fbpx
ಸಮಾಚಾರ

ಶಿವನಿಗೆ ಬಿಲ್ವ ಪತ್ರೆಯನ್ನೇ ಏಕೆ ಅರ್ಪಣೆ ಮಾಡಲಾಗುತ್ತದೆ , ಬಿಲ್ವದ ಆರೋಗ್ಯಕರ ಲಾಭಗಳು…

ಮುಖ್ಯವಾಗಿ ಶಿವನ ಪೂಜೆಗೆ ಬಿಲ್ವ ಪತ್ರ ಬಳಸಲಾಗುತ್ತದೆ , ಈ ಮರವು ಬಹಳ ಪವಿತ್ರವಾದದ್ದು ಎಂದು ಹೇಳಲಾಗುತ್ತದೆ.
ಅಥರ್ವವೇದ , ಯತರೇಯ ಬ್ರಹ್ಮಣ , ಶತಪಥ ಬ್ರಾಹ್ಮಣ ಇವುಗಳಲ್ಲಿ ಉಲ್ಲೇಖಿಸಲಾಗಿದೆ.
ಬಿಲ್ವ ಪತ್ರೆಯು ಮೂರು ಎಲೆಗಳನ್ನು ಹೊಂದಿರುವ ಒಂದು ಗೊಂಚಲಿನಂತೆ ಕಾಣಿಸುತ್ತದೆ. ಇದು ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರನ್ನು ಪ್ರತಿನಿಧಿಸುತ್ತದೆ ಎಂಬ ಮಾತಿದೆ. ಜೊತೆಗೆ ಇದು ಶಿವನಿಗೆ ಇರುವ ಮೂರು ಕಣ್ಣುಗಳನ್ನು ಸಹ ತೋರಿಸುತ್ತದೆ.

ಬಿಲ್ವದ ಎಲೆಗಳನ್ನು ಲಕ್ಷ್ಮಿಗೆ ಹೋಲಿಸಲಾಗುತ್ತದೆ.

ಲಕ್ಷ್ಮಿ ಶಿವ ಪೂಜೆಗೆ 1000 ಕಮಲಗಳನ್ನು ಅರ್ಪಿಸುತ್ತಿದ್ದಳು , ಒಂದು ದಿನ ಸಾವಿರದಲ್ಲಿ ಎರಡು ಕಮಲಗಳು ಕಾಣೆಯಾದವಂತೆ , ಲಕ್ಷ್ಮಿ ಅತ್ಯಂತ ಚಿಂತೆಯಾಗಿದ್ದ ಸಂಧರ್ಭದಲ್ಲಿ ವಿಷ್ಣು ಲಕ್ಷ್ಮಿ ಎರಡು ಸ್ತನಗಳನ್ನು ಕತ್ತರಿಸಿ ಶಿವನಿಗೆ ಅರ್ಪಿಸುವಂತೆ ಲಕ್ಷ್ಮಿ ಗೆ ಹೇಳಿದನಂತೆ .

ಹಾಗೆಯೇ ಲಕ್ಷ್ಮಿ ತನ್ನ ಎರಡು ಸ್ತನಗಳನ್ನು ಕತ್ತರಿಸಿ ಶಿವನಿಗೆ ಅರ್ಪಿಸಿದಳು ಇದರಿಂದ ಸಂತುಷ್ಟಗೊಂಡ ಶಿವನು ಬಿಲ್ವ ಮರದ ಹಣ್ಣುಗಳಾಗಿ ಈ ಸ್ತನಗಳು ಇರುತ್ತವೆ ಎಂದು ಆಶೀರ್ವಾದ ನೀಡಿದನಂತೆ ಎಂಬ ಕಥೆ ಇದೆ.

ಸ್ಕಂದ ಪುರಾಣದ ಪ್ರಕಾರ ಬಿಲ್ಪ ಪತ್ರೆಯ ಮರವು ಪಾರ್ವತಿಯ ಬೆವರ ಹನಿಗಳಿಂದ ಹುಟ್ಟಿಕೊಂಡಿತಂತೆ. ಒಮ್ಮೆ ಪಾರ್ವತಿಯ ಬೆವರ ಹನಿಗಳು ಮಂದಾರ ಪರ್ವತದ ಮೇಲೆ ಬಿದ್ದಾಗ ಈ ಮರ ಹುಟ್ಟಿಕೊಂಡಿತಂತೆ. ಪಾರ್ವತಿ ದೇವಿಯು ಈ ಮರದಲ್ಲಿ ತನ್ನ ಎಲ್ಲಾ ಅವತಾರಗಳ ರೂಪದಲ್ಲಿ ನೆಲೆಸಿರುತ್ತಾಳೆ ಎಂಬ ನಂಬಿಕೆ ಆಸ್ತಿಕರಲ್ಲಿ ಮನೆ ಮಾಡಿದೆ.

ಶಿವನಿಗೆ ಬಿಲ್ವ ಮರದ ತ್ರಿಕೋನ ಎಲೆಗಳು ಅಥವಾ ಬಿಲ್ವ ಮರದ 3 ಚಿಗುರೆಲೆಗಳನ್ನು ಅರ್ಪಿಸಿದರೆ ಶಿವ ಪೂಜೆ ಫಲಪ್ರದವಾಗುತ್ತದೆ ಎಂಬ ನಂಬಿಕೆಯಿದೆ.

ಶಿವ ಬಿಲ್ವ ಶ್ಲೋಕ

ಮೂಲತೋಭವರೂಪಾಯ ಮಧ್ಯತೋ ಮೃದುರೂಪಿಣಿ

ಅಗ್ರತಃ ಶಿವರೂಪಾಯ ಪತ್ರೈರ್ವೇದಸ್ವರೂಪಿಣಿ

ಸ್ಕಂಧೇ ವೇದಾಂತರೂಪೆಯ ತರುರಾಜಯಃ ತೆ ನಮಃ

ಬಿಲ್ವ ಮರದ ಮೂಲ ಶಿವನ ಭಾವ ರೂಪ , ಮರದ ಆರಂಭದ ಭಾಗ ಶಿವನ ರೂಪ , ಮೂರು ಎಲೆಗಳು ಮೂರು ವೇದಗಳು ಮತ್ತು ಕೊಂಬೆಗಳು ಉಪನಿಷತ್ತುಗಳು
ನೀನೊಂದು ದೇವ ಮರ , ಒ ಮರಗಳ ರಾಜ ನಿನಗೆ ವಂದಿಸುತ್ತೇನೆ.

ಸರ್ವಕಾಮಪ್ರದಾಮ್ ಬಿಲ್ವಮ್ ದಾರಿದ್ರ್ಯಸ್ಯ ಪ್ರಣಾಶನಂ

ಬಿಲ್ವಾತ್ಪಾತ್ರಂ ನಾಸ್ಟಿ ಯೇನ ತುಷ್ಯತಿ ಶಂಕರ

ಬಿಲ್ವ ಮರ ಇಚ್ಛೆ ಪೂರೈಸಿ ,ಬಡತನ ತೆಗೆದುಹಾಕುತ್ತದೆ. ಶಿವನಿಗೆ ಬಿಲ್ವ ದಷ್ಟು ಸಂತೋಷ ಬೇರಾವುದೇ ಗಿಡವು ನೀಡುವುದಿಲ್ಲ.

ಬಿಲ್ವ ಎಲೆಯನ್ನು ಪೂಜೆಗೆ ಆರಿಸುವುದು ಹೀಗೆ ?

ಎಳೆಯ ಮೇಲೆ ಯಾವುದೇ ಬಿರುಕುಗಳು , ಬಿಳಿಯ ಮಚ್ಚೆಗಳು ಇರಬಾರದು , ಹುಳು ಉಪ್ಪಟೆಗಳಿಂದ ಎಲೆಯು ಹಾಳಾಗಿರಬಾರದು .

ಬಿಲ್ವ ಪತ್ರೆ ಸಮರ್ಪಿಸುವಾಗ ಹೇಳುವ ಲಿಂಗಾಷ್ಟಕ ಮಂತ್ರ ಇಲ್ಲಿದೆ ಕೇಳಿ :

ಬಿಲ್ವದ ಆರೋಗ್ಯಕರ ಲಾಭಗಳು

ಬಿಲ್ವಪತ್ರೆಗಳನ್ನು ಪ್ರತೀದಿನ ನೀರಿಗೆ ಹಾಕಿ ಮೂರು ಗಂಟೆಗಳ ನಂತರ ಆ ನೀರನ್ನು ಸೇವಿಸಿದರೆ ಆರೋಗ್ಯ ಉತ್ತಮಗೊಳ್ಳುತ್ತದೆ. ಬಿಲ್ವಪತ್ರೆಯ ಕಾಯಿಯನ್ನು ದೇವರ ಕೋಣೆ ಮತ್ತು ಮನೆಯ ಹಾಲ್‍ನ ಈಶಾನ್ಯ ಮೂಲೆಯಲ್ಲಿ ಕಟ್ಟಿದರೆ ವಾಸ್ತುದೋಷ ನಿವಾರಣೆಯಾಗುತ್ತದೆ. ಪ್ರತಿದಿನ ಬೆಳಿಗ್ಗೆ ಎದ್ದ ನಂತರ ಬಿಲ್ವಪತ್ರೆ ಮರವನ್ನು ವೀಕ್ಷಿಸಿದರೆ ಆದಿನ ಪೂರ್ತಿ ಸಂತೋಷದಿಂದಿರಬಹುದು. ಒಣಗಿದ ಬಿಲ್ವಪತ್ರೆಯ ಕಷಾಯ ಮಾಡಿ ಸೇವಿಸಿದರೆ ಕೆಮ್ಮು, ನೆಗಡಿ ಬರುವುದಿಲ್ಲ.

ಆಯುರ್ವೇದದ ಪ್ರಕಾರ ಬಿಲ್ವ ಪತ್ರೆಯಲ್ಲಿ ಹಲವಾರು ಔಷಧೀಯ ಗುಣಗಳು ಇವೆಯಂತೆ. ಆ ಮೂರು ಎಲೆಗಳ ಗುಚ್ಛವು ಸತ್ವ, ರಜಸ್ ಮತ್ತು ತಮಸ್ಸು ಎಂಬ ಗುಣಗಳನ್ನು ಸೂಚಿಸುತ್ತದೆಯಂತೆ. ಸತ್ವ ಗುಣವೆಂದರೆ ಧನಾತ್ಮಕ ಗುಣಗಳು ಮತ್ತು ತಮಸ್ಸು ಎಂದರೆ ನಕಾರಾತ್ಮಕ ಗುಣಗಳನ್ನು ಸೂಚಿಸುತ್ತದೆ.

ಯಾರು ಈ ಎಲೆಗಳನ್ನು ಸ್ಪರ್ಶಿಸುತ್ತಾರೋ ಅವರಿಗೆ ಈ ಎಲೆಗಳಲ್ಲಿರುವ ಧನಾತ್ಮಕ ಶಕ್ತಿಯು ಸಂಚಯವಾಗುತ್ತದೆಯಂತೆ. ಆದ್ದರಿಂದಲೇ ಇದನ್ನು ಸ್ಪರ್ಶಿಸಿದರೆ ಪಾಪ ಕರ್ಮಗಳಿಂದ ಮುಕ್ತಿಯನ್ನು ಪಡೆಯುತ್ತಾರೆ ಎಂದು ಹೇಳಲಾಗುತ್ತದೆ.

ಇದರ ಜೊತೆಗೆ ಬಿಲ್ವ ಪತ್ರೆಯ ಬೇರು, ತೊಗಟೆ, ಎಲೆಗಳು, ಹಣ್ಣುಗಳು ಪ್ರತಿಯೊಂದು ಸಹ ವಿವಿಧ ಬಗೆಯ ಔಷಧೀಯ ಗುಣಗಳನ್ನು ಹೊಂದಿದೆಯಂತೆ. ಈ ಪವಿತ್ರ ಮರವು ಹಲ್ಲುಗಳಲ್ಲಿ ರಕ್ತ ಸ್ರಾವವನ್ನು, ಡೈಸೆಂಟ್ರಿ (ಭೇದಿ), ಅಸ್ತಮಾ, ಕಾಮಾಲೆ, ಅನಿಮಿಯಾ ಇತ್ಯಾದಿಗಳನ್ನು ನಿವಾರಿಸುವ ಗುಣಗಳನ್ನು ಹೊಂದಿದೆಯಂತೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top