fbpx
ಸಮಾಚಾರ

ಜ್ಞಾನವಾಪಿ ಮಸೀದಿಯಲ್ಲಿ ಎಎಸ್‌ಐ ಸಮೀಕ್ಷೆ ಪೂರ್ಣ

ವಾರಣಾಸಿ ಜ್ಞಾನವಾಪಿ ಮಸೀದಿಯಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ) ನಡೆಸಿದ ಸಮೀಕ್ಷೆ ಪೂರ್ಣಗೊಂಡಿದೆ. ಆದರೆ, ವರದಿ ಸಲ್ಲಿಸಲು ಎಎಸ್‌ಐ ಸಮಯ ಕೋರಿದ್ದರಿಂದ ವಾರಣಾಸಿ ನ್ಯಾಯಾಲಯ ನವೆಂಬರ್ 17ರವರೆಗೆ ಕಾಲಾವಕಾಶ ನೀಡಿದೆ.

ವಾರಣಾಸಿ ನ್ಯಾಯಾಲಯವು ಜ್ಞಾನವಾಪಿ ಮಸೀದಿ ಆವರಣದ ವೈಜ್ಞಾನಿಕ ಸಮೀಕ್ಷೆಯನ್ನು ಪೂರ್ಣಗೊಳಿಸಿ ವರದಿಯನ್ನು ಸಲ್ಲಿಸುವಂತೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ (ಎಎಸ್‌ಐ) ನಿರ್ದೇಶನ ನೀಡಿದೆ. 17ರವರೆಗೆ ಅವಧಿ ವಿಸ್ತರಿಸಿ ಜಿಲ್ಲಾ ನ್ಯಾಯಾಧೀಶ ಕೆ.ವಿಶ್ವೇಶ್ ಗುರುವಾರ ಆದೇಶ ಹೊರಡಿಸಿದ್ದಾರೆ.

ಸಮೀಕ್ಷೆಗೆ ಬಳಸಲಾದ ಸಲಕರಣೆಗಳ ವಿವರಗಳೊಂದಿಗೆ ಸಮೀಕ್ಷಾ ವರದಿಯನ್ನು ಸಿದ್ಧಪಡಿಸಲು ಸಮಯ ಕೇಳಲು ನ್ಯಾಯಾಲಯವು ಸಮ್ಮತಿಸಿದೆ ಎಂದು ಸರ್ಕಾರಿ ವಕೀಲ ಅಮಿತ್ ಶ್ರೀವಾಸ್ತವ ಮಾಧ್ಯಮಗಳಿಗೆ ತಿಳಿಸಿದರು. ಏತನ್ಮಧ್ಯೆ, ಅಕ್ಟೋಬರ್ 5 ರಂದು ಜ್ಞಾನವಾಪಿ ಸಮೀಕ್ಷೆಗೆ ನಾಲ್ಕು ವಾರಗಳ ಗಡುವು ನೀಡಿದ್ದ ವಾರಣಾಸಿ ನ್ಯಾಯಾಲಯ, ನಂತರ ಯಾವುದೇ ಗಡುವು ಇರುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top