ಈ ಜಗತ್ತಿನಲ್ಲಿ ಪ್ರತಿಯೊಬ್ಬರಿಗೂ ನಿಜವಾದ ಹೆಸರು ಮತ್ತು ಅಡ್ಡಹೆಸರು ಇರುತ್ತದೆ. ಕೆಲವು ಜನರಿಗೆ ಅವರ ಪೋಷಕರು ಅಡ್ಡಹೆಸರುಗಳನ್ನು ನೀಡಿದರೆ, ಇತರರು ಅವರ ಕಾರ್ಯಗಳು ಮತ್ತು ನಡವಳಿಕೆಯಿಂದಾಗಿ ಅಡ್ಡಹೆಸರುಗಳನ್ನು ಪಡೆಯುತ್ತಾರೆ. ಎಲ್ಲರಂತೆ ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿಗೂ ಅಡ್ಡಹೆಸರು ಇದೆ. ಅದು ‘ಚೀಕೂ’. ಆದರೆ ಇವರಿಗೆ ಆ ಹೆಸರನ್ನು ಇಟ್ಟವರು ಯಾರು?ಇದರ ಹಿಂದಿನ ಸಂಗತಿಗಳನ್ನು ನೋಡೋಣ.
ವಿರಾಟ್ ಕೊಹ್ಲಿಯ ನಿಕ್ ನೇಮ್ ‘ಚೀಕೂ’ ಎಂಬುದು ಗೊತ್ತೇ ಇದೆ. ಆದರೆ ಈ ಹೆಸರು ಜನಪ್ರಿಯವಾಗಲು ಕಾರಣ ಭಾರತದ ಮಾಜಿ ನಾಯಕ ಎಂಎಸ್ ಧೋನಿ. ಆಟದ ಸಮಯದಲ್ಲಿ ಕೊಹ್ಲಿಯನ್ನು ಕರೆಯಲು ಮಾಹಿ ಆಗಾಗ್ಗೆ ಚೀಕೂ ಎಂಬ ಹೆಸರನ್ನು ಬಳಸುತ್ತಿದ್ದರು. ವಿಕೆಟ್‌ಗಳ ಹಿಂದಿನಿಂದ ಪದೇ ಪದೇ ಕರೆದಾಗ ಸ್ಟಂಪ್ ಮೈಕ್‌ನಲ್ಲಿ ನಲ್ಲಿ ರೆಕಾರ್ಡ್ ಆಗಿ ಕೇಳಿಸುತ್ತಿತ್ತು. ಆದರೆ ಕೊಹ್ಲಿಗೆ ಆ ಹೆಸರನ್ನು ಇಟ್ಟಿದ್ದು ಧೋನಿಯಲ್ಲ ಬದಲಾಗಿ ಕೊಹ್ಲಿ ಅವರ ಬಾಲ್ಯದ ಕೋಚ್.
ಹೌದು, ಈ ವಿಚಾರವನ್ನು ಸ್ವತಃ ವಿರಾಟ್ ಕೊಹ್ಲಿ ಅವರೇ ಹೇಳಿಕೊಂಡಿದ್ದಾರೆ. ರಣಜಿ ಟ್ರೋಫಿ ದಿನಗಳಲ್ಲಿ ಅಲ್ಲಿನ ಕೋಚ್ ನನಗೆ ‘ಚೀಕೂ’ ಎಂದು ಅಡ್ಡ ಹೆಸರಿಟ್ಟಿದ್ದರು. ಆಗ ನನಗೆ ದೊಡ್ಡ ಕೆನ್ನೆಗಳಿದ್ದವು. 2007 ರಲ್ಲಿ, ನನ್ನ ಕೂದಲು ಉದುರುತ್ತಿರುವಾಗ ನಾನು ಸಣ್ಣ ಕ್ಷೌರ ಮಾಡಿಸಿಕೊಂಡೆ. ಅದು ನನ್ನ ಕೆನ್ನೆ ಮತ್ತು ಕಿವಿಗಳು ದೊಡ್ಡದಾಗಿ ಕಾಣುವಂತೆ ಮಾಡಿತು. ಕಾರ್ಟೂನ್‌ನಲ್ಲಿರುವ ಮೊಲದ ಪಾತ್ರಕ್ಕೆ ಚೀಕೂ ಎಂದು ಹೆಸರಿಡಲಾಗಿದೆ. ಹೀಗಾಗಿ ನನಗೆ ಆ ಹೆಸರು ಬಂದಿದೆ’ ಎಂದು ಕೊಹ್ಲಿ ಹೇಳಿದ್ದಾರೆ.
ಆದರೆ ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಚೀಕೂ ಹೆಸರನ್ನು ಫೇಮಸ್ ಮಾಡಿದರು ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ. ‘ನನ್ನ ಅಡ್ಡಹೆಸರನ್ನು ಎಲ್ಲರಿಗೂ ತಿಳಿಯಪಡಿಸಿದವರು ಎಂಎಸ್ ಧೋನಿ. ವಿಕೆಟ್ ಹಿಂದಿನಿಂದ ಮಾಹಿ ಆಗಾಗ ನನ್ನನ್ನು ಚೀಕೂ, ಚೀಕೂ ಎಂದು ಕರೆಯುತ್ತಿದ್ದರು ಎಂದು ಕೊಹ್ಲಿ ಹೇಳಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
