fbpx
ಸಮಾಚಾರ

ನವೆಂಬರ್ 14: ಇಂದಿನ ಪಂಚಾಂಗ ಮತ್ತು ದಿನ ಭವಿಷ್ಯ.

ನವೆಂಬರ್ 14, 2023 ಮಂಗಳವಾರ
ವರ್ಷ : 1945, ಶೋಭಾಕೃತ
ತಿಂಗಳು : ಕಾರ್ತೀಕ, ಪಕ್ಷ : ಶುಕ್ಲಪಕ್ಷ

Panchangam
ತಿಥಿ : ಪ್ರತಿಪತ್ : Nov 13 02:57 pm – Nov 14 02:36 pm; ದ್ವಿತೀಯಾ : Nov 14 02:36 pm – Nov 15 01:47 pm
ನಕ್ಷತ್ರ : ಅನುರಾಧ: Nov 14 03:23 am – Nov 15 03:24 am; ಜ್ಯೇಷ್ಠ: Nov 15 03:24 am – Nov 16 03:01 am
ಯೋಗ : ಶೋಭನ: Nov 13 03:23 pm – Nov 14 01:56 pm; ಅತಿಗಂಡ: Nov 14 01:56 pm – Nov 15 12:07 pm
ಕರಣ : ಬಾವ: Nov 14 02:50 am – Nov 14 02:36 pm; ಬಾಲವ: Nov 14 02:36 pm – Nov 15 02:15 am; ಕುಲವ: Nov 15 02:15 am – Nov 15 01:47 pm

Time to be Avoided
ರಾಹುಕಾಲ : 2:55 PM to 4:20 PM
ಯಮಗಂಡ : 9:12 AM to 10:38 AM
ದುರ್ಮುಹುರ್ತ : 08:38 AM to 09:24 AM, 10:48 PM to 11:38 PM
ವಿಷ : 08:55 AM to 10:29 AM
ಗುಳಿಕ : 12:03 PM to 1:29 PM

Good Time to be Used
ಅಮೃತಕಾಲ : 04:59 PM to 06:36 PM
ಅಭಿಜಿತ್ : 11:41 AM to 12:26 PM

Other Data
ಸೂರ್ಯೋದಯ : 6:21 AM
ಸುರ್ಯಾಸ್ತಮಯ : 5:46 PM

 

 

 
 

 

ಪ್ರತಿದಿನವೂ ನಿಮಗೆ ಒಂದು ರೀತಿಯ ಅಗ್ನಿಪರೀಕ್ಷೆ. ಪುಟಕ್ಕಿಟ್ಟ ಬಂಗಾರದಂತೆ ಪ್ರತಿಬಾರಿಯೂ ನೀವು ಜಯಶೀಲರಾಗಿ ಬರುವಿರಿ. ಆದಷ್ಟು ನೀವು ಜವಾಬ್ದಾರಿಯನ್ನು ಅರಿತು ಲೋಕದ ವ್ಯವಹಾರದಲ್ಲಿ ಮುನ್ನುಗ್ಗುವುದು ಒಳಿತು.

 

ಸವಾಲುಗಳನ್ನು ಎದುರಿಸದೆ ಗೆಲುವು ಅಸಾಧ್ಯ. ಅಂತಹ ಗೆಲುವು ರಸಹೀನವಾಗಿರುತ್ತದೆ. ಹಾಗಾಗಿ ಮುಂದಿನ ದಿನಗಳಲ್ಲಿ ಮಹತ್ತರ ಕಾರ್ಯ ಮಾಡಲು ಕಂಕಣ ಬದ್ಧರಾಗುವಿರಿ. ನಿಮ್ಮ ಪ್ರಯತ್ನಕ್ಕೆ ಭಗವಂತ ಮತ್ತು ಸ್ನೇಹಿತರು ಸಹಾಯಹಸ್ತ ನೀಡುವರು.

 

ಯಾವುದರಲ್ಲಿ ವಿಶ್ವಾಸ, ಆಸಕ್ತಿ ಇರುವುದೋ ಅಲ್ಲಿ ಕಾರ್ಯ ನಿರ್ವಹಿಸುವುದು ಒಳ್ಳೆಯದು. ಇಲ್ಲವೆ ಗುಡ್ಡಕ್ಕೆ ಮಣ್ಣು ಹೊರುವಂತಹ ವ್ಯರ್ಥ ಪ್ರಯತ್ನವಾಗುವುದು. ಕಾರ್ಯ ಹಮ್ಮಿಕೊಳ್ಳುವ ಮುನ್ನ 2 ಬಾರಿ ಚಿಂತಿಸಿ.

 

ಹಿರಿಯರು ನಿಮಗೆ ಅತ್ಯವಶ್ಯವಾದ ಸಲಹೆಯನ್ನು ನೀಡುವರು. ಅವರ ಸಲಹೆಯಂತೆ ನೀವು ನಡೆದುಕೊಂಡರೆ ಅತ್ಯಂತ ಸಂತೋಷದಿಂದ ದಿನ ಕಳೆಯುವಿರಿ. ಇದರಿಂದ ಮನಸ್ಸು ನಿರಾಳವಾಗುವುದು.

 

 

ನೀವು ನಡೆಯುವ ದಾರಿ ಉತ್ತಮವಾಗಿರುವುದು. ಅನವಶ್ಯಕವಾಗಿ ಗೊಂದಲಕ್ಕೆ ಬಿದ್ದು ನಡೆಯುವ ದಾರಿಯನ್ನು ಬದಲಾಯಿಸದಿರಿ. ಆತ್ಮೀಯ ಗೆಳೆಯರ ಭೇಟಿಯು ನಿಮಗೆ ಆನಂದವನ್ನುಂಟು ಮಾಡುತ್ತದೆ.

 

 

ಆತ್ಮವಿಶ್ವಾಸವಿದ್ದಲ್ಲಿ ಯಶಸ್ಸು ಖಂಡಿತ. ಆದರೆ ಅತಿಯಾದ ಆತ್ಮವಿಶ್ವಾಸ ಅಪಾಯಕಾರಿ. ಇದರಿಂದ ಸರಳವಾಗಿ ಆಗುತ್ತಿದ್ದ ಕೆಲಸಕ್ಕೂ ಬಹಳ ದಿನ ಕಾಯುವಂತಹ ಪರಿಸ್ಥಿತಿ ಬರುವುದು. ಆಂಜನೇಯ ಸ್ತೋತ್ರ ಪಠಿಸಿ.

 

 

ಯಾವುದೇ ಚಿಕ್ಕ ಕಾರ್ಯ ಮಾಡುವುದಾದರು ಸಹ ಅದಕ್ಕೆ ಪೂರ್ವಭಾವಿಯಾಗಿ ಅದರ ಸಾಧಕ ಬಾಧಕಗಳನ್ನು ತಿಳಿದು ಮುಂದುವರಿಯುವುದು ಒಳ್ಳೆಯದು. ಉತ್ತಮ ಸಮಯವನ್ನು ಕಳೆಯುವಿರಿ.

 

 

ನಿಮ್ಮಲ್ಲಿ ಅತ್ಯುತ್ಸಾಹ ತುಂಬಿ ತುಳುಕುತ್ತಿದ್ದರೂ ಕ್ರಿಯಾಶೀಲತೆಗೆ ಬೇಕಾದ ತುಡಿತ ನಿಮ್ಮಲ್ಲಿಲ್ಲ. ಅಲ್ಲದೆ ನಿಮ್ಮ ಕೆಲಸ ಕಾರ್ಯಗಳಿಗೆ ನಿಮ್ಮ ಸ್ನೇಹಿತರು, ಬಂಧುಗಳೇ ಅಡ್ಡ ಹಾಕುವುದರಿಂದ ತೊಂದರೆ ಎದುರಿಸಬೇಕಾಗುವುದು.

 

ಅತ್ಯಂತ ನಂಬಿಕಸ್ಥ ಬಂಧುಗಳು ಇಲ್ಲವೆ ಸ್ನೇಹಿತರು ನಿಮ್ಮ ವಿರುದ್ಧ ತಿರುಗಿ ಬೀಳುವ ಸಾಧ್ಯತೆ ಇರುವುದು. ಹಾಗಾಗಿ ಎಚ್ಚರಿಕೆಯಿಂದ ಹೆಜ್ಜೆ ಇಡಿ. ದೇವರು ಒಳಿತನ್ನು ಮಾಡುವನು.

 

 

ಅನೇಕ ದಿನಗಳ ಯೋಜನೆಗಳನ್ನು ಕಾರ್ಯ ರೂಪಕ್ಕೆ ತರುವಲ್ಲಿ ಮಹತ್ತರ ತಿರುವು ಕಂಡುಬರುವುದು. ಮುಂದಿನ ದಿನಗಳಲ್ಲಿ ಬೃಹತ್‌ ಪ್ರಮಾಣದ ಕಾರ್ಯ ಯೋಜನೆಗೆ ಚಾಲನೆ ಸಿಗುವುದು ಮತ್ತು ಗೌರವ ಸ್ಥಾನ ಹೊಂದುವಿರಿ.

 

ಹೊರಗಿನ ವ್ಯವಹಾರದಲ್ಲಿ ಬರಿ ಮೋಸ ಕಪಟಗಳು ತಾಂಡವಾಡುತ್ತಿವೆ. ಹಾಗಾಗಿ ಅಂತರಂಗದ ನುಡಿಗಳನ್ನು ಆಲಿಸಿ ಕಾರ್ಯ ಪ್ರವೃತ್ತರಾಗಿ. ಪರಿಚಯವಿಲ್ಲದ ವ್ಯಕ್ತಿಗಳ ಜತೆ ಸಂಭಾಷಣೆ ನಡೆಸದಿರುವುದು ಒಳ್ಳೆಯದು.

 

ಹಿಂದೆ ಇದ್ದ ವೈಭವವನ್ನು ನೆನೆದು ಹಿತ್ತಲಲ್ಲಿ ಅತ್ತರು ಎಂಬಂತಾಗಿದೆ ನಿಮ್ಮ ಪರಿಸ್ಥಿತಿ. ದೇಹದಲ್ಲಿ ಕಸುವಿದ್ದಾಗ ಮಾಡಿದ ಕೆಲಸಗಳು ನೆನಪಾಗುವುದು. ಇಂದಿನ ಪರಿಸ್ಥಿತಿಗೂ ಅಂದಿನ ಸ್ಥಿತಿಗೂ ಹೋಲಿಸಿ ನೋಡುವುದು ತರವಲ್ಲ

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top