fbpx
ಸಮಾಚಾರ

ಸಚಿನ್, ಗವಾಸ್ಕರ್, ಕೊಹ್ಲಿ ಅಲ್ಲ… ಭಾರತದ ಅತ್ಯುತ್ತಮ ಬ್ಯಾಟ್ಸ್‌ಮನ್ ಅವರೇ: ಗಂಭೀರ್ ಹೇಳಿದ್ದು ಯಾರ ಬಗ್ಗೆ ಗೊತ್ತಾ?

ಸಚಿನ್ ತೆಂಡೂಲ್ಕರ್ ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಅತ್ಯುತ್ತಮ ಬ್ಯಾಟ್ಸ್‌ಮನ್. ಇಲ್ಲದಿದ್ದರೆ ಈಗಿನ ಪೀಳಿಗೆಯಲ್ಲಿ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿಯತ್ತ ವಾಲುತ್ತಾರೆ. ಆದರೆ ಭಾರತದ ಮಾಜಿ ಆರಂಭಿಕ ಆಟಗಾರ ಗೌತಮ್ ಗಂಭೀರ್ ಅವರ ದೃಷ್ಟಿಯಲ್ಲಿ ಇವರಿಬ್ಬರೂ ಅತ್ಯುತ್ತಮ ಬ್ಯಾಟ್ಸ್‌ಮನ್ ಅಲ್ಲ.

ವಿವೇಕ್ ಬಿಂದ್ರಾ ನಡೆಸಿಕೊಡುವ ದಿ ಬಡಾ ಭಾರತ್ ಶೋನಲ್ಲಿ ಗೌತಮ್ ಗಂಭೀರ್ ಭಾಗವಹಿಸಿದ್ದರು. ಭಾರತೀಯ ಕ್ರಿಕೆಟ್‌ನಲ್ಲಿ ಇಲ್ಲಿಯವರೆಗೆ ಉತ್ತಮ ಬ್ಯಾಟ್ಸ್‌ಮನ್ ಯಾರು ಎಂದು ಗಂಭೀರ್ ಅವರನ್ನು ಕೇಳಲಾಯಿತು. ವಿವೇಕ್ ಬಿಂದ್ರಾ ಅವರು ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ, ಸುನಿಲ್ ಗವಾಸ್ಕರ್ ಅವರಂತಹ ದಿಗ್ಗಜ ಆಟಗಾರರ ಹೆಸರನ್ನು ಆಯ್ಕೆಯಾಗಿ ನೀಡಿದರು. ಆದರೆ ಗೌತಮ್ ಗಂಭೀರ್ ಅವರು ಈ ಮೂರು ಹೆಸರು ಬಿಟ್ಟು ಯುವರಾಜ್ ಸಿಂಗ್ ಭಾರತಕ್ಕೆ ಉತ್ತಮ ಬ್ಯಾಟ್ಸ್‌ಮನ್ ಎಂದು ಉತ್ತರಿಸಿದರು.

ಅದೇ ರೀತಿ ಟೀಂ ಇಂಡಿಯಾದ ಬೆಸ್ಟ್ ಕ್ಯಾಪ್ಟನ್ ಯಾರು ಎಂಬ ಬಗ್ಗೆ ಗಂಭೀರ್ ತಮ್ಮದೇ ಶೈಲಿಯಲ್ಲಿ ಉತ್ತರ ನೀಡಿದ್ದಾರೆ. ಭಾರತದ ಅತ್ಯುತ್ತಮ ನಾಯಕ ಯಾರು ಎಂಬುದಕ್ಕೆ ಕಪಿಲ್ ದೇವ್, ಗಂಗೂಲಿ, ಧೋನಿ ಮತ್ತು ಕೊಹ್ಲಿ ಹೆಸರನ್ನು ಆಯ್ಕೆಯಾಗಿ ನೀಡಲಾಯಿತು, ಆದರೆ ಗಂಭೀರ್ ಅವರು ಅನಿಲ್ ಕುಂಬ್ಳೆ ಅವರನ್ನು ಆಯ್ಕೆ ಮಾಡಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top