ಆಗಸ್ಟ್ 3, 2023 ಗುರುವಾರ
ವರ್ಷ : 1945, ಶೋಭಾಕೃತ
ತಿಂಗಳು : ಶ್ರಾವಣ, ಪಕ್ಷ : ಕೃಷ್ಣಪಕ್ಷ
Panchangam
ತಿಥಿ : ದ್ವಿತೀಯಾ : Aug 02 08:06 pm – Aug 03 04:17 pm; ತೃತೀಯಾ : Aug 03 04:17 pm – Aug 04 12:45 pm
ನಕ್ಷತ್ರ : ಧನಿಷ್ಠ: Aug 02 12:58 pm – Aug 03 09:56 am; ಶತಭಿಷ: Aug 03 09:56 am – Aug 04 07:08 am
ಯೋಗ : ಸೌಭಾಗ್ಯ: Aug 02 02:33 pm – Aug 03 10:17 am; ಶೋಭನ: Aug 03 10:17 am – Aug 04 06:13 am
ಕರಣ : ತೈತುಲ: Aug 02 08:06 pm – Aug 03 06:10 am; ಗರಿಜ: Aug 03 06:10 am – Aug 03 04:17 pm; ವಾಣಿಜ: Aug 03 04:17 pm – Aug 04 02:28 am; ವಿಷ್ಟಿ: Aug 04 02:28 am – Aug 04 12:45 pm
Time to be Avoided
ರಾಹುಕಾಲ : 1:59 PM to 3:34 PM
ಯಮಗಂಡ : 6:09 AM to 7:43 AM
ದುರ್ಮುಹುರ್ತ : 10:20 AM to 11:10 AM, 03:21 PM to 04:11 PM
ವಿಷ : 04:17 PM to 05:42 PM
ಗುಳಿಕ : 9:17 AM to 10:51 AM
Good Time to be Used
ಅಮೃತಕಾಲ : 12:46 AM to 02:11 AM
ಅಭಿಜಿತ್ : 12:00 PM to 12:50 PM
Other Data
ಸೂರ್ಯೋದಯ : 6:09 AM
ಸುರ್ಯಾಸ್ತಮಯ : 6:42 PM
ಬಾಳಸಂಗಾತಿಯೊಂದಿಗೆ ಅನವಶ್ಯಕ ಮನಸ್ತಾಪಗಳಿಗೆ ಅವಕಾಶ ಕೊಡಬೇಡಿ. ಸದ್ಯದ ಗ್ರಹಸ್ಥಿತಿ ಅಷ್ಟೇನೂ ಉತ್ತಮವಿಲ್ಲ. ಉಗುರಿನಿಂದ ಆಗುವ ಕೆಲಸಕ್ಕೆ ಕೊಡಲಿ ತೆಗೆದುಕೊಂಡರು ಎನ್ನುವಂತೆ ಸರಳವಾಗಿ ಬಗೆಹರಿವ ವಿಚಾರ ಕಗ್ಗಂಟಾಗುವುದು.
ಜೀವನ ಸುಗಮವಾಗಿ ಸಾಗುತ್ತಿದೆ. ಆದರೆ ಮನೆಯ ಸದಸ್ಯರೆ ನಿಮ್ಮ ಮಾತನ್ನು ಅಲಕ್ಷಿಸುತ್ತಿರುವುದು ನಿಮಗೆ ನೋವು ಉಂಟು ಮಾಡುತ್ತಿದೆ. ಇದರಲ್ಲಿ ನಿಮ್ಮ ತಪ್ಪಿನ ಪಾತ್ರವಿಲ್ಲ. ಹಾಗಾಗಿ ತಾಳ್ಮೆಯಿಂದ ಇರಿ. ಅವರೇ ಸರಿದಾರಿಗೆ ಬರುವರು.
ಸಂಶಯಾತ್ಮ ವಿನಶ್ಯತಿ ಎಂದರು ಹಿರಿಯರು. ಸಣ್ಣಪುಟ್ಟ ವಿಷಯಗಳಿಗೆ ಸಂಶಯ ಪಡುತ್ತಾ ಕೂತರೆ ಮಹತ್ತರ ಕಾರ್ಯ ಮಾಡಲು ಆಗುವುದಿಲ್ಲ. ನಂಬಿ ಕೆಟ್ಟವರಿಲ್ಲವೋ ರಂಗಯ್ಯನಾ ಎನ್ನುವಂತೆ ನಿಮ್ಮ ಕುಲದೇವೆತೆ ಪ್ರಾರ್ಥನೆಯೊಂದಿಗೆ ಕಾರ್ಯ ನಿರ್ವಹಿಸಿ.
ತಪ್ಪು ಮಾಹಿತಿ ನೀಡುವವರ ಬಗ್ಗೆ ಎಚ್ಚರವಿರಲಿ. ನಿಮ್ಮ ಗುರಿಯು ಬಾಣದಂತೆ ನೇರವಾಗಿರಲಿ. ಬಾಣವು ನಿರ್ದಿಷ್ಟ ಗುರಿಯನ್ನು ತಲುಪಬೇಕೆಂದರೆ ಬಾಣದ ಹಿಂದಿರುವ ಹುರಿಯನ್ನು ಸ್ವಲ್ಪ ಹಿಂದಕ್ಕೆ ತರಲೇಬೇಕಾಗುವುದು. ಹಾಗಾಗಿ ಇಂದಿನ ಸೋಲು ನಾಳಿನ ಗೆಲುವಿಗೆ ದಾರಿ ಆಗುವುದು.
ಕುಟುಂಬದ ಬಗೆಗಿನ ಜವಾಬ್ದಾರಿಗಳನ್ನು ನಿರ್ವಹಿಸಲು ಮರೆಯದಿರಿ. ಕೇವಲ ತನ್ನ ಹೆಂಡತಿ ಮತ್ತು ಮಕ್ಕಳು ಕ್ಷೇಮವಾಗಿದ್ದರೆ ಸಾಕು ಎಂದು ಸಂಕುಚಿತ ಮನೋಭಾವನೆಯಿಂದ ಹೊರಬಂದು ಹೆತ್ತ ತಂದೆ ತಾಯಿಯರ ಹಾಗೂ ಒಡಹುಟ್ಟಿದವರ ಯೋಗಕ್ಷೇಮ ವಿಚಾರಿಸಿ.
ಬಹಳ ದಿನಗಳಿಂದ ದೊಡ್ಡ ರೂಪದಲ್ಲಿ ತಲೆ ತಿನ್ನುತ್ತಿದ್ದ ಸಮಸ್ಯೆಗೊಂದು ಪರಿಹಾರ ದೊರೆಯಲಿದೆ. ಬರಲಿರುವ ಕಷ್ಟಗಳು ಕೂಡಾ ಶೀಘ್ರದಲ್ಲಿಯೇ ಮಂಜುಗಡ್ಡೆಯಂತೆ ಕರಗಿ ಹೋಗುವವು. ಇದಕ್ಕೆ ಪೂರಕವಾಗಿ ಮಡದಿ ಮಕ್ಕಳ ಸಹಕಾರ ದೊರೆಯುವುದು.
ದಯಾಮಯನಾದ ಭಗವಂತನ ಮುಂದೆ ನಿಮ್ಮ ಸುಖ ದುಃಖಗಳನ್ನು ನಿವೇದಿಸಿಕೊಳ್ಳಿ. ಅನ್ಯರ ಮುಂದೆ ನೀವು ನಿಮ್ಮ ದುಃಖವನ್ನು ತೋಡಿಕೊಂಡಲ್ಲಿ ಇನ್ನಷ್ಟು ಅಪಹಾಸ್ಯಕ್ಕೆ ಗುರಿ ಆಗುವಿರಿ.
ಮಿತ್ರರಿಂದ ಹಲವು ರೀತಿಯ ಬೆಂಬಲಗಳನ್ನು ಬಯಸಿದ್ದಲ್ಲಿ ನಿರಾಶರಾಗಬೇಕಾಗುವುದು. ನಿಮ್ಮ ಆತ್ಮಬಲದ ಮೇಲೆ ಕಾರ್ಯವನ್ನು ಹಮ್ಮಿಕೊಳ್ಳಿ. ಧೈರ್ಯವಂತರಿಗೆ ಮಾತ್ರ ಭಗವಂತ ಸಹಾಯ ಮಾಡುವನು. ದೂರದ ಪ್ರಯಾಣವನ್ನು ಮುಂದೂಡುವುದು ಒಳ್ಳೆಯದು.
ಬಹಳ ದಿನಗಳಿಂದ ಕಾರ್ಯರೂಪಕ್ಕೆ ತರಬೇಕು ಎನ್ನುವ ಸಂಗತಿಗಳನ್ನು ಆರಂಭಿಸಬಹುದು. ಉತ್ತಮ ದಿನವಾಗಿದ್ದು ನಿಮ್ಮ ಮನೋಕಾಮನೆಗಳು ಬೇಗನೆ ಕಾರ್ಯಗತವಾಗುವವು. ಅಂತೆಯೇ ಹಣಕಾಸು ಬರುವುದು.
‘ಧೈರ್ಯಂ ಸರ್ವತ್ರ ಸಾಧನಂ’ ನೀವು ಧೈರ್ಯದಿಂದ ಆರಂಭಿಸಿದ ಸಕಲ ಕಾರ್ಯದಲ್ಲೂ ಗೆಲ್ಲುವ ಸಂಭವನೀಯತೆ ಹೆಚ್ಚಿರುತ್ತದೆ. ಅದರ ಜತೆಗೆ ವಿಚಾರಬದ್ಧ ಮಾತುಕತೆಗಳಿಂದ ನಿಮ್ಮ ಸಮುದಾಯದಲ್ಲಿ ಗೌರವಿಸಲ್ಪಡುವಿರಿ.
ಪರಾಕ್ರಮಶಾಲಿಗಳಾದ ನಿಮ್ಮ ಪ್ರಯತ್ನಗಳಲ್ಲಿ ಆರಂಭದಲ್ಲಿ ಹಿನ್ನಡೆಯಾದರೂ ಕೊನೆಗೆ ಯಶಸ್ಸು ನಿಮ್ಮದೇ ಆಗುವುದು. ಕುಲದೇವರ ಅನುಗ್ರಹ ಸಂಪಾದಿಸಿಕೊಳ್ಳಿ. ಆರೋಗ್ಯದ ಬಗ್ಗೆ ಉದಾಸೀನ ಬೇಡ. ಹಿರಿಯರನ್ನು ಭೇಟಿಯಾಗುವ ಸಾಧ್ಯತೆ ಇದೆ.
ಕಚೇರಿಯ ಮಿತಿಮೀರಿದ ನಿಯಮಗಳಿಂದ ಕೆಲಸದಲ್ಲಿ ಅನಾಸಕ್ತಿ ಮೂಡುವುದು. ವ್ಯವಹಾರದಲ್ಲಿ ಕಂಡುಬರುವ ಹಿನ್ನಡೆಯಿಂದ ಮನಸ್ಸಿಗೆ ಬೇಸರವಾಗುವುದು. ಆಂಜನೇಯ ಸ್ತೋತ್ರ ಪಠಿಸಿ. ಮಕ್ಕಳ ನಡವಳಿಕೆ ಬೇಸರ ತರಿಸುವ ಸಾಧ್ಯತೆ ಇದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
