fbpx
ಸಮಾಚಾರ

ಸೆಪ್ಟೆಂಬರ್ 11: ಇಂದಿನ ಪಂಚಾಂಗ ಮತ್ತು ದಿನ ಭವಿಷ್ಯ

ಸೆಪ್ಟೆಂಬರ್ 11, 2023 ಸೋಮವಾರ
ವರ್ಷ : 1945, ಶೋಭಾಕೃತ
ತಿಂಗಳು : ಶ್ರಾವಣ, ಪಕ್ಷ : ಕೃಷ್ಣಪಕ್ಷ

Panchangam
ತಿಥಿ : ದ್ವಾದಶೀ : Sep 10 09:28 pm – Sep 11 11:52 pm; ತ್ರಯೋದಶೀ : Sep 11 11:52 pm – Sep 13 02:21 am
ನಕ್ಷತ್ರ : ಪುಷ್ಯ: Sep 10 05:06 pm – Sep 11 08:01 pm; ಆಶ್ಲೇಷ: Sep 11 08:01 pm – Sep 12 11:01 pm
ಯೋಗ : ಪರಿಘ: Sep 10 11:19 pm – Sep 12 12:13 am; ಶಿವ: Sep 12 12:13 am – Sep 13 01:11 am
ಕರಣ : ಕುಲವ: Sep 10 09:28 pm – Sep 11 10:39 am; ತೈತುಲ: Sep 11 10:39 am – Sep 11 11:52 pm; ಗರಿಜ: Sep 11 11:52 pm – Sep 12 01:07 pm

Time to be Avoided
ರಾಹುಕಾಲ : 7:43 AM to 9:14 AM
ಯಮಗಂಡ : 10:45 AM to 12:16 PM
ದುರ್ಮುಹುರ್ತ : 12:40 PM to 01:29 PM, 03:06 PM to 03:54 PM
ವಿಷ : 10:25 AM to 12:13 PM
ಗುಳಿಕ : 1:47 PM to 3:18 PM

Good Time to be Used
ಅಮೃತಕಾಲ : 12:50 PM to 02:38 PM
ಅಭಿಜಿತ್ : 11:52 AM to 12:40 PM

Other Data
ಸೂರ್ಯೋದಯ : 6:12 AM
ಸುರ್ಯಾಸ್ತಮಯ : 6:20 PM

 

 

 
 

 

ಪ್ರಶ್ನಿಸದೆ ಯಾವುದನ್ನೂ ಒಪ್ಪಿಕೊಳ್ಳಬೇಡಿ. ಒರಟುತನದಿಂದ ಪ್ರಶ್ನಿಸುವುದು ಕೆಲವೊಮ್ಮೆ ಅನಿವಾರ್ಯವಾಗುವುದು. ಮಾಡುವ ಕೆಲಸವನ್ನು ನಿಷ್ಟೆಯಿಂದ ಮಾಡಿ. ಭಗವಂತ ನಿಮ್ಮ ಕಾರ್ಯದಲ್ಲಿ ಯಶಸ್ಸನ್ನು ನೀಡುವನು.

 

ಮುಂಗೋಪದ ಸ್ವಭಾವವನ್ನು ಕಡಿಮೆ ಮಾಡಿಕೊಳ್ಳುವುದು ಒಳ್ಳೆಯದು. ಪ್ರಯಾಣ ಕಾಲದಲ್ಲಿ ಆದಷ್ಟು ಜಾಗ್ರತೆ ವಹಿಸಿ. ಹಣಕಾಸಿನ ವಿಷಯದಲ್ಲಿ ತುಸು ನೆಮ್ಮದಿ ಕಾಣುವಿರಿ. ಮಕ್ಕಳು ವಿದ್ಯಾಭ್ಯಾಸದಲ್ಲಿ ಪ್ರಗತಿಯನ್ನು ಕಾಣುವರು.

 

ಮಾತಿನ ಚಾಲಾಕಿತನ ಎಲ್ಲಾ ಕಡೆ ನಡೆಯುವುದಿಲ್ಲ ಎಂಬ ಸತ್ಯ ನಿಮಗೆ ಮನವರಿಕೆ ಆಗಲಿದೆ. ನಿಮ್ಮ ಪ್ರಾಮಾಣಿಕ ಪ್ರಯತ್ನಕ್ಕೆ ಯಾವಾಗಲೂ ಬೆಲೆ ಇದ್ದೇ ಇರುತ್ತದೆ. ಹಾಗಾಗಿ ಅಗತ್ಯಕ್ಕೆ ತಕ್ಕಷ್ಟು ಮಾತನಾಡುವುದು ಒಳ್ಳೆಯದು.

 

ಕೇವಲ ಹಗಲುಗನಸು ಕಾಣುವುದನ್ನು ಬಿಡಿ. ನಿಮಗೆ ಮಾಡಲು ಸಾಧ್ಯವಾದುದನ್ನೆ ಆಯ್ಕೆ ಮಾಡಿಕೊಂಡು ಕೆಲಸ ಪೂರೈಸಿ. ಗೆಳೆಯರ ಒತ್ತಾಯದ ಮೇರೆಗೆ ಬಹುಪ್ರಮುಖ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕಾಗುವುದು

 

 

ದಿನದಿಂದ ದಿನಕ್ಕೆ ಅಭಿವೃದ್ಧಿಯನ್ನು ಹೊಂದುತ್ತಿರುವ ನಿಮ್ಮನ್ನು ಕಂಡು ಇತರರು ಅಸೂಯೆ ಪಡುವರು. ಆ ಬಗ್ಗೆ ತಲೆ ಕೆಡಿಸಿಕೊಳ್ಳದೆ ನಿಮ್ಮ ಕಾರ್ಯದಲ್ಲಿ ತಲ್ಲೀನರಾಗಿ.

 

 

ಕಾಡಿನಲ್ಲಿ ಹುಡುಕುತ್ತಿದ್ದ ಬಳ್ಳಿ ಕಾಲಿಗೆ ತೊಡರಿಕೊಂಡಂತೆ ನಿಮ್ಮ ಪ್ರಯತ್ನಕ್ಕೆ ಭಗವಂತನು ಒಲಿದು ಬರುವನು. ಮನೆ ಬಾಗಿಲಿಗೆ ನಿಮ್ಮ ಕಾರ್ಯಗಳ ಸಫಲತೆಯ ಬಗ್ಗೆ ವಾರ್ತೆ ಬರುವುದು

 

 

ನಿಮ್ಮನ್ನು ಸುಮ್ಮನೆ ಒತ್ತಡದಲ್ಲಿರಿಸುವ ಕಾರ್ಯತಂತ್ರವನ್ನು ರೂಪಿಸುವ ಗೆಳೆಯರಿಂದ ದೂರವಿರಿ. ಸಂಗಾತಿಯ ಸಕಾಲಿಕ ಎಚ್ಚರಿಕೆಯಿಂದ ಅಧಿಕ ಲಾಭ ಅಥವಾ ನೆಮ್ಮದಿ ಉಂಟಾಗುವುದು.

 

 

ಹಳೆಯ ಕಡತಗಳನ್ನು ಸೂಕ್ಷ ್ಮವಾಗಿಯೇ ಪರಿಶೀಲಿಸಿ ವಿಲೇವಾರಿ ಮಾಡಿ. ಸ್ನೇಹಿತರ ಇಲ್ಲವೆ ಬಂಧುಗಳ ಸಹಕಾರವನ್ನು ಪಡೆಯಿರಿ. ಹಣಕಾಸಿನ ಪರಿಸ್ಥಿತಿ ಅಷ್ಟೇನೂ ಆಶಾದಾಯಕವಾಗಿಲ್ಲದ ಕಾರಣ ಹಣವನ್ನು ಮಿತವಾಗಿ ಬಳಸಿ.

ನೀವು ಎಷ್ಟೇ ಎಚ್ಚರಿಕೆ ವಹಿಸಿದರೂ ಕಚೇರಿಯ ಕೆಲಸ ಕಾರ್ಯಗಳಲ್ಲಿ ತಪ್ಪುಗಳು ನುಸುಳುತ್ತವೆ. ಅದನ್ನು ಪ್ರಾಂಜ್ವಲ ಮನಸ್ಸಿನಿಂದ ಒಪ್ಪಿಕೊಳ್ಳುವುದರಿಂದ ಮೇಲಾಧಿಕಾರಿಗಳ ಮೆಚ್ಚುಗೆ ಪಡೆಯುವಿರಿ.

 

 

ನಿಮ್ಮ ಕೆಲಸ ಕಾರ್ಯಗಳನ್ನು ಸಾರ್ಥಕವಾಗಿಸಲು ನಿಮ್ಮ ಮಕ್ಕಳು ನಿಮಗೆ ಸಹಕಾರಿಯಾಗಿ ನಿಲ್ಲುವರು. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ. ಬೆಳ್ಳಗೆ ಇರುವುದೆಲ್ಲಾ ಹಾಲು ಎಂದು ನಂಬಿ ಮೋಸ ಹೋಗದಿರಿ.

 

ಕಾರಣವಿರದ ಚಿಂತೆ ಹಾಗೂ ಖಿನ್ನತೆಗಳನ್ನು ಬಿಟ್ಟು ಗೆಳೆಯರೊಂದಿಗೆ ಚರ್ಚಿಸಿ. ಒಳಿತಿನ ದಾರಿ ನಿಮಗೆ ಗೋಚರವಾಗುವುದು. ಆಂಜನೇಯ ದೇವಸ್ಥಾನಕ್ಕೆ ತಪ್ಪದೇ ಹೋಗಿ ಬನ್ನಿ. ಭಗವಂತ ನಿಮಗೆ ಅಭಯ ನೀಡುವನು.

 

ಕೆಲಸದ ಸ್ಥಳದಲ್ಲಿ ಉತ್ಸಾಹದಾಯಕ ಹಾಗೂ ಚೈತನ್ಯದಾಯಕ ಪ್ರಚೋದಕ ಬೆಳವಣಿಗೆಗಳು ಉಂಟಾಗುವವು. ನಿಮಗೆ ಸಹಾಯ ಸಹಕಾರ ನೀಡಿದ ಗುರುಹಿರಿಯರನ್ನುಗೌರವಿಸಿ ಮುಂದೆ ಉತ್ತಮ ದಿನಗಳಿವೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top