ಸೆಪ್ಟೆಂಬರ್ 27, 2023 ಬುಧವಾರ
ವರ್ಷ : 1945, ಶೋಭಾಕೃತ
ತಿಂಗಳು : ಭಾದ್ರಪದ, ಪಕ್ಷ : ಶುಕ್ಲಪಕ್ಷ
Panchangam
ತಿಥಿ : ತ್ರಯೋದಶೀ : Sep 27 01:45 am – Sep 27 10:19 pm; ಚತುರ್ದಶೀ : Sep 27 10:19 pm – Sep 28 06:49 pm
ನಕ್ಷತ್ರ : ಧನಿಷ್ಠ: Sep 26 09:41 am – Sep 27 07:10 am; ಶತಭಿಷ: Sep 27 07:10 am – Sep 28 04:29 am; ಪೂರ್ವಾ ಭಾದ್ರ: Sep 28 04:29 am – Sep 29 01:48 am
ಯೋಗ : ಧೃತಿ: Sep 26 11:45 am – Sep 27 07:53 am; ಶೂಲ: Sep 27 07:53 am – Sep 28 03:54 am; ಗಂಡ: Sep 28 03:54 am – Sep 28 11:54 pm
ಕರಣ : ಕುಲವ: Sep 27 01:46 am – Sep 27 12:03 pm; ತೈತುಲ: Sep 27 12:03 pm – Sep 27 10:19 pm; ಗರಿಜ: Sep 27 10:19 pm – Sep 28 08:34 am
Time to be Avoided
ರಾಹುಕಾಲ : 12:10 PM to 1:40 PM
ಯಮಗಂಡ : 7:41 AM to 9:11 AM
ದುರ್ಮುಹುರ್ತ : 11:46 AM to 12:34 PM
ವಿಷ : 10:10 AM to 11:35 AM
ಗುಳಿಕ : 10:41 AM to 12:10 PM
Good Time to be Used
ಅಮೃತಕಾಲ : 10:05 PM to 11:30 PM
Other Data
ಸೂರ್ಯೋದಯ : 6:12 AM
ಸುರ್ಯಾಸ್ತಮಯ : 6:09 PM
ಒಂದನ್ನು ಪಡೆಯಲು ಮತ್ತೊಂದರ ತ್ಯಾಗ ಅನಿವಾರ್ಯ. ಹಾಗಾಗಿ ಮುಷ್ಟಿಕಾಳುಗಳನ್ನು ಚೆಲ್ಲಿ ಮೂಟೆ ಕಾಳುಗಳನ್ನು ಬಾಚಿಕೊಳ್ಳುವಂತೆ ಕೆಲವು ವಿಚಾರಗಳಲ್ಲಿ ಯಶಸ್ಸು ಸಾಧಿಸಲು ಹಣ ನೀರಿನಂತೆ ಖರ್ಚಾಗುವುದು. ಈ ಬಗ್ಗೆ ಬೇಸರ ಬೇಡ.
ಮನೆಗೆದ್ದು ಮಾರುಗೆಲ್ಲು ಎಂದರು ಅನುಭಾವಿಗಳು. ಅಂತೆಯೇ ನೀವು ನಿಮ್ಮ ಮೇಲೆ ವಿಶ್ವಾಸ ಇಟ್ಟುಕೊಳ್ಳಿ. ನೀವೇ ಅಪನಂಬಿಕೆಯಿಂದ ಕೆಲಸ ಆಗುತ್ತೋ ಇಲ್ಲವೋ ಎಂದು ಕೂತರೆ ಆಗುವ ಕೆಲಸವೂ ಆಗುವುದಿಲ್ಲ.
ನಿಮ್ಮನ್ನು ನೀವು ಮೊದಲು ನಂಬಿ. ಇದರಿಂದ ಹೆಚ್ಚಿನ ಉತ್ತಮ ಕೆಲಸಗಳು ನೆರವೇರಲು ಸಾಧ್ಯವಾಗುವುದು. ನಿಮ್ಮ ಬಹುದಿನದ ಕನಸು ನೆರವೇರುವುದು. ಹಣಕಾಸಿನ ಪರಿಸ್ಥಿತಿ ಸುಧಾರಿಸುವುದು.
ಹಿರಿಯರ ಬಳಿ ವಿನಯಪೂರ್ವಕವಾದ ಮಾತುಕತೆಯ ಪ್ರಭಾವದಿಂದ ಒಳಿತನ್ನೇ ಕಾಣುವಿರಿ. ಬಹು ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಕಾರ್ಯ ಆಶ್ಚರ್ಯಕರವಾಗಿ ಯಶಸ್ಸು ಕಾಣುತ್ತದೆ.
ನಿರಾಸೆಯ ನಡುವೆಯೇ ಕಾಲ ದೂಡುತ್ತಿರುವ ನೀವು ಸಂತಸದ ಸುದ್ದಿ ಕೇಳಲಿದ್ದೀರಿ. ನಿಮ್ಮ ಮನೋಕಾಮನೆಗಳು ಪೂರ್ಣಗೊಳ್ಳುವುವು. ಆದರೆ ಹಣಕಾಸಿನ ಪರಿಸ್ಥಿತಿ ಅಷ್ಟೇನೂ ಉತ್ತಮವಾಗಿರುವುದಿಲ್ಲ.
ಕೆಲವು ವಿಚಾರಗಳನ್ನು ಮನಸ್ಸಿನಲ್ಲಿಯೇ ಇಟ್ಟುಕೊಂಡು ಕೊರಗದಿರಿ. ಬಾಳಸಂಗಾತಿಯ ಸಕಾಲಿಕ ಎಚ್ಚರಿಕೆ ಮತ್ತು ಬೆಂಬಲದ ಸಹಕಾರದಿಂದ ಒಳಿತಾಗುವುದು. ಹಣಕಾಸಿನ ವಿಷಯದಲ್ಲಿ ಜಾಗ್ರತೆ ಇರಲಿ.
ಅನೇಕರು ನಿಮ್ಮ ಎದುರಿಗೆ ಸರಿಯಾಗಿದ್ದು ಹಿಂದಿನಿಂದ ನಿಮಗೆ ತೊಂದರೆ ಕೊಡುವ ಸಾಧ್ಯತೆ ಇದೆ. ಈ ಬಗ್ಗೆ ಎಚ್ಚರದಿಂದ ಇರಿ. ನಡೆಯುವ ವ್ಯಕ್ತಿ ಎಡವದೆ ಕುಳಿತ ವ್ಯಕ್ತಿ ಎಡವುದಿಲ್ಲ. ಹಾಗಾಗಿ ಎಡವುದನ್ನೇ ಸೋಲು ಎಂದು ಭ್ರಮಿಸದಿರಿ.
ಸುಮ್ಮನೆ ಅಪವಾದಗಳನ್ನು ಎದುರಿಸುವ ಭೀತಿ ಕಾದಿದೆ. ಆದ್ದರಿಂದ ಮೌನದಿಂದಿರಿ. ಎಲ್ಲವೂ ಸರಿಹೋಗುವುದು. ಸ್ನೇಹಿತರ ಹಣದ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸುವುದು ಅಥವಾ ಜಾಮೀನಿಗೆ ಸಹಿ ಹಾಕದಿರುವುದು ಒಳ್ಳೆಯದು.
ಮುಂದಿನ ದಿನಗಳ ಬಗೆಗಿನ ಒಳಿತಿಗೆ ನಾಂದಿಯಾಗುವ ಉತ್ತಮ ಕೆಲಸಕ್ಕೆ ಸದ್ಯದಲ್ಲೇ ಚಾಲನೆ ದೊರೆಯಲಿದೆ. ಇದರಿಂದ ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗುವುದು. ವಾಹನ ಅಥವಾ ಆಸ್ತಿ ಖರೀದಿಗೆ ಮನಸ್ಸು ಮಾಡುವಿರಿ.
ದಾಂಪತ್ಯದ ವಿಚಾರದಲ್ಲಿ ತೊಂದರೆಗಳು ಬರದಂತೆ ನಿಗಾ ವಹಿಸಿ. ಇಂದು ಮಹತ್ವದ ದಿನವಾಗಿದ್ದು ದಂಪತಿ ಒಂದೇ ಮನಸ್ಸಿನಲ್ಲಿ ಕಾರ್ಯ ನಿರ್ವಹಿಸಿದಲ್ಲಿ ಸಫಲತೆ ಹೊಂದುವಿರಿ. ಮಕ್ಕಳ ಪ್ರಗತಿ ಸಂತಸವನ್ನುಂಟು ಮಾಡುವುದು.
ಎಲ್ಲರ ಮಾತನ್ನು ಕೇಳಬೇಕಾಗಿಲ್ಲ. ಆದರೆ ಮುಖ್ಯ ವಿಚಾರದಲ್ಲಿ ಅನ್ಯರ ಜತೆ ಚರ್ಚಿಸುವುದು ಉತ್ತಮ. ಇದರಿಂದ ನೀವು ಹಮ್ಮಿಕೊಂಡಿರುವ ಕೆಲಸ ಕಾರ್ಯ ಮಾಡಲು ನೂತನ ವಿಚಾರಧಾರೆಗಳು ತಿಳಿಯುವುವು.
ಹಣಕಾಸಿನ ವಿಚಾರದಲ್ಲಿ ಆತುರ ತೋರುವ ಗುಣವನ್ನು ಕೈಬಿಡಿ. ನಿಮ್ಮ ಪಾಲಿಗೆ ಸೇರಬೇಕಾಗಿದ್ದ ಹಣ ಖಂಡಿತವಾಗಿ ನಿಮ್ಮ ಕೈಸೇರುವುದು. ಹಾಗಂತ ಅನಗತ್ಯ ಖರ್ಚುಗಳನ್ನು ಮಾಡುವುದು ಶೋಭೆ ತರುವಂತಹದ್ದಲ್ಲ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
