿಂಗಳು : ಶ್ರಾವಣ, ಪಕ್ಷ : ಶುಕ್ಲಪಕ್ಷ
Panchangam
ತಿಥಿ : ಏಕಾದಶೀ : Jul 28 02:51 pm – Jul 29 01:05 pm; ದ್ವಾದಶೀ : Jul 29 01:05 pm – Jul 30 10:34 am
ನಕ್ಷತ್ರ : ಜ್ಯೇಷ್ಠ: Jul 29 12:55 am – Jul 29 11:34 pm; ಮೂಲ: Jul 29 11:34 pm – Jul 30 09:32 pm
ಯೋಗ : ಬ್ರಹ್ಮ: Jul 28 11:56 am – Jul 29 09:34 am; ಇಂದ್ರ: Jul 29 09:34 am – Jul 30 06:33 am
ಕರಣ : ವಿಷ್ಟಿ: Jul 29 02:04 am – Jul 29 01:05 pm; ಬಾವ: Jul 29 01:05 pm – Jul 29 11:55 pm; ಬಾಲವ: Jul 29 11:55 pm – Jul 30 10:34 am
Time to be Avoided
ರಾಹುಕಾಲ : 9:17 AM to 10:51 AM
ಯಮಗಂಡ : 2:00 PM to 3:35 PM
ದುರ್ಮುಹುರ್ತ : 07:49 AM to 08:39 AM
ವಿಷ : 08:04 PM to 09:32 PM
ಗುಳಿಕ : 6:08 AM to 7:42 AM
Good Time to be Used
ಅಮೃತಕಾಲ : 03:16 PM to 04:47 PM
ಅಭಿಜಿತ್ : 12:00 PM to 12:51 PM
Other Data
ಸೂರ್ಯೋದಯ : 6:08 AM
ಸುರ್ಯಾಸ್ತಮಯ : 6:43 PM
ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲವೆಂಬಂತೆ ಮಾನಸಿಕ ಉದಾಸೀನತೆ ಕಾರ್ಯದಲ್ಲಿ ಹಿನ್ನಡೆ. ಕೌಟುಂಬಿಕ ಜೀವನದಲ್ಲಿ ಮನಸ್ತಾಪಗಳು ಉಂಟಾಗುವ ಸಾಧ್ಯತೆ ಇದೆ. ಮನೋನಿಯಾಮಕ ರುದ್ರದೇವರನ್ನು ಭಜಿಸಿ.
ಭಗವಂತನ ಕೃಪೆಯಿಂದ ಧನ್ಯತಾಭಾವ ಮನದಲ್ಲಿ ಮೂಡುವುದು. ಮಹತ್ವದ ಪತ್ರಾಗಮನ ವಾಗುವುದು. ಬಂಧು ಬಳಗದವರ ಭೇಟಿಯಾಗಲಿದೆ. ಧಾರ್ಮಿಕ ಕಾರ್ಯದಲ್ಲಿ ಭಾಗವಹಿಸುವಿರಿ. ಹಿರಿಯರ ಗುರುಗಳ ಮಾರ್ಗದರ್ಶನದಂತೆ ನಡೆ
ಮನಸ್ಸು ಖಿನ್ನತೆಯಿಂದ ಕುಗ್ಗುವುದು. ಯಾವುದೇ ಕೆಲಸ ಕಾರ್ಯದಲ್ಲಿ ಆಸಕ್ತಿ ಕಡಿಮೆ ಆಗುವುದು. ಶಿವ ದೇವಾಲಯದಲ್ಲಿ ತುಪ್ಪದ ದೀಪ ಹಚ್ಚಿ. ದೂರ ಪ್ರವಾಸದ ವಿಚಾರವನ್ನು ಮುಂದೂಡುವುದು ಒಳಿತು. ಆರೋಗ್ಯದ ಕಡೆ ಗಮನ ಹರಿಸಿ.
ವಿವಿಧ ಮೂಲಗಳಿಂದ ಹಣಕಾಸು ಬರುವುದು. ಕೌಟುಂಬಿಕ ಜೀವನದಲ್ಲಿ ಸಂತಸದ ಕ್ಷ ಣಗಳನ್ನು ಕಳೆಯುವಿರಿ. ಮನಸ್ಸಿನ ಕಾಮನೆಗಳು ಪೂರ್ತಿಗೊಳ್ಳುವವು. ಬಂಧು ಬಳಗದವರ ಭೇಟಿಯಾಗಲಿದೆ. ದೈವಾನುಕೂಲತೆ ಇದೆ.
ನಿಮ್ಮ ಎದುರಾಳಿಗಳೇ ನಿಮ್ಮ ಬಳಿ ಬಂದು ಶರಣಾಗಿ ಸಹಾಯ ಕೇಳಬಹುದು. ಏಕೆಂದರೆ ಅವರೆಲ್ಲರೂ ಗೆದ್ದೆತ್ತಿನ ಬಾಲ ಹಿಡಿಯುವವರೇ ಆಗಿದ್ದಾರೆ. ನೀವು ಈಗಾಗಲೇ ಪರೀಕ್ಷೆಯಲ್ಲಿ ಗೆದ್ದಿರುವಿರಿ. ಫಲಿತಾಂಶ ಬರಬೇಕಷ್ಟೆ.
ನಿಮ್ಮನ್ನು ನಂಬಿದ ಅತ್ಯಂತ ವಿಶ್ವಾಸಾರ್ಹ ವ್ಯಕ್ತಿಯೂ ನಿಮ್ಮ ಬಗ್ಗೆ ತಪ್ಪು ಕಲ್ಪನೆಯಿಂದ ಕೂಗಾಡುವ ಸಾಧ್ಯತೆ ಇದೆ. ಎಲ್ಲವನ್ನು ಮುಗುಳು ನಗೆಯಿಂದ ಸ್ವಾಗತಿಸಿ ಒಳಿತಾಗುವುದು. ಗುರು ಹಿರಿಯರ ಆಶೀರ್ವಾದ ನಿಮ್ಮ ಮೇಲಿದೆ.
ನಿಮ್ಮನ್ನು ಗೌರವ, ಆದರಗಳಿಂದ ನೋಡುವ ವ್ಯಕ್ತಿಗಳೂ ಒತ್ತಡ ಸೃಷ್ಟಿಸುವ ಸಾಧ್ಯತೆ ಇದೆ. ಹಾಗಾಗಿ ನಿಮ್ಮ ಆಚಾರ ವಿಚಾರಗಳಲ್ಲಿ ಬದ್ಧತೆ ಇರಲಿ. ಯಾರೂ ಗಮನಿಸುತ್ತಿಲ್ಲ ಎಂದು ಅನ್ಯ ಹಾದಿ ತುಳಿಯದಿರಿ. ಮುಂದೆ ಇದರಿಂದ ತೊಂದರೆ ಆಗುವುದು.
ತಮಾಷೆಗಾಗಿ ಕುಹಕ ನುಡಿಗಳನ್ನು ಮತ್ತು ತಲೆಹರಟೆಯ ಹೇಳಿಕೆಗಳನ್ನು ನೀಡಿ ವಿವಾದಕ್ಕೆ ಸಿಲುಕುವ ವಾತಾವರಣ ಸೃಷ್ಟಿಯಾಗಲಿದೆ. ಇದರಿಂದ ನಿಮ್ಮ ಘನತೆ, ಗೌರವಕ್ಕೆ ಪೆಟ್ಟು ಬೀಳುವ ಸಾಧ್ಯತೆ ಇದೆ. ಈ ಬಗ್ಗೆ ಎಚ್ಚರ ಅಗತ್ಯ.
ಕುಟುಂಬ ಸಾಮರಸ್ಯದಲ್ಲಿ ಒಡಕು ಉಂಟಾಗುವ ಸಂದರ್ಭವಿದ್ದು ಪತಿ, ಪತ್ನಿ ಇಬ್ಬರೂ ಆದಷ್ಟು ಹಳೇ ವಿಷಯಗಳನ್ನು ಕೆದಕದೆ ಸದ್ಯದ ಪರಿಸ್ಥಿತಿಯ ಬಗ್ಗೆ ಚಿಂತನೆ ನಡೆಸಿ. ಸಾಧ್ಯವಾದರೆ ಇಬ್ಬರೂ ತೊಗರಿಬೇಳೆ ದಾನ ಮಾಡಿ.
ಅನವಶ್ಯಕ ಖರ್ಚು ಹೆಚ್ಚಾಗುವ ಸಂಭವವಿರುತ್ತದೆ. ಆದಾಗ್ಯೂ ಅದು ವಿಹಿತ ಕಾರ್ಯಗಳಿಗೆ ಖರ್ಚಾಗುವುದರಿಂದ ಚಿಂತೆ ಬೇಡ. ಆಹಾರದ ವಿಷಯದಲ್ಲಿ ಎಚ್ಚರಿಕೆ ಇರಲಿ. ಹೊರಗಿನ ಆಹಾರ ಪದಾರ್ಥಗಳನ್ನು ಸೇವಿಸದೆ ಇರುವುದು ಒಳ್ಳೆಯದು.
ನಿಮ್ಮ ಕಷ್ಟಕಾಲದಲ್ಲಿ ಯಾವಾಗಲು ಪರರು ಸಹಾಯ ಮಾಡುತ್ತಾರೆಂದು ಕೈಕಟ್ಟಿ ಕೂರುವುದು ಜಾಣರ ಲಕ್ಷ ಣವಲ್ಲ. ಕೆಲಸ ಕಾರ್ಯಗಳಲ್ಲಿ ಯಶಸ್ಸು ಸಾಧಿಸಲು ನಿಮ್ಮ ಪ್ರಯತ್ನ ಬಹಳವಾಗಿರಬೇಕು. ಆಗ ಮಾತ್ರ ಪರರು ನಿಮಗೆ ಸಹಾಯ ಹಸ್ತ ನೀಡುವರು.
ಭಗವಂತನ ತೀರ್ಮಾನವನ್ನು ಯಾರೂ ಪ್ರಶ್ನಿಸಬಾರದು. ಒಂದು ಕಡೆ ದುಃಖವನ್ನು ಕೊಟ್ಟು ಜೀವನದಲ್ಲಿ ಜಿಗುಪ್ಸೆ ಉಂಟು ಮಾಡಿದರೆ ಮತ್ತೊಂದು ಕಡೆ ಬಯಸದೆ ಇದ್ದ ಭಾಗ್ಯ ಕೊಟ್ಟು ಜೀವನ ಎದುರಿಸುವ ಕಲೆಯನ್ನು ಹೇಳಿಕೊಡುವನು. ತಾಳ್ಮೆಯಿಂದ ಇರಿ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
