ಸೆಪ್ಟೆಂಬರ್ 26, 2023 ಮಂಗಳವಾರ
ವರ್ಷ : 1945, ಶೋಭಾಕೃತ
ತಿಂಗಳು : ಭಾದ್ರಪದ, ಪಕ್ಷ : ಶುಕ್ಲಪಕ್ಷ
Panchangam
ತಿಥಿ : ದ್ವಾದಶೀ : Sep 26 05:01 am – Sep 27 01:45 am; ತ್ರಯೋದಶೀ : Sep 27 01:45 am – Sep 27 10:19 pm
ನಕ್ಷತ್ರ : ಶ್ರವಣ: Sep 25 11:55 am – Sep 26 09:41 am; ಧನಿಷ್ಠ: Sep 26 09:41 am – Sep 27 07:10 am
ಯೋಗ : ಸುಕರ್ಮ: Sep 25 03:23 pm – Sep 26 11:45 am; ಧೃತಿ: Sep 26 11:45 am – Sep 27 07:53 am
ಕರಣ : ಬಾವ: Sep 26 05:01 am – Sep 26 03:25 pm; ಬಾಲವ: Sep 26 03:25 pm – Sep 27 01:46 am; ಕುಲವ: Sep 27 01:46 am – Sep 27 12:03 pm
Time to be Avoided
ರಾಹುಕಾಲ : 3:10 PM to 4:40 PM
ಯಮಗಂಡ : 9:11 AM to 10:41 AM
ದುರ್ಮುಹುರ್ತ : 08:35 AM to 09:23 AM, 10:58 PM to 11:47 PM
ವಿಷ : 01:16 PM to 02:42 PM
ಗುಳಿಕ : 12:11 PM to 1:40 PM
Good Time to be Used
ಅಮೃತಕಾಲ : 09:52 PM to 11:17 PM
ಅಭಿಜಿತ್ : 11:47 AM to 12:34 PM
Other Data
ಸೂರ್ಯೋದಯ : 6:12 AM
ಸುರ್ಯಾಸ್ತಮಯ : 6:09 PM
ಹಲವು ತಾಪತ್ರಯಗಳ ನಡುವೆಯೂ ಹಮ್ಮಿಕೊಂಡ ಕಾರ್ಯವನ್ನು ಮಾಡಿ ಮುಗಿಸುವಿರಿ ಮತ್ತು ಈ ಮೂಲಕ ನಿಮ್ಮನ್ನು ವಿರೋಧಿಸುತ್ತಿದ್ದವರ ಮನದಲ್ಲೂ ಕೂಡಾ ಸಂತಸ ಸಂಭ್ರಮವನ್ನುಂಟು ಮಾಡುವಿರಿ.
ಬಹುದಿನದ ನಿರೀಕ್ಷೆ ಕನಸು ಕೈಗೂಡುವುದು. ಎಲ್ಲರಂತೆ ನೀವು ಕೂಡಾ ಸಮಾಜ ಮುಖಿಯಾಗಿ ಉನ್ನತ ಅಧಿಕಾರವನ್ನು ಹೊಂದುವಿರಿ. ಇದರೊಂದಿಗೆ ಸಕಾರಾತ್ಮಕ ಚಿಂತನೆಯನ್ನು ಮೈಗೂಡಿಸಿಕೊಂಡಲ್ಲಿ ಒಳಿತಾಗುವುದು.
ಇವತ್ತಿನ ಕೆಲಸ ಕಾರ್ಯಗಳಲ್ಲಿ ಗೆಲುವು ನಿಮ್ಮದೆ. ಈ ಬಗ್ಗೆ ಈ ಅನುಭೂತಿ ನಿಮ್ಮ ಮನದಲ್ಲಿರಲಿ. ಹೊರಗಡೆ ಸಂತೋಷವನ್ನು ವ್ಯಕ್ತಪಡಿಸಿದಲ್ಲಿ ಹಣಕಾಸಿನ ವಿಷಯದಲ್ಲಿ ನೀವು ಪರರಿಗೆ ಸಹಾಯ ಮಾಡಬೇಕಾಗುವುದು. ಶತ್ರುವನ್ನು ಕೂಡಾ ಪ್ರೀತಿಸುವಿರಿ.
ನೀವು ಎಷ್ಟೇ ಎಚ್ಚರಿಕೆ ವಹಿಸಿದರೂ ಕಚೇರಿಯ ಕೆಲಸ ಕಾರ್ಯಗಳಲ್ಲಿ ತಪ್ಪುಗಳು ನುಸುಳುತ್ತವೆ. ಅದನ್ನು ಪ್ರಾಂಜ್ವಲ ಮನಸ್ಸಿನಿಂದ ಒಪ್ಪಿಕೊಳ್ಳುವುದರಿಂದ ಮೇಲಾಧಿಕಾರಿಗಳ ಮೆಚ್ಚುಗೆ ಪಡೆಯುವಿರಿ.
ಕಾರಣವಿರದ ಚಿಂತೆ ಹಾಗೂ ಖಿನ್ನತೆಗಳನ್ನು ಬಿಟ್ಟು ಗೆಳೆಯರೊಂದಿಗೆ ಚರ್ಚಿಸಿ. ಒಳಿತಿನ ದಾರಿ ನಿಮಗೆ ಗೋಚರವಾಗುವುದು. ಆಂಜನೇಯ ದೇವಸ್ಥಾನಕ್ಕೆ ತಪ್ಪದೇ ಹೋಗಿ ಬನ್ನಿ. ಭಗವಂತ ನಿಮಗೆ ಅಭಯ ನೀಡುವನು.
ಚಂಚಲತೆ ಸ್ವಭಾವವುಳ್ಳ ನೀವು ಯಾರೊಟ್ಟಿಗಾದರೂ ಮಾತಾಡಿದರೆ ಏನು ತಿಳಿದುಕೊಳ್ಳವರೋ ಎಂಬ ಸೂಕ್ಷ ಪ್ರವೃತ್ತಿಯವರು. ಹಾಗಾಗಿ ಜನರೇ ನಿಮ್ಮನ್ನು ನೋಯಿಸುವರು. ಅವರಿಗೆ ಪ್ರತ್ಯುತ್ತರ ಕೊಡಲು ಅಸಹಾಯಕರಾಗಿ ನೋವನ್ನು ಅನುಭವಿಸುವಿರಿ.
ಸಾಂಸಾರಿಕವಾದ ಬಿಕ್ಕಟ್ಟುಗಳನ್ನು ಆಂತರಿಕವಾಗಿಯೇ ಪರಿಹಾರ ಮಾಡಿಕೊಳ್ಳುವುದು ಒಳಿತು. ‘ಸಂಸಾರ ಗುಟ್ಟು ವ್ಯಾಧಿ ರಟ್ಟು’ ಎನ್ನುವ ನಾಣ್ನುಡಿಯನ್ನು ಅರಿತು ಬಾಳಿ. ಇಲ್ಲದಿದ್ದಲ್ಲಿ ಸಮಾಜದಲ್ಲಿ ನಿಮಗೆ ಗೌರವ ಕಡಿಮೆ ಆಗುವುದು.
ನಿಮ್ಮ ವಿಚಾರದಲ್ಲಿ ಈ ದಿನದ ಬೆಳವಣಿಗೆಗಳು ಧನಾತ್ಮಕವಾಗಿ ಮೂಡಿಬರುವುದು. ಹಾಗಾಗಿ ನಿಮಗೆ ಎಲ್ಲಾ ಕಡೆಯಿಂದ ಉತ್ತಮ ಪ್ರತಿಕ್ರಿಯೆಗಳು ಬರುವವು. ಸಂಗಾತಿಯ ಸಲಹೆಯನ್ನು ಸ್ವೀಕರಿಸಿರಿ ಮತ್ತು ಬೆಳೆದು ನಿಂತ ಮಗನ ಮನಸ್ಸನ್ನು ನೋಯಿಸದಿರಿ.
ಕಾಡಿನ ಸಿಂಹಕ್ಕೆ ಹಸಿವಿದ್ದರೂ ಅದು ಹುಲ್ಲು ತಿನ್ನುವುದಿಲ್ಲ. ಅಂತೆಯೇ ಕೆಲವೊಮ್ಮೆ ನಿಮ್ಮಿಂದ ತಪ್ಪಾದರೂ ನೀವು ಕ್ಷ ಮೆಯಾಚಿಸುವುದಿಲ್ಲ. ಇದರಿಂದಾಗಿ ಜನರು ನಿಮ್ಮನ್ನು ಅಪಾರ್ಥ ಮಾಡಿಕೊಳ್ಳುವರು. ನಡೆನುಡಿಯಲ್ಲಿ ಸೌಮ್ಯತೆ ಇರಲಿ.
ಇದುವರೆಗೂ ನಿಮ್ಮನ್ನು ವಿರೋಧಿಸುತ್ತಿದ್ದ ಜನರೇ ನಿಮ್ಮ ಗೆಳೆತನವನ್ನು ಬಯಸಿ ನಿಮ್ಮ ಬಳಿಬರುವರು. ಅವರು ನಿಜವಾದ ಕಾಳಜಿಯನ್ನು ತೋರಿದಲ್ಲಿ ಮಾತ್ರ ಸ್ನೇಹ ಸಂಬಂಧವನ್ನು ಮುಂದುವರೆಸಬಹುದು.
ಮನಸ್ಸಿನ ತಲ್ಲಣಗಳಿಂದ ಮುಕ್ತಿ ಹೊಂದಲು ಕುಲದೇವರ ಪ್ರಾರ್ಥನೆ ಮಾಡಿ. ಕೆಲವರಿಗೆ ವೃತ್ತಿಯಲ್ಲಿ ಬದಲಾವಣೆ ಕಂಡು ಬರುವುದು. ಶ್ರಮವಹಿಸಿ ಮಾಡುವ ಕೆಲಸಗಳಿಗೆ ವಿಘ್ನ ಬರುವ ಸಾಧ್ಯತೆ ಇದೆ. ಗಣಪತಿ ಪ್ರಾರ್ಥನೆ ಮಾಡಿ.
ಒಣ ತರ್ಕದಿಂದ ಸಿದ್ಧಾಂತವನ್ನು ರೂಪಿಸಲು ಆಗುವುದಿಲ್ಲ. ನಿಮ್ಮ ವಾದ ಸರಣಿಗೆ ಸೂಕ್ತ ದಾಖಲೆಗಳನ್ನು ಇಟ್ಟುಕೊಳ್ಳಿ. ಇಲ್ಲದಿದ್ದಲ್ಲಿ ಎದುರಾಳಿಯಿಂದ ಮುಖಭಂಗಕ್ಕೆ ಕಾರಣವಾಗುವುದು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
