fbpx
ಸಮಾಚಾರ

ತಾಮ್ರದ ಚೊಂಬು ಅಥವಾ ಲೋಟದಲ್ಲಿ ನೀರು ಕುಡಿಯೋದ್ರಿಂದ ಯಾವೆಲ್ಲಾ ಪ್ರಯೋಜಗಳಾಗುತ್ತೆ ಗೊತ್ತಾ?

ಬದಲಾದ ಜೀವನಶೈಲಿಯಲ್ಲಿ ಈಗ ಸ್ಟೀಲ್ ಮತ್ತು ಪ್ಲಾಸ್ಟಿಕ್ ಲೋಟಗಳು ಹೆಚ್ಚಾಗಿ ಚಾಲ್ತಿಯಲ್ಲಿವೆ. ಇದರಿಂದ ತಾಮ್ರ ಬಳಕೆ ದಿನದಿಂದ ಕಡಿಮೆ ಆಗುತ್ತಿದೆ. ಹಿರಿಯರ ಪ್ರಕಾರ ತಾಮ್ರ ಮಾನವನ ದೇಹಕ್ಕೆ ಸಂಜೀವಿನಿ. ಇದರಲ್ಲಿನ ಔಷಧೀಯ ಅಂಶಗಳು ರೋಗಗಳಿಂದ ನಮ್ಮನ್ನು ದೂರ ಇಡುತ್ತವೆ. ತಾಮ್ರದ ಪಾತ್ರೆ, ಚೊಂಬು ಅಥವಾ ಲೋಟದಲ್ಲಿ ಶೇಖರಿಸಿಟ್ಟ ನೀರು ಕುಡಿಯುವುದರಿಂದ ಆಗುವ ಪ್ರಯೋಜನಗಳು ಗೊತ್ತಾದರೆ ನೀವು ಖಂಡಿತವಾಗಲು ಇದನ್ನು ಉಪಯೋಗಿಸಲು ಪ್ರಾರಂಭಿಸುತ್ತೀರಿ. ತಾಮ್ರದ ಲೋಟಗಳಿಂದ ಆಗುವ ಪ್ರಮುಖ ಪ್ರಯೋಜನಗಳು ಇಲ್ಲಿವೆ ನೋಡಿ.

ರಕ್ತ ಹೀನತೆ ಸಮಸ್ಯೆ ದೂರ
ತಾಮ್ರದ ಲೋಟದಲ್ಲಿ ನೀರು ಕುಡಿಯುವುದರಿಂದ ಅದರಲ್ಲಿರುವ ಆ್ಯಂಟಿ ಆಕ್ಸಿಡೆಂಟ್ ಅಂಶ ದೇಹದ ಬೊಜ್ಜನ್ನು ನಿಯಂತ್ರಿಸುವ ಮೂಲಕ ದೇಹ ಸದಾಕಾಲ ಚಟುವಟಿಕೆಯಿಂದ ಇರುವಂತೆ ನೋಡಿಕೊಳ್ಳುತ್ತದೆ. ಅಂತೆಯೇ ಹೃದಯ ಆರೋಗ್ಯದಲ್ಲೂ ತಾಮ್ರ ಪರಿಣಾಮಕಾರಿಯಾಗಿದ್ದು, ಹೃದಯ ನಾಳಗಳು ಸದಾಕಾಲ ಚಟುವಟಿಕೆಯಿಂದ ಕಾರ್ಯನಿರವಸಿಕೊಳ್ಳುವಂತೆ ನೋಡಿಕೊಳ್ಳುತ್ತದೆ. ಆ ಮೂಲಕ ದೇಹಕ್ಕೆ ಹೆಚ್ಚಿನ ಪ್ರಮಾಣದಲ್ಲಿ ರಕ್ತ ಪರಿಚಲನೆಯಾಗುವಂತೆ ನೋಡಿಕೊಳ್ಳುತ್ತದೆ. ಇದರಿಂದ ರಕ್ತ ಹೀನತೆ ಸಮಸ್ಯೆ ಕೂಡ ದೂರಾಗುತ್ತದೆ ಎಂದು ವೈದ್ಯರು ಹೇಳುತ್ತಾರೆ.
ಥೈರಾಯ್ಡ್ ಉಪಶಮನದಲ್ಲಿ ಪರಿಣಾಮಕಾರಿ.

ಪ್ರಸ್ತುತ ಸಮಾಜದಲ್ಲಿ ಸಾಮಾನ್ಯವಾಗಿರುವ ಥೈರಾಯ್ಡ್ ಸಮಸ್ಯೆಗೆ ಪ್ರಮುಖ ಕಾರಣ ತಿನ್ನುವ ಆಹಾರದಲ್ಲಿ ತಾಮ್ರದ ಅಂಶದ ಕೊರತೆ ಎಂದು ವೈದ್ಯರು ಹೇಳುತ್ತಾರೆ. ಹೀಗಾಗಿ ನಾವು ನಿತ್ಯ ತಾಮ್ರದ ಲೋಟದಲ್ಲಿ ನೀರು ಕುಡಿಯುವುದರಿಂದ ದೇಹಕ್ಕೆ ಅಗತ್ಯವಾದ ತಾಮ್ರದ ಅಂಶ ಸೇರುತ್ತದೆ. ಇದು ಥೈರಾಯ್ಡ್ ಸಮಸ್ಯೆ ಪರಿಹರಿಸಲು ನೆರವಾಗುತ್ತದೆ.

ದೇಹದ ಜೀರ್ಣಕ್ರೀಯೆಯನ್ನು ಉತ್ತಮಗೊಳಿಸುತ್ತದೆ.
ತಾಮ್ರದ ಲೋಟದಲ್ಲಿ ನೀರು ಕುಡಿಯುವುದರಿಂದ, ಅದರಲ್ಲಿನ ಅಂಶಗಳು ಕೆಟ್ಟ ಬ್ಯಾಕ್ಟೀರೀಯಾಗಳನ್ನು ನಾಶ ಮಾಡುತ್ತದೆ. ಇದರಿಂದ ಜೀರ್ಣಕ್ರೀಯೆಯು ಉತ್ತಮವಾಗುತ್ತದೆ.

ಬೊಜ್ಜಿನ ಸಮಸ್ಯೆಯಿಂದ ಮುಕ್ತಿ

ತಾಮ್ರದ ಲೋಟದಲ್ಲಿ ನೀರು ಕುಡಿಯುವುದರಿಂದ ಜೀರ್ಣಕ್ರೀಯೆಯು ಉತ್ತಮಗೊಳ್ಳುತ್ತದೆ. ಇದರಿಂದ ದೇಹದಲ್ಲಿ ಬೊಜ್ಜು ಶೇಖರಣೆಯಾಗುವುದನ್ನು ತಡೆಗಟ್ಟುತ್ತದೆ.

ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ

ತಾಮ್ರ ಮತ್ತು ಚಿನ್ನದಲ್ಲಿರುವ ಅಂಶ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಆದುದರಿಂದ ಹಿಂದಿನ ಕಾಲದಲ್ಲಿ ಚಿನ್ನ ಮತ್ತು ತಾಮ್ರದ ನಾಣ್ಯಗಳು ಬಳಕೆಯಲ್ಲಿತ್ತು. ಆದುದರಿಂದ ಹಿಂದೆ ದೇವಸ್ಥಾನದ ಕಲ್ಯಾಣಿಗಳಲ್ಲಿ ಇದರ ನಾಣ್ಯಗಳನ್ನು ಹಾಕುತ್ತಿದ್ದರು. ಆದುದರಿಂದ ಕಲ್ಯಾಣಿಯ ನೀರು ಕುಡಿಯುವವರು ರೋಗಮುಕ್ತರಾಗಿರುತ್ತಾರೆ ಎಂಬ ನಂಬಿಕೆ.

ಹೃದಯದ ಆರೋಗ್ಯ ಮತ್ತು ಅಧಿಕ ರಕ್ತದೊತ್ತಡ ನಿಯಂತ್ರಿಸುತ್ತದೆ

ತಾಮ್ರದ ಅಂಶ ಹೃದಯಸಂಬಂಧಿ ರೋಗಗಳನ್ನು ದೂರವಿಡುತ್ತದೆ. ಅಧಿಕ ಬೊಜ್ಜು ನಿಯಂತ್ರಣದ ಮೂಲಕ ಮತ್ತು ಹೃದಯದ ರಕ್ತನಾಳಗಳ ಶುದ್ದೀಕರಣದ ಮೂಲಕ ಹೃದಯ ಆರೋಗ್ಯವಾಗಿರುವಂತೆ ತಾಮ್ರದ ಅಂಶ ನೋಡಿಕೊಳ್ಳುತ್ತದೆ. ಅಮೆರಿಕನ್ ವೈದ್ಯರು ಹೇಳಿರುವಂತೆ ತಾಮ್ರ ಬಿಪಿಯನ್ನು ಕೂಡ ನಿಯಂತ್ರಣದಲ್ಲಿಡುತ್ತದೆಯಂತೆ.

ಮಾರಕ ಕ್ಯಾನ್ಸರ್ ವಿರುದ್ಧ ಹೋರಾಡುತ್ತದೆ

ಇನ್ನು ತಾಮ್ರದಲ್ಲಿನ ಆ್ಯಂಟಿ ಆಕ್ಸಿಡೆಂಟ್ ಅಂಶ ಮಾರಕ ಕ್ಯಾನ್ಸರ್ ರೋಗವನ್ನು ನಿಯಂತ್ರಿಸಲು ಸಹಕಾರಿಯಾಗುತ್ತದೆ. ಅಂತೆಯೇ ಭವಿಷ್ಯದಲ್ಲಿ ಕ್ಯಾನ್ಸರ್ ರೋಗ ಬರದಂತೆಯೂ ಇದು ತಡೆಯುತ್ತದೆ.

ಚರ್ಮರೋಗಕ್ಕೂ ಪರಿಣಾಮಕಾರಿ ಔಷಧ

ತಾಮ್ರದಲ್ಲಿರುವ ಅಂಶಗಳು ಮಾನವನ ಚರ್ಮಕ್ಕೆ ಯಾವುದೇ ರೀತಿಯ ಸಮಸ್ಯೆ ಕಾಡದಂತೆ ತಡೆಯುತ್ತದೆ. ಅಂತೆಯೇ ಸಂಧಿವಾತ ಮತ್ತು ಸಂಧಿನೋವಿನಲ್ಲೂ ಇದು ಪರಿಣಾಮಕಾರಿಯಾಗಬಲ್ಲದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top