fbpx
ಸಮಾಚಾರ

ಸೆಪ್ಟೆಂಬರ್ 30: ನಾಳೆಯ ಪಂಚಾಂಗ ಮತ್ತು ದಿನ ಭವಿಷ್ಯ

ಸೆಪ್ಟೆಂಬರ್ 30, 2023 ಶನಿವಾರ
ವರ್ಷ : 1945, ಶೋಭಾಕೃತ
ತಿಂಗಳು : ಭಾದ್ರಪದ, ಪಕ್ಷ : ಕೃಷ್ಣಪಕ್ಷ

Panchangam
ತಿಥಿ : ಪ್ರತಿಪತ್ : Sep 29 03:27 pm – Sep 30 12:21 pm; ದ್ವಿತೀಯಾ : Sep 30 12:21 pm – Oct 01 09:42 am
ನಕ್ಷತ್ರ : ರೇವತಿ: Sep 29 11:18 pm – Sep 30 09:08 pm; ಅಶ್ವಿನಿ: Sep 30 09:08 pm – Oct 01 07:27 pm
ಯೋಗ : ಧ್ರುವ: Sep 29 08:03 pm – Sep 30 04:27 pm; ವ್ಯಾಘಾತ: Sep 30 04:27 pm – Oct 01 01:13 pm
ಕರಣ : ಕುಲವ: Sep 30 01:52 am – Sep 30 12:21 pm; ತೈತುಲ: Sep 30 12:21 pm – Sep 30 10:58 pm; ಗರಿಜ: Sep 30 10:58 pm – Oct 01 09:42 am

Time to be Avoided
ರಾಹುಕಾಲ : 9:10 AM to 10:40 AM
ಯಮಗಂಡ : 1:39 PM to 3:08 PM
ದುರ್ಮುಹುರ್ತ : 07:47 AM to 08:35 AM
ವಿಷ : 03:44 PM to 05:13 PM
ಗುಳಿಕ : 6:12 AM to 7:41 AM

Good Time to be Used
ಅಮೃತಕಾಲ : 06:57 PM to 08:24 PM
ಅಭಿಜಿತ್ : 11:45 AM to 12:33 PM

Other Data
ಸೂರ್ಯೋದಯ : 6:12 AM
ಸುರ್ಯಾಸ್ತಮಯ : 6:07 PM

 

 

 
 

 

ಕಷ್ಟದ ದಿನಗಳು ಇನ್ನೂ ಮುಗಿದಿಲ್ಲ. ಹಾಗಾಗಿ ನಿರಾಶರಾಗುವುದು ಬೇಡ. ಆಶಾವಾದಿಗೆ ಜೀವನ ನಿರಾಶಾವಾದಿಗೆ ಅಲ್ಲ. ಕುಲದೇವತಾ ಪ್ರಾರ್ಥನೆ ಮಾಡಿರಿ. ಭಗವಂತ ಕೊಟ್ಟಿದ್ದರಲ್ಲಿಯೇ ಅಲ್ಪ ದಾನ ಮಾಡಿರಿ.

 

ವಿನಾಕಾರಣ ಮನೆಯಲ್ಲಿ ಮನಸ್ತಾಪದ ಸಂದರ್ಭಗಳು ಎದುರಾಗುವ ಸಂದರ್ಭವಿರುತ್ತದೆ. ಸಣ್ಣ ಪುಟ್ಟ ವಿಷಯಗಳನ್ನು ದೊಡ್ಡದು ಮಾಡಬೇಡಿ. ತಪ್ಪು ಮಾಡುವುದು ಮನುಜ ಸ್ವಭಾವ. ಅಂತಹ ವ್ಯಕ್ತಿಗಳನ್ನು ಕ್ಷ ಮಿಸಿಬಿಡಿರಿ.

 

ಪರಾಕ್ರಮದ ಗುರುವು ನಿಮಗೆ ಬೆಂಬಲ ಸೂಚಿಸುವರು. ಮಕ್ಕಳನ್ನು ಉತ್ತೇಜಿಸಿ ನಿಮ್ಮ ಕನಸುಗಳನ್ನು ನನಸು ಮಾಡುವಂತೆ ಮಾಡುವರು. ಮಗನಿಗೆ ಉತ್ತಮ ಸಂಬಂಧ ಕೂಡಿಬರುವ ಸಾಧ್ಯತೆ ಇದೆ.

 

ಹಿರಿಯರೊಬ್ಬರ ಸಕಾಲಿಕ ಹಿತನುಡಿಗಳಿಂದ ಮನೆಯಲ್ಲಿನ ಪತಿ-ಪತ್ನಿಯರ ನಡುವಿನ ಭಿನ್ನಾಭಿಪ್ರಾಯಕ್ಕೆ ಅಂತ್ಯ ಕಾಣುವುದು. ಕಚೇರಿಯ ಕೆಲಸಗಳು ಸರಾಗವಾಗಿ ನಡೆಯುವುದರಿಂದ ನೆಮ್ಮದಿಯ ವಾತಾವರಣವನ್ನು ಕಾಣುವಿರಿ.

 

 

ಎಲ್ಲರ ಅಭಿಪ್ರಾಯಗಳನ್ನು ಕಿವಿಗೊಟ್ಟು ಆಲಿಸಿ. ಆದರೆ ಅದನ್ನು ಕಾರ್ಯರೂಪಕ್ಕೆ ತರುವಾಗ ಚಿಂತಿಸಿ. ತೀರ್ಮಾನವು ನಿಮ್ಮ ಇಷ್ಟದಂತೆ ಇರಲಿ. ಇದರಿಂದ ನಿಮ್ಮ ಸಾಮಾಜಿಕ ಸ್ಥಾನಮಾನ ಹೆಚ್ಚಾಗುವುದು.

 

 

ನಿಮ್ಮ ಬಂಧು ಬಳಗದವರು ಮತ್ತು ಆತ್ಮೀಯ ಗೆಳೆಯರಿಂದ ಬೆಂಬಲ ಸಿಗುವುದು. ಆದರೆ ಎಲ್ಲರೊಡನೆ ಎಲ್ಲ ವಿಷಯಗಳನ್ನು ಹಂಚಿಕೊಳ್ಳದಿರಿ. ಕೆಲವೊಂದು ವಿಷಯಗಳನ್ನು ಗೌಪ್ಯವಾಗಿ ಇಡುವುದು ಉತ್ತಮ.

 

 

ಮನಸು ಅತ್ಯಂತ ಚಂಚಲತೆಯಿಂದ ಕೂಡಿರುವುದರಿಂದ ಈ ದಿನದ ಕಾರ್ಯಗಳಲ್ಲಿ ಹಿನ್ನಡೆಯನ್ನು ಅನುಭವಿಸುವಿರಿ. ಈ ದಿನದ ಗ್ರಹಸ್ಥಿತಿಗಳು ಉತ್ತಮವಾಗಿಲ್ಲ. ಹಾಗಾಗಿ ಸಕಲ ಗ್ರಹಬಲ ನೀನೇ ಸರಸಿಜಾಕ್ಷ ಎಂದು ಹರಿಯನ್ನು ಪ್ರಾರ್ಥಿಸಿರಿ.

 

 

ಎಲ್ಲ ಕೆಲಸ ನನ್ನಿಂದಲೇ ಆಯಿತು ಎನ್ನುವುದಕ್ಕಿಂತ ಭಗವಂತನ ಕೃಪೆಯಿಂದ ಆಯಿತು ಎನ್ನುವುದು ಹೆಚ್ಚು ಸೂಕ್ತ. ಹಾಗೆ ಮಾಡುವುದರಿಂದ ಕೆಲವು ಕೆಲಸಗಳು ಇನ್ನೂ ಹೆಚ್ಚಿನ ಪರಿಪಕ್ವತೆಯಿಂದ ಯಶಸ್ಸು ಹೊಂದುವುದು.

 

ಗುರುವಿನ ಬಲವು ನಿಮ್ಮ ಎಲ್ಲ ಕಾರ್ಯಗಳಲ್ಲೂ ಪ್ರಭಾವ ಬೀರುತ್ತದೆ. ಹಾಗಾಗಿ ಈದಿನದ ಕಠಿಣ ಕಾರ್ಯವೂ ಸುಲಲಿತವಾಗಿ ನೆರವೇರುವುದು. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ.

 

 

ನಿಮ್ಮ ಎದುರು ನಿಂತು ಮಾತನಾಡುವ ಧೈರ್ಯವಿಲ್ಲದ ಶತ್ರುಗಳು ಬೇರೆ ರೀತಿಯ ವ್ಯೂಹವನ್ನು ರಚಿಸುವರು. ಈ ಬಗ್ಗೆ ಜಾಗ್ರತೆಯಾಗಿರಿ. ಕಲ್ಮಶ ರಹಿತ ನಿಮ್ಮ ಧೈರ್ಯ, ಧೋರಣೆಗಳು ನಿರೀಕ್ಷಿತ ಯಶಸ್ಸು ತಂದುಕೊಡುವುದು.

 

ಹೊತ್ತು ಬಂದಂತೆ ಛತ್ರಿ ಹಿಡಿಯಬೇಕು ಎನ್ನುವಂತೆ ಸದ್ಯದ ಪರಿಸ್ಥಿತಿಯನ್ನು ನಿಮ್ಮ ಪರವಾಗಿ ಮಾಡಿಕೊಳ್ಳಲು ಸಾಕಷ್ಟು ಕಸರತ್ತು ಮಾಡುವಿರಿ. ಮನೋವೇಗವನ್ನು ಹೊಂದಿರುವ ಆಂಜನೇಯ ಸ್ಮರಣೆಯಿಂದ ನಿಮ್ಮ ಕಾರ್ಯ ಕೈಗೂಡುವುದು.

 

ಯಾವುದೇ ಕಾರ್ಯವು ರಾತ್ರಿ-ಬೆಳಗು ಆಗುವುದರೊಳಗೆ ಪೂರ್ಣಗೊಳ್ಳುವುದಿಲ್ಲ. ಎಲ್ಲದಕ್ಕೂ ಒಂದು ಕಾಲಮಿತಿ ಇರುತ್ತದೆ. ನಿಧಾನವಾದರೂ ನಿಮ್ಮ ಮನೋಕಾಮನೆಗಳು ಪೂರ್ಣಗೊಳ್ಳುವುದು. ದೇವರಲ್ಲಿ ವಿಶ್ವಾಸವಿಡಿ. ಆತನು ನಿಮಗೆ ಸೂಕ್ತ ಮಾರ್ಗದರ್ಶನ ನೀಡುವನು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top