fbpx
ಸಮಾಚಾರ

ಸೆಪ್ಟೆಂಬರ್ 02: ಇಂದಿನ ಪಂಚಾಂಗ ಮತ್ತು ದಿನ ಭವಿಷ್ಯ

ಸೆಪ್ಟೆಂಬರ್ 2, 2023 ಶನಿವಾರ
ವರ್ಷ : 1945, ಶೋಭಾಕೃತ
ತಿಂಗಳು : ಶ್ರಾವಣ, ಪಕ್ಷ : ಕೃಷ್ಣಪಕ್ಷ

Panchangam
ತಿಥಿ : ತೃತೀಯಾ : Sep 01 11:50 pm – Sep 02 08:49 pm; ಚತುರ್ಥೀ : Sep 02 08:49 pm – Sep 03 06:24 pm
ನಕ್ಷತ್ರ : ಉತ್ತರಾ ಭಾದ್ರ: Sep 01 02:56 pm – Sep 02 12:30 pm; ರೇವತಿ: Sep 02 12:30 pm – Sep 03 10:38 am
ಯೋಗ : ಶೂಲ: Sep 01 01:09 pm – Sep 02 09:22 am; ಗಂಡ: Sep 02 09:22 am – Sep 03 06:00 am; ವೃದ್ಹಿ: Sep 03 06:00 am – Sep 04 03:11 am
ಕರಣ : ವಾಣಿಜ: Sep 01 11:50 pm – Sep 02 10:16 am; ವಿಷ್ಟಿ: Sep 02 10:16 am – Sep 02 08:49 pm; ಬಾವ: Sep 02 08:49 pm – Sep 03 07:32 am

Time to be Avoided
ರಾಹುಕಾಲ : 9:15 AM to 10:47 AM
ಯಮಗಂಡ : 1:51 PM to 3:23 PM
ದುರ್ಮುಹುರ್ತ : 07:50 AM to 08:39 AM
ವಿಷ : 11:34 PM to 01:03 AM
ಗುಳಿಕ : 6:12 AM to 7:43 AM

Good Time to be Used
ಅಮೃತಕಾಲ : 08:11 AM to 09:38 AM
ಅಭಿಜಿತ್ : 11:54 AM to 12:43 PM

Other Data
ಸೂರ್ಯೋದಯ : 6:12 AM
ಸುರ್ಯಾಸ್ತಮಯ : 6:26 PM

 

 

 
 

ಆಶಾವಾದ ಮತ್ತು ಧನಾತ್ಮಕ ಚಿಂತನೆ ನಿಮ್ಮ ಸುತ್ತಲಿರುವ ಜನರನ್ನು ಪ್ರಭಾವಿತರನ್ನಾಗಿಸುವುದು. ಈ ದಿನ ಶುಭವಾರ್ತೆ ಕೇಳುವಿರಿ. ಮಕ್ಕಳೊಡನೆ ನಕ್ಕು ನಲಿಯುವಿರಿ. ಆರ್ಥಿಕ ಸ್ಥಿತಿ ಉತ್ತಮವಿದ್ದು ಬೆಲೆ ಬಾಳುವ ವಸ್ತುಗಳನ್ನು ಖರೀದಿ ಮಾಡುವಿರಿ.

ವಿವಿಧ ಮೂಲಗಳಿಂದ ಹಣ ಬರುವ ಸಾಧ್ಯತೆ. ಹಣವನ್ನು ಸರಿಯಾದ ರೀತಿಯಲ್ಲಿ ಬಳಸಿರಿ. ಬಂಧುವರ್ಗದಿಂದ ಅಶುಭವಾರ್ತೆ ಕೇಳುವಿರಿ. ಪ್ರಯಾಣದಲ್ಲಿ ಎಚ್ಚರ.

ಮನಸ್ಸಿನ ಕಾಮನೆಗಳು ಪೂರ್ತಿಗೊಳ್ಳುವುದು. ಹೊರಗಿನ ಕೆಲಸ ಸಾಧಿಸುವಲ್ಲಿ ಸಫಲರಾಗುತ್ತೀರಿ. ಹಳೆಯ ಸ್ನೇಹಿತರು ನಿಮಗೆ ಸಹಾಯ ಮಾಡುತ್ತಾರೆ. ಅಪರಿಚಿತ ವ್ಯಕ್ತಿಗಳೊಂದಿಗೆ ವ್ಯವಹಾರ ಬೇಡ. ಕೌಟುಂಬಿಕವಾಗಿ ನೆಮ್ಮದಿಯ ದಿನ. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು.

ಆಶಾವಾದಿಗೆ ಜೀವನ ನಿರಾಶಾವಾದಿಗೆ ಅಲ್ಲ, ಅಂತೆಯೇ ಇಂದು ನೀವು ಆಶಾವಾದಿಗಳಾಗಿದ್ದೀರಿ. ಇದರಿಂದ ಬಹುನಿರೀಕ್ಷಿತ ಫಲಿತಾಂಶವನ್ನು ಕಾಣುವಿರಿ. ಹಣಕಾಸಿನ ಬಗ್ಗೆ ಜಾಗ್ರತರಾಗಿರಿ. ಪ್ರಯಾಣದಲ್ಲಿ ತುಸು ಎಚ್ಚರಿಕೆ ಅಗತ್ಯ.

 

ಗುರಿ ಸಾಧಿಸುವಲ್ಲಿ ಸಫಲರಾಗುತ್ತೀರಿ. ಹಳೆಯ ಸ್ನೇಹಿತರು ನಿಮಗೆ ಸಹಾಯ ಮಾಡುತ್ತಾರೆ. ಅಪರಿಚಿತ ವ್ಯಕ್ತಿಗಳೊಂದಿಗೆ ವ್ಯವಹಾರ ಸಲ್ಲದು. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು. ಕುಟುಂಬದ ಸದಸ್ಯರೊಡನೆ ಕಾಲ ಕಳೆಯುವಿರಿ.

 

ಆದದ್ದೆಲ್ಲಾ ಒಳಿತೇ ಆಯಿತು ಎಂಬಂತೆ ಈದಿನ ಏನೇ ಆದರೂ ಅದು ನಿಮ್ಮ ಒಳ್ಳೆಯದಕ್ಕೆ ಆಗಲಿದೆ. ವೃಥಾ ಚಿಂತನೆ ಮಾಡದೆ ಸಕರಾತ್ಮಕವಾಗಿ ಚಿಂತಿಸಿ ಯಶಸ್ಸನ್ನು ಹೊಂದುವಿರಿ.

 

ನಿಮ್ಮ ಹಿತಚಿಂತಕರನ್ನು ಅಥವಾ ನಿಮ್ಮನ್ನು ಬೆಂಬಲಿಸುವ ಸ್ನೇಹಿತರನ್ನು ಸಂಪರ್ಕಿಸುವುದರಿಂದ ನಿಮ್ಮ ಮನಸ್ಸಿನ ತಾಕಲಾಟಕ್ಕೆ ಉತ್ತರ ದೊರೆಯುವುದು. ಮತ್ತು ಹಣಕಾಸಿನ ನೆರವು ದೊರೆಯುವುದು. ಆರೋಗ್ಯ ಉತ್ತಮವಾಗಿರುವುದು.

 

ವದಂತಿ ಹರಡುವವರನ್ನು ಸಮೀಪ ಇಟ್ಟುಕೊಳ್ಳಬೇಡಿರಿ. ಒಂದು ಚಿಕ್ಕ ವದಂತಿಯು ನಿಮ್ಮ ತೇಜೋವಧೆಯನ್ನು ಮಾಡಲಿರುವುದು. ಆ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿರಿ. ಸಂಜೆಯ ವೇಳೆಗೆ ಆ ವದಂತಿಯು ಸುಳ್ಳೆಂದು ಗೋಚರಿಸುವುದು.

 

ಮನಸ್ಸಿನ ತಾಕಲಾಟದಲ್ಲಿ ಗೊಂದಲ ಏರ್ಪಡುವುದು. ದೈವ ಕಾರ್ಯಗಳು ಮನಸ್ಸಿಗೆ ನೆಮ್ಮದಿ ನೀಡುವುದು. ಆರೋಗ್ಯದ ಕಡೆ ಗಮನ ಹರಿಸುವುದು ಒಳ್ಳೆಯದು. ದೂರ ಪ್ರಯಾಣದ ಸಾಧ್ಯತೆ ಇರುವುದು. ಇಂದು ಲಾಭಾಂಶ ಕಡಿಮೆ.

ಒಳ್ಳೆಯ ದಿನಗಳು ನಿಮ್ಮ ಪಾಲಿಗೆ ಶುರುವಾಗಿವೆ. ಯಾವ ಕೆಲಸವನ್ನಾದರೂ ನಿಭಾಯಿಸುವ ಮಾನಸಿಕ ಶಕ್ತಿ ಗಳಿಸಿಕೊಂಡಿದ್ದೀರಿ. ಅವಕಾಶಗಳ ಹೆಬ್ಬಾಗಿಲು ತೆರೆದುಕೊಂಡಿರುವುದನ್ನು ಗಮನಿಸಿ ಅಚ್ಚರಿ ಪಡುವಿರಿ. ಅದನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಿ.

 

ಹೊರಗಿನ ಕಳ್ಳರನ್ನು ಹಿಡಿಯಬಹುದು. ಮನೆಯ ಕಳ್ಳರನ್ನು ಹಿಡಿಯುವುದು ಕಷ್ಟ. ಅಂತೆಯೇ ನೀವು ಯಾರನ್ನು ಗೌರವದಿಂದ ಕಾಣುತ್ತಿರುವಿರೋ ಅವರನ್ನು ಅವಮಾನಿಸಬೇಡಿ. ಭಿನ್ನಾಭಿಪ್ರಾಯವಿದ್ದರೆ ಒಂದೆಡೆ ಸೇರಿ ಬಗೆಹರಿಸಿಕೊಳ್ಳಿ.

 

ಹಳೆಯ ವೈಭವವನ್ನು ನೆನೆಯುತ್ತ ಕೂತರೆ ಭವಿಷ್ಯ ಉಜ್ವಲವಾಗುವುದಿಲ್ಲ. ಭವಿಷ್ಯದ ಬಗ್ಗೆ ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ಮುಖ್ಯವಾಗಿ ಆಲಸ್ಯದಿಂದ ಇಂದು ಹೊರಬರಬೇಕು.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top