ಈ ವಿಧಾನಗಳನ್ನ ಅನುಸರಿಸಿದ್ರೆ ಮನೆಯಲ್ಲಿ ಸೊಳ್ಳೆಗಳು ದೂರ ಓಡಿ ಹೋಗ್ತಾವೆ.
ಅಂಗಡಿಗಳಲ್ಲಿ ಸಿಗುವ ದುಬಾರಿ ಸೊಳ್ಳೆ ಬತ್ತಿ , ಕಾಯಿಲ್ ಗಳು ಹಾಗು ಇನ್ನಿತರ ರೆಪ್ಲ್ಯಾಂಟ್ ಗಳು ಸಾಕಷ್ಟು ಅಡ್ಡಪರಿಣಾಮಗಳನ್ನ ಉಂಟು ಮಾಡುತ್ತೆ ಅಂತೇ ಎಷ್ಟೋ ಜನಕ್ಕೆ ಗೊತ್ತೇ ಇರೋಲ್ಲ .
ಮನೆಯಲ್ಲಿ ಸಣ್ಣ ಮಕ್ಕಳಿದ್ರೆ ಅವರಿಗೆ ಸಹ ಉಸಿರಾಟದ ಸಮಸ್ಯೆಗಳು ಜೋರಾಗಿ ಬರೋಕೆ ಶುರುವಾಗುತ್ತೆ , ಇದನ್ನ ತಡೆಬೇಕು ಅಂದ್ರೆ ಮಾಡ್ಬೇಕಾಗಿರೋದು ಏನು ಅಂದ್ರೆ ನೈಸರ್ಗಿಕ ಉಪಾಯಗಳನ್ನ ಮಾಡ್ಕೋಬೇಕಾಗುತ್ತೆ .
ಮನೆಯಲ್ಲಿ ಸೊಳ್ಳೆ ಬಾರದ ಹಾಗೆ ತಡೆಯೋ ನೈಸರ್ಗಿಕ ವಿಧಾನಗಳು ನಾವು ನಿಮಗೆ ಇಲ್ಲಿ ತಿಳಿಸಿಕೊಡುತ್ತೇವೆ .
ವಿಧಾನ ಒಂದು
ಮೊದಲಿಗೆ ಒಂದೆರಡು ನಿಂಬೆ ಹಣ್ಣನ್ನು ತೆಗೆದುಕೊಳ್ಳಿ ,
ನಿಂಬೆ ಹಣ್ಣನ್ನು ಎರಡು ಹೋಳು ಮಾಡಿ ಮನೆಯ ಮೂಲೆಗಳಲ್ಲಿ ಇರಿಸಿ , ಮನೆಯ ಕಿಟಕಿ ಮತ್ತು ಬಾಗಿಲ ಸಂದುಗಳಲ್ಲಿ ಇರಿಸಿ ,ಇದಾದ ನಂತರ ಲವಂಗ ತೆಗೆದುಕೊಂಡು ನಿಂಬೆ ಹೋಳುಗಳ ಮೇಲೆ ಚುಚ್ಚಿ .
ವಿಧಾನ ಎರಡು :
ನಾಲ್ಕೈದು ಕರ್ಪೂರವನ್ನು ತೆಗೆದುಕೊಂಡು ಒಂದು ತಟ್ಟೆಯಲ್ಲಿ ಹಾಕಿಕೊಳ್ಳಿ , ಜೊತೆಗೆ ಬೇವಿನ ಎಣ್ಣೆಯನ್ನು ಇಟ್ಟುಕೊಳ್ಳಿ , ಸೊಳ್ಳೆ ಬರುವ ಜಾಗಕ್ಕೆ ಏನಂದ್ರೆ ಮನೆಯ ಮೂಲೆಗಳು ಮತ್ತು ಕಿಟಕಿಗಳು ಈ ಸ್ಥಳಗಳ ಹತ್ತಿರ ಕರ್ಪೂರ ಹಚ್ಚಿ ನಾಲ್ಕೈದು ಹನಿ ಬೇವಿನ ಎಣ್ಣೆ ಹಾಕಿರಿ ಇದರ ವಾಸನೆಗೆ ಮನೆಯಲ್ಲಿರುವ ಎಲ್ಲ ಸೊಳ್ಳೆಗಳು ಓಡಿ ಹೋಗುತ್ತವೆ.
ವಿಧಾನ ಮೂರು :
ಈರುಳ್ಳಿಯನ್ನು ಸಣ್ಣಗೆ ಹಚ್ಚಿ ಮನೆಯ ಮೂಲೆ , ಕಿಟಕಿ ಗಳ ಬಳಿ ಇರಿಸಿ ಇದು ಸೊಳ್ಳೆಗಳನ್ನು ದೂರ ಓಡಿಸುತ್ತೆ .
ವಿಧಾನ ನಾಲ್ಕು :
ಒಂದು ಬೆಳ್ಳುಳ್ಳಿಯನ್ನು ತೆಗೆದುಕೊಳ್ಳಿ ,ಎಸಳುಗಳ ಚಿಪ್ಪೆಯನ್ನು ಬಿಡಿಸಿ ಆನಂತರ ಒಂದು ಲೋಟ ನೀರು ಹಾಕಿ ಜಜ್ಜಿಕೊಂಡ ಬೆಳ್ಳುಳ್ಳಿಯನ್ನು ಹಾಕಿ ಕುದಿಸಿ .
ಇದಾದ ನಂತರ ಒಂದು ಪಾತ್ರೆಗೆ ಶೋಧಿಸಿಕೊಂಡು ಸ್ಪ್ರೇ ಗೆ ಹಾಕೊಂಡು ಮನೆಯ ಮೂಲೆ ,ಕಿಟಕಿ ಇನ್ನಿತರ ಸೊಳ್ಳೆ ಬರುವ ಜಾಗಗಳಿಗೆ ಸ್ಪ್ರೇ ಮಾಡಿ .
ವಿಧಾನ ಐದು :
ಮನೆಯ ಮುಂದೆ ತುಳಸಿ ಗಿಡಗಳನ್ನು , ಪುದಿನ ಗಿಡಗಳನ್ನು ಹೆಚ್ಚಾಗಿ ನೆಡಿ ಹೀಗೆ ಮಾಡಿದ್ರೆ ಮನೆಯೊಳಗೇ ಸೊಳ್ಳೆ ಬರೋದು ತಪ್ಪುತ್ತೆ .
ವಿಧಾನ ಆರು :
ಕೊಬ್ಬರಿ ಎಣ್ಣೆ ಮತ್ತು ಬೇವಿನ ಎಣ್ಣೆಯನ್ನು ಹಚ್ಚಿಕೊಂಡರು ಸಹ ಸೊಳ್ಳೆ ಕಡಿಯೋದಿಲ್ಲ.
ಬೇಕಾದ್ರೆ ನೀಲಗಿರಿ ತೈಲ ಅಥವಾ ಟೀ ಟ್ರೀ ಎಣ್ಣೆ ಸಹ ಬಳಸಬಹುದು
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
