fbpx
ಸಮಾಚಾರ

ಕುಜದೋಷಕ್ಕೆ ಏನು ಪರಿಹಾರ ಗೊತ್ತಾ? ಇಲ್ಲಿದೆ ಪರಿಹಾರ ಸೂತ್ರಗಳು

ಮಂಗಳ ದೋಷ ಅಥವಾ ಕುಜ ದೋಷ ಇದು ಒಬ್ಬ ವ್ಯಕ್ತಿಯ ಜನ್ಮಜಾತಕ ಅಥವಾ ಜನ್ಮ ಕುಂಡಲಿಯಲ್ಲಿ ಇದ್ದರೆ ತುಂಬಾ ಕೆಟ್ಟದ್ದು ಎಂದು ಜ್ಯೋತಿಷ್ಯಾಸ್ತ್ರದಲ್ಲಿ ಪರಿಗಣಿಸಲಾಗಿದೆ.

ಕುಜನನ್ನು ಸಂಸ್ಕೃತದಲ್ಲಿ ಮಂಗಳ ಎಂದು ಕರೆಯಲಾಗುವುದು ಮತ್ತು ಜ್ಯೋತಿಷ್ಯದಲ್ಲಿ ಮಂಗಳನು ಒಂದು ಎರಡು ನಾಲ್ಕು ಏಳು ಎಂಟು ಮತ್ತು ಹನ್ನೆರಡನೇ ಮನೆಯಲ್ಲಿದ್ದರೆ ಒಬ್ಬ ವ್ಯಕ್ತಿಯ ಜಾತಕದಲ್ಲಿ ಇದನ್ನು ಮಂಗಳ ದೋಷ ಅಥವಾ ಕುಜ ದೋಷ ಎಂದು ಕರೆಯಲಾಗುವುದು. ಯಾವ ವ್ಯಕ್ತಿಗೆ ಈ ಗ್ರಹ ದೋಷ ಇರುವುದು ಅದು ಮಂಗಳಕರ ಅಲ್ಲವೆಂದು ಪರಿಗಣಿಸಲಾಗಿದೆ. ಅವರನ್ನು ಮಂಗಳಿಕರ ಎಂದು ಸಹ ಕರೆಯಲಾಗುತ್ತದೆ.

 

 

ಮಂಗಳ ದೋಷದ ದುಷ್ಪರಿಣಾಮಗಳು.

ಮಂಗಳ ಗ್ರಹವು ಜನ್ಮ ಜಾತಕದಲ್ಲಿ ಯಾವ ಮನೆಯಲ್ಲಿದ್ದರೆ ಎಂತಹ ಪರಿಣಾಮಗಳನ್ನು ಉಂಟು ಮಾಡುತ್ತದೆ ಎಂದು ತಿಳಿದುಕೊಳ್ಳುವುದು ಮುಖ್ಯವಾಗಿದೆ. ಹನ್ನೆರಡು ಮನೆಗಳಲ್ಲಿ ಆರು ಮನೆಯಲ್ಲಿ ಮಂಗಳ ಗ್ರಹವು ಬೇರೆ ಗ್ರಹಗಳ ಜೊತೆ ಸ್ಥಿತನಿದ್ದರೆ ಅದರ ಪರಿಣಾಮಗಳೇನು ಎಂದು ತಿಳಿಯೋಣ ಬನ್ನಿ.

ಮಂಗಳ ಗ್ರಹವು ಮೊದಲನೇ ಮನೆಯಲ್ಲಿದ್ದರೆ ಅವರು ಕ್ಷೋಭೆ ಗೊಳಗಾಗುವರು, ಆಕ್ರಮಣಕಾರಿ ಮತ್ತು ಕೆಲವು ಸಮಯದಲ್ಲಿ ತುಂಬಾ ಕ್ರೂರಿಗಳಾಗಿ ವರ್ತಿಸುತ್ತಾರೆ.ನಾಲ್ಕನೇ ಮನೆಯಲ್ಲಿ ಮಂಗಳ ಗ್ರಹವಿದ್ದರೆ ಜೀವನದಲ್ಲಿ ಸಂತೋಷ ಇರುವುದಿಲ್ಲ. ಏಳನೇ ಮನೆಯಲ್ಲಿದ್ದರೆ ಚಿಂತೆ, ಹಾನಿ ಇದು ಪ್ರೀತಿ ಪಾತ್ರರಾದವರ ಜೊತೆ ಅಂದರೆ ನಮ್ಮ ಮನಸ್ಸಿಗೆ ಹತ್ತಿರವಾದವರ ಜೊತೆಗೂ ವ್ಯತ್ಯಾಸಗಳನ್ನು ಉಂಟು ಮಾಡುತ್ತದೆ.ಮತ್ತು ಎಂಟನೇ ಮನೆಯಲ್ಲಿ ಕುಜನಿದ್ದರೆ ಸಂಗಾತಿಯ ಜೀವನದಲ್ಲಿ ಅನೇಕ ಸಮಸ್ಯೆಗಳು ಮತ್ತು ತೊಂದರೆಗಳನ್ನು ತಂದೊಡ್ಡುತ್ತದೆ.

 

ಮಂಗಳ ಗ್ರಹ ಎರಡನೇ ಮನೆಯಲ್ಲಿದ್ದರೆ…

ಎರಡನೇ ಮನೆ ಸಂಪತ್ತು ಮತ್ತು ಪರಿವಾರವನ್ನು ಸೂಚಿಸುತ್ತದೆ. ಇಂತಹ ಕುಜಗ್ರಹದ ಕೆಟ್ಟ ಗ್ರಹದ ಪರಿಣಾಮಗಳು ಆ ವ್ಯಕ್ತಿಯ ಸಂಬಂಧಗಳ ಮತ್ತು  ಅವರ  ಪರಿವಾರದವರ ಜೊತೆ ಬಿರುಕು ಬಿಡುತ್ತವೆ. ಅದು ತಮ್ಮ ಪ್ರೀತಿ ಪಾತ್ರರಿಂದ ಬೇರೆಯಾಗುವ ಹಾಗೆ ಮಾಡುವುದು.ಸತತವಾಗಿ ದಂಪತಿಗಳ ನಡುವೆ ಜಗಳ ಮತ್ತು ಕೋಪಕ್ಕೂ ಸಹ ಕಾರಣವಾಗುತ್ತದೆ. ಕುಜ ಎರಡನೇ ಮನೆಯಲ್ಲಿದ್ದರೆ ವ್ಯಕ್ತಿಯ ಮಕ್ಕಳ ಮೇಲೆ ಕೆಟ್ಟ ಪರಿಣಾಮಗಳನ್ನು ಸಹ ಬೀರುವುದು.

ಮಂಗಳ ಗ್ರಹವು ನಾಲ್ಕನೇ ಮನೆಯಲ್ಲಿದ್ದರೆ….

ಕುಜಗ್ರಹವು ನಾಲ್ಕನೇ ಮನೆಯಲ್ಲಿದ್ದರೆ ಅದು ಅಚಲವಾದ ಸಂಪತ್ತು ಮತ್ತು ಹಣಕಾಸಿನ ಹರಿವನ್ನು ಹೆಚ್ಚಿಸುತ್ತದೆ. ಆದರೆ ವೈವಾಹಿಕ ಜೀವನದಲ್ಲಿ ದಂಪತಿಗಳ ಮಧ್ಯೆ ಯಾವುದೇ ಕಾರಣಕ್ಕೂ ಹೊಂದಾಣಿಕೆಯೇ ಇರುವುದಿಲ್ಲ. ಆದರೂ ಇವರು ಇವರ ಸಂಬಂಧಿಕರನ್ನು ಈ ಸಮಸ್ಯೆಯಲ್ಲಿ ಸಿಲುಕಿಸುವುದಿಲ್ಲ.

 

 

 ಮಂಗಳ ಗ್ರಹ ಏಳನೇ ಮನೆಯಲ್ಲಿದ್ದರೆ….

ಒಬ್ಬ ವ್ಯಕ್ತಿಯ ಜನ್ಮ ಜಾತಕದಲ್ಲಿ ಏಳನೇ ಮನೆಯ ವಿವಾಹ, ಪಾಲುದಾರಿಕೆಯ ಮನೆಯಾಗಿದೆ .ಮಂಗಳ ಗ್ರಹವು ಏಳನೇ ಮನೆಯಲ್ಲಿದ್ದರೆ ಅದು ಮದುವೆಗೆ ಅಡ್ಡಿಯನ್ನುಂಟು ಮಾಡುವುದು. ಜನಗಳಿಗೆ ಈ ರೀತಿಯ ದೋಷವಿದ್ದರೆ ದಂಪತಿಗೆ ಆರೋಗ್ಯ ಸಮಸ್ಯೆ ಇರುವುದು ಅಷ್ಟೇ ಅಲ್ಲದೆ ಬಾಳ ಸಂಗಾತಿ ಸಿಗುವುದು ಮತ್ತು ಮಹಿಳೆಯರಿಗೆ ತುಂಬಾ ಕಠೋರವಾಗಿ ಮತ್ತು ಕ್ರೂರವಾಗಿ ಕೋಪೋದ್ರಿಕ್ತನಾಗಿ ಇರುವ ಗಂಡ ಸಿಗುವನು.

 ಮಂಗಳ ಗ್ರಹ ಎಂಟನೆ ಮನೆಯಲ್ಲಿದ್ದರೆ….  

ಇದು ಸಂತೋಷ ಮತ್ತು ದುಃಖದ ಸಂಕೇತವಾಗಿದೆ. ಜೀವನದಲ್ಲಿ ಮಂಗಳ ಗ್ರಹ ಈ ಮನೆಯಲ್ಲಿದ್ದರೆ ತುಂಬಾ ಕೆಟ್ಟ ಪರಿಣಾಮಗಳನ್ನು ಎದುರಿಸಬೇಕಾಗುವುದು. ಮಂಗಳ ಗ್ರಹ ಈ ಎಂಟನೆ ಮನೆಯಲ್ಲಿದ್ದರೆ ಜೀವನವೂ ಮತ್ತು ವೈವಾಹಿಕ ಜೀವನವೂ ಸಹ ತುಂಬಾ ದುಃಖದಲ್ಲಿ ಮುಳುಗಿರುತ್ತದೆ.ವಿವಾಹಿತರಲ್ಲಿ ಇದು ಅನೇಕ ಕಾರಣಗಳಿಗೆ ಹಣಕಾಸಿನ ವಿಷಯವಾಗಿರಬಹುದು, ಆರೋಗ್ಯ ಸಮಸ್ಯೆ ಮತ್ತು ಸಂಗಾತಿಯ ಸಮಸ್ಯೆ ಇತರೆ ಕಾರಣಗಳಿಗೆ ಈ ಎಂಟನೆ ಮನೆಯ ಕುಜ ಕಾರಣವಾಗುವುದು.

 

 

 ಮಂಗಳ ಗ್ರಹ ಹನ್ನೆರಡನೇ ಮನೆಯಲ್ಲಿದ್ದರೆ….

ಮಂಗಳ ಗ್ರಹ ಈ ಮನೆಯಲ್ಲಿದ್ದರೆ ಸಂತೋಷ,ಹಣ ಮತ್ತು ಶಾಂತಿ,ತೃಪ್ತಿಯೂ ಸಹ ಇರುವುದಿಲ್ಲ. ಅಲ್ಲದೆ ಒಬ್ಬರನ್ನೊಬ್ಬರು  ಅರ್ಥ ಸಹ ಮಾಡಿಕೊಳ್ಳುವುದಿಲ್ಲ. ಪ್ರೀತಿಯೂ ಇರುವುದಿಲ್ಲ.ಈ ವ್ಯಕ್ತಿಯು ಬೇರೆಯವರ ಜೊತೆ ಸಂಬಂಧ ಹೊಂದುವ ಸಾಧ್ಯತೆಗಳು ಕೂಡ ಹೆಚ್ಚಾಗಿದೆ. ಇದರ ಫಲಿತಾಂಶವಾಗಿ ಸಂಗಾತಿಯನ್ನು ನೋಯಿಸುವ ಮತ್ತು ನೋವು ಉಂಟು ಮಾಡುವ ಪ್ರವೃತ್ತಿಯಿದ್ದು ಮತ್ತು ಈ ವ್ಯಕ್ತಿಯು  ಗುಪ್ತಾಂಗ ರೋಗಗಳಿಂದ ಬಳಲುವವರು. ಈ ದೋಷ ಯಾರಿಗೆ ಬೇಕಾದರೂ ಬರಬಹುದು.

ಮಂಗಳ  ಗ್ರಹದ  ದೋಷ  ಇರುವವರಿಗೆ ನಾನು,ನನ್ನದು  ಮತ್ತು ಆತ್ಮ ಗೌರವ ಎನ್ನುವುದು ಅವರಿಗೇ ಹೆಚ್ಚಾಗಿ ಇರುವುದು. ಯಾರಿಗೆ ಕುಜ ದೋಷವೂ ಇರುವುದೋ ಅವರು ಕೆಟ್ಟ ಪ್ರಕೃತಿಯನ್ನು ಹೊಂದಿರುತ್ತಾರೆ. ಅದು ಅವರ ಸಂಬಂಧಗಳಲ್ಲಿ ಬಿರುಕು ಮೂಡಿಸುವುದು. ಅವರ ಹತ್ತಿರ ಬೆಂಕಿಯಂತಹ ಶಕ್ತಿ ಇರುವುದು. ಅದನ್ನು ಸರಿಯಾದ ಕ್ರಮದಲ್ಲಿ  ಉಪಯೋಗಿಸಿಕೊಳ್ಳಬೇಕು ಅಷ್ಟೆ .

 

 

ಜಾತಕದಲ್ಲಿ ಮಂಗಳ ದೋಷವೂ ನಿಮ್ಮ ವಿವಾಹದ ಜೀವನದಲ್ಲಿ  ನಕಾರಾತ್ಮಕ ಶಕ್ತಿಯನ್ನು ಮೂಡಿಸುತ್ತದೆ. ಮಾನಸಿಕ ಆರೋಗ್ಯ ಮತ್ತು ಹಣದ ಸಮಸ್ಯೆಗಳನ್ನು ತಂದೊಡ್ಡುತ್ತದೆ. ಆದರೆ ಮಂಗಳಿಕರ ಮಂಗಳವಾರದ ದಿನ ಹುಟ್ಟಿದರೆ ಅದರ ಕೆಟ್ಟ ಪರಿಣಾಮಗಳು ಶೂನ್ಯವಾಗುತ್ತವೆ. ಇಬ್ಬರೂ ಕುಜ ದೋಷ ಇರುವವರು ಅಂದರೆ ಮಂಗಳಿಕರು ಮದುವೆಯಾದರೆ ಮಂಗಳ ಗ್ರಹದ ಅಥವಾ ಕುಜ ದೋಷದ ಪರಿಣಾಮಗಳು ಸಹ ಶೂನ್ಯವಾಗುತ್ತದೆ.ಇದರಿಂದ ಯಾವ ಕುಜ ದೋಷವೂ ಸಹ ಇರುವುದಿಲ್ಲ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top