ಉಡುಪಿಯ ಶ್ರೀ ಕೃಷ್ಣ ಮಠದ ಪೀಠಾಧ್ಯಕ್ಷರಾದ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಗಳ ಪೂರ್ವಾಶ್ರಮದ ತಂದೆಯವರು ನಿಧಾನರಾಗಿದ್ದಾರೆ.
ಶ್ರೀಗಳ ಪೂರ್ವಾಶ್ರಮದ ತಂದೆ ಅಂಗಡಿಮಾರು ಕೃಷ್ಣ ಭಟ್ಟರು ದಕ್ಷಿಣ ಕನ್ನಡ ಜಿಲ್ಲೆಯ ಹಳೆಯಂಗಡಿ ಬಳಿಯ ಪಕ್ಷಿಕೆರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಕೃಷ್ಣ ಭಟ್ಟರಿಗೆ 103 ವರ್ಷ ವಯಸ್ಸಾಗಿತ್ತು. ಕೃಷ್ಣ ಭಟ್ಟರು ಕಳೆದ ಕೆಲ ದಿನಗಳಿಂದ ವಯೋಸಹಜ ಕಾಯಿಲೆಯಿಂದಾಗಿ ಹಾಸಿಗೆ ಹಿಡಿದಿದ್ದರು. ಚಿಕಿತ್ಸೆ ಫಲಕಾರಿಯಾಗದೆ ವಿಧಿವಶರಾಗಿದ್ದಾರೆ.
ಕೃಷ್ಣ ಭಟ್ಟರು ಹಿರಿಯ ವಿದ್ವಾಂಸ, ತುಳು ಲಿಪಿ ತುಳು ಸೌರ ಪಂಚಾಂಗ ಕರ್ತೃ ಆಗಿದ್ದರು. ಐವರು ಪುತ್ರರು, ಆರು ಪುತ್ರಿಯರು ಬಂಧುವರ್ಗವನ್ನು ಕೃಷ್ಣಭಟ್ಟರು ಅಗಲಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
