ನವೆಂಬರ್ 4, 2023 ಶನಿವಾರ
ವರ್ಷ : 1945, ಶೋಭಾಕೃತ
ತಿಂಗಳು : ಆಶ್ವೇಜ, ಪಕ್ಷ : ಕೃಷ್ಣಪಕ್ಷ
Panchangam
ತಿಥಿ : ಸಪ್ತಮೀ : Nov 03 11:07 pm – Nov 05 12:59 am; ಅಷ್ಟಮೀ : Nov 05 12:59 am – Nov 06 03:18 am
ನಕ್ಷತ್ರ : ಪುನರ್ವಸು: Nov 03 05:57 am – Nov 04 07:57 am; ಪುಷ್ಯ: Nov 04 07:57 am – Nov 05 10:29 am
ಯೋಗ : ಸಾಧ್ಯ: Nov 03 12:53 pm – Nov 04 01:02 pm; ಶುಭ: Nov 04 01:02 pm – Nov 05 01:36 pm
ಕರಣ : ವಿಷ್ಟಿ: Nov 03 11:08 pm – Nov 04 11:59 am; ಬಾವ: Nov 04 12:00 pm – Nov 05 01:00 am; ಬಾಲವ: Nov 05 01:00 am – Nov 05 02:06 pm
Time to be Avoided
ರಾಹುಕಾಲ : 9:10 AM to 10:36 AM
ಯಮಗಂಡ : 1:29 PM to 2:55 PM
ದುರ್ಮುಹುರ್ತ : 07:49 AM to 08:35 AM
ವಿಷ : 04:48 PM to 06:34 PM
ಗುಳಿಕ : 6:17 AM to 7:43 AM
Good Time to be Used
ಅಮೃತಕಾಲ : 03:24 AM to 05:11 AM
ಅಭಿಜಿತ್ : 11:40 AM to 12:26 PM
Other Data
ಸೂರ್ಯೋದಯ : 6:17 AM
ಸುರ್ಯಾಸ್ತಮಯ : 5:48 PM
ಮೇಷ (Mesha)
ಆರ್ಥಿಕವಾಗಿ ಅನಿರೀಕ್ಷಿತ ರೂಪದಲ್ಲಿ ನಾನಾ ರೀತಿಯಲ್ಲಿ ಧನವ್ಯಯ ವಾಗಲಿದೆ. ಆದರೂ ಅದೇ ರೀತಿಯಲ್ಲಿ ಧನಾಗಮನದಿಂದ ತೊಂದರೆ ಇರಲಾರದು. ಸಾಂಸಾರಿಕ ಸಮಸ್ಯೆಯನ್ನು ಹಿರಿಯರ ಸಮಕ್ಷಮದಲ್ಲಿ ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಿರಿ. ಕಾರ್ಯಕ್ಷೇತ್ರದ ಒತ್ತಡ.
ವೃಷಭ (Vrushabh)
ದಾಂಪತ್ಯದಲ್ಲಿ ಆಗಾಗ ಸಣ್ಣಪುಟ್ಟ ಭಿನ್ನಾಭಿಪ್ರಾಯ ಬಂದರೂ ಸುಧಾರಿಸಿಕೊಂಡು ಹೋಗಬಹುದಾಗಿದೆ. ಅವಿವಾಹಿತರ ಸಂಬಂಧಗಳ ಅಲೆದಾಟ ಸಾಕೆನಿಸಲಿದೆ, ವ್ಯಾಪಾರ, ವ್ಯವಹಾರಗಳು ನಿರೀಕ್ಷಿತ ಮಟ್ಟವನ್ನು ಕಾಯ್ದುಕೊಳ್ಳಲಿವೆ. ಆರ್ಥಿಕವಾಗಿ ನಾನಾ ರೀತಿಯ ಸಂಪತ್ತಿನ ಗಳಿಕೆಯಿಂದ ಎಲ್ಲಾ ರೀತಿಯಲ್ಲಿ ಕಾರ್ಯಾನುಕೂಲಕ್ಕೆ ಪೂರಕವಾಗುತ್ತದೆ.
ಮಿಥುನ (Mithuna)
ಅವಿವಾಹಿತರು ಬಂದ ಅವಕಾಶಗಳನ್ನು ಸದುಪಯೋಗಿಸಿಕೊಂಡಲ್ಲಿ ಮುನ್ನಡೆಗೆ ಸಾಧ್ಯವಾಗಲಿದೆ. ಆರೋಗ್ಯದ ಬಗ್ಗೆ ಮಾತ್ರ ಹೆಚ್ಚಿನ ಕಾಳಜಿ ವಹಿಸುವುದು ಅಗತ್ಯವೆನಿಸಲಿದೆ. ವಿದ್ಯಾರ್ಥಿಗಳು ಪ್ರಯತ್ನಬಲಕ್ಕೆ ಹೆಚ್ಚಿನ ಒತ್ತು ನೀಡಬೇಕು.
ಕರ್ಕ (Karka)
ಉತ್ತಮ ಅಭಿವೃದ್ಧಿದಾಯಕ ವಾತಾವರಣ ಮುನ್ನಡೆಗೆ ಸಾಧಕವಾದರೂ ಪ್ರಯತ್ನಬಲ ಬೇಕೇ ಬೇಕು. ಹೊಸ ಅಲಂಕಾರಿಕ ವಸ್ತುಗಳ ಖರೀದಿ, ಮನೆ ಖರೀದಿ, ವಾಹನ ಖರೀದಿ ಮಾಡಬಹುದಾಗಿದೆ. ಕೆಲವೊಂದು ಸಮಸ್ಯೆಗಳನ್ನು ವೈಯಕ್ತಿಕವಾಗಿ ಪರಾಮರ್ಶಿಸಲೇಬೇಕಾದ ಸಮಯ ಬರುವುದು. ಅಧಿಕ ತಿರುಗಾಟವಿದ್ದರೂ ಆದಾಯ ಹೆಚ್ಚಲಿದೆ.
ಸಿಂಹ (Simha)
ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿರಿ. ವಾರಾಂತ್ಯದಲ್ಲಿ ಮನೆಯಲ್ಲಿನ ಬಿಗು ವಾತಾವರಣ ತಿಳಿಯಾಗಿ ಮನಸ್ಸಿಗೆ ಸಮಾಧಾನ ತಂದೀತು. ಹಾಗೂ ನಿಮ್ಮ ಆರ್ಥಿಕ ಸ್ಥಿತಿಗತಿಗಳು ಬಲಗೊಳ್ಳಲಿವೆ. ವಿದ್ಯಾರ್ಥಿಗಳು ಹೆಚ್ಚಿನ ಅಭ್ಯಾಸದಿಂದ ಪ್ರಗತಿ ಸಾಧಿಸಬಹುದು. ಮುನ್ನಡೆಯಿರಿ
ಕನ್ಯಾರಾಶಿ (Kanya)
ಇತರರ ಕಷ್ಟನಷ್ಟಗಳಿಗೆ ನೆರವಾಗುವ ನಿಮ್ಮ ಮನೋಧರ್ಮ ಕಷ್ಟಕ್ಕೀಡಾಗಲಿದೆ. ದೃಢ ನಿರ್ಧಾರ ಕೈಗೊಂಡಲ್ಲಿ ನಿಮಗೆ ಯಶಸ್ಸು ನಿಶ್ಚಿತವೆನ್ನಬಹುದು, ಸಾಧಿಸಲೇ ಬೇಕು ಎಂಬ ಛಲ, ಹಠವಿರುವ ನಿಮಗೆ ಕಾರ್ಯ ಸಿದ್ಧಿಸಲಿದೆ. ಸಮಾಜದಲ್ಲಿ ನಿಮ್ಮ ಸ್ಥಾನಮಾನಗಳು ಹೆಚ್ಚಾಗಲಿವೆ.
ತುಲಾ (Tula)
ಧನಾಗಮನದ ಅವಕಾಶಗಳು ವಿಪುಲವಾಗಿದೆ, ಸದ್ಯದ ಪರಿಸ್ಥಿತಿಯಲ್ಲಿ ದೈವಾನುಗ್ರಹ ಉತ್ತಮವಿದ್ದು ಎಲ್ಲಾ ರೀತಿಯ ಮುನ್ನಡೆಗೆ ಅನುಕೂಲ , ನ್ಯಾಯಾಲಯದ ಕೆಲಸ ಕಾರ್ಯಗಳು ಚುರುಕುಗೊಂಡಾವು. ಗುರುಹಿರಿಯರ ಅನುಗ್ರಹ, ಆಶೀರ್ವಾದ ಮುನ್ನಡೆಗೆ ಪ್ರೇರಣೆಯಾಗಲಿದೆ. ರಾಜಕೀಯದವರಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ.
ವೃಶ್ಚಿಕ (Vrushchika)
ಆಪ್ತರೊಡನೆ ಮನಬಿಚ್ಚಿ ಮಾತನಾಡುವುದು ಉತ್ತಮ. ವ್ಯಾವಹಾರಿಕ ವಾಗಿ ಕಾರ್ಯಕ್ಷೇತ್ರದಲ್ಲಿನ ಒಪ್ಪಂದದಲ್ಲಿರುವ ಅಂಶಗಳನ್ನು ಬದಲಾವಣೆ ಮಾಡಬೇಕಾದ ಅನಿವಾರ್ಯ ಸ್ಥಿತಿ ಒದಗಿಬಂದೀತು. ಸಾಂಸಾರಿಕವಾಗಿ ಭಿನ್ನಾಭಿಪ್ರಾಯ ಪರಿಹರಿಸಲ್ಪಡುತ್ತದೆ.
ಧನು ರಾಶಿ (Dhanu)
ಅನಿರೀಕ್ಷಿತ ಧನಾಗಮನದಿಂದ ಕಾರ್ಯಸಿದ್ಧಿಯಾಗಲಿದೆ. ಸಾರ್ವಜನಿಕವಾಗಿ ಜನರೊಂದಿಗೆ ಹೆಚ್ಚಿನ ಸಂಪರ್ಕ ಮುಂದಿನ ಭವಿಷ್ಯಕ್ಕೆ ಫಲಕಾರಿಯಾಗಲಿದೆ. ಆರೋಗ್ಯ ಭಾಗ್ಯ ಸುಧಾರಿಸಲಿದೆ, ಸರಕಾರೀ ಅಧಿಕಾರಿಗಳಿಗೆ ಸದ್ಯದಲ್ಲೇ ಸ್ಥಾನ ಬದಲಾವಣೆಯ ಸೂಚನೆ ತಂದೀತು.
ಮಕರ (Makara)
ನಿಮ್ಮ ಬಾಳಸಂಗಾತಿಯು ನಿಮಗೆ ಎಲ್ಲ ದೃಷ್ಟಿಯಿಂದಲೂ ನೆರವಾಗುತ್ತಾರೆ, ಕಚೇರಿಯಲ್ಲಿ ನಿಮ್ಮ ಕೈಕೆಳಗೆ ಕೆಲಸ ಮಾಡುವವರು ಅಸಹಕಾರ ತೋರುವರು ಇಲ್ಲವೆ ನಿಮಗೆ ತೊಂದರೆ ಕೊಡುವ ಸಾಧ್ಯತೆ ಇರುತ್ತದೆ. ಲಕ್ಷ್ಮೀನಾರಸಿಂಹನ ಸ್ಮರಣೆ ಮಾಡಿ. ಬಂದ ದುರಿತಗಳು ನಶಿಸಿ ಹೋಗುವುದು.
ಕುಂಭರಾಶಿ (Kumbha)
ಹಿರಿಯರೊಬ್ಬರ ಸಕಾಲಿಕ ಹಿತನುಡಿಗಳಿಂದ ಮನೆಯಲ್ಲಿನ ಪತಿ, ಪತ್ನಿಯರ ನಡುವಿನ ಭಿನ್ನಾಭಿಪ್ರಾಯಕ್ಕೆ ಅಂತ್ಯ ಕಾಣುವುದು. ಕಚೇರಿಯ ಕೆಲಸಗಳು ಸರಾಗವಾಗಿ ನಡೆಯುವುದರಿಂದ ನೆಮ್ಮದಿಯ ವಾತಾವರಣ ಕಾಣುವಿರಿ, ಪ್ರಯಾಣದಲ್ಲಿ ಕೂಡಾ ಎಚ್ಚರದಿಂದ ಇರುವುದು ಒಳ್ಳೆಯದು. ಮಾಡದೆ ಇರುವ ತಪ್ಪಿಗೆ ನೀವು ನಿಂದನೆಗೆ ಒಳಗಾಗುವಿರಿ.
ಮೀನರಾಶಿ (Meena)
ಮನಸ್ಸು ಅತ್ಯಂತ ಚಂಚಲತೆಯಿಂದ ಕೂಡಿರುವುದರಿಂದ ಕಾರ್ಯಗಳಲ್ಲಿ ಹಿನ್ನಡೆಯನ್ನು ಅನುಭವಿಸುವಿರಿ. ಗ್ರಹಸ್ಥಿತಿಗಳು ಉತ್ತಮವಾಗಿಲ್ಲ, ಹಣಕಾಸಿನ ಸ್ಥಿತಿ ಉತ್ತಮವಾಗಿದ್ದು ಬಹುದಿನಗಳಿಂದ ಬರಬೇಕಾಗಿದ್ದ ಹಣವು ನಿಮ್ಮ ಕೈಸೇರುವುದು. ಆಕಾಶಕ್ಕೆ ಏಣಿ ಹಾಕುವ ವ್ಯರ್ಥ ಪ್ರಯತ್ನ ಬೇಡ. ನಿಮ್ಮ ಕಾರ್ಯಕ್ಷೇತ್ರದಲ್ಲಿನ ಕೆಲಸವು ಮಂದಗತಿಯಿಂದ ಆರಂಭವಾದರೂ ಒಳಿತಾಗುವುದು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
