ಚಳಿಗಾಲದ ಈ ಸಂದರ್ಭದಲ್ಲಿ ನಿಮ್ಮ ಕಿಡ್ನಿಗಳ ಬಗ್ಗೆ ಗಮನವಿರಲಿ. ಅನಿರೀಕ್ಷಿತ ಆಹಾರ ಪದ್ಧತಿಯು ನಿಮ್ಮ ಮೂತ್ರಪಿಂಡವನ್ನು ತೀವ್ರವಾಗಿ ಹಾನಿಗೊಳಿಸುತ್ತದೆ, ನಿಮ್ಮ ಮೂತ್ರಪಿಂಡಗಳು ಪ್ರತಿ ದಿನವೂ ವಿರಾಮವನ್ನು ತೆಗೆದುಕೊಳ್ಳದೆ ಕೆಲಸಮಾಡುತ್ತದೆ,ನಿಮ್ಮ ದೇಹದಲ್ಲಿ ಫಿಲ್ಟರ್ ಆಗಿ ಕಾರ್ಯನಿರ್ವಹಿಸುತ್ತದೆ .ನಿಮ್ಮ ದೇಹದ ಹಾನಿಕಾರಕ ಜೀವಾಣು ವಿಷ ಮತ್ತು ತ್ಯಾಜ್ಯವನ್ನು ಹೊರಹಾಕಲು ಸಹಾಯ ಮಾಡುತ್ತದೆ. ಮೂತ್ರಪಿಂಡವು ನಿಮ್ಮ ದೇಹ ಸರಿಯಾಗಿ ಕಾರ್ಯನಿರ್ವಹಿಸುವುದರಲಿ ಪ್ರಮುಖ ಪಾತ್ರ ವಹಿಸುತ್ತದೆ.ಕೆಳಗಿನ ಕೆಲವು ಆಹಾರಪದ್ದತಿಗಳು ಮೂತ್ರಪಿಂಡವನ್ನು ಹಾನಿ ಯಾಗುವಂತೆ ಮಾಡುತ್ತದೆ. ಅದನ್ನು ತಿಳಿಯಲು ಇದನ್ನು ಓದಿ
ನೀವು ಏನನು ತಿನ್ನುತೀರಾ ಅದು ನಿಮ್ಮ ಆರೋಗ್ಯದಲ್ಲಿ ಕಾಣುತ್ತದೆ:
ನೀವು ಮೂತ್ರಪಿಂಡದ ಸಮಸ್ಯೆಗಳನ್ನು ಹೊಂದಿದ್ದರೆ, ನಿಮ್ಮ ಆಹಾರ ಪದ್ಧತಿಯ ಬಗ್ಗೆ ಗಮನಕೊಡಿ. ನಿಮ್ಮ ಆಹಾರದಲ್ಲಿ ಸಂಸ್ಕರಿಸಿದ ಆಹಾರಗಳು, ತ್ವರಿತ ಆಹಾರ, ಮತ್ತು ಜಂಕ್ ಆಹಾರವನ್ನು ತಿನ್ನುವುದನ್ನು ನಿಲ್ಲಿಸಿ. ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಮತ್ತು ಮೂತ್ರ ಪಿಂಡಗಳನ್ನು ಹಾನಿಯಿಂದ ಕಾಪಾಡಿಕೊಳ್ಳಲು ತಾಜಾ ತರಕಾರಿ ಹಣ್ಣುಗಳನ್ನು ಬಳಸಿ.
ಉಪ್ಪನ್ನು ಮಿತವಾಗಿ ಬಳಸಿ:ಆಹಾರದಲ್ಲಿ ಅತಿಯಾಗಿ ಉಪ್ಪನ್ನು ಬಳಸುವುದರಿಂದ ಅಧಿಕ ರಕ್ತದೊತ್ತಡ ಉಂಟಾಗುತ್ತದೆ, ಇದು ನಿಮ್ಮ ಮೂತ್ರಪಿಂಡವನ್ನು ಹಾನಿಗೊಳಿಸಿ ಮೂತ್ರಪಿಂಡದ ವೈಫಲ್ಯಕ್ಕೆ ಕಾರಣವಾಗಿ ಮೂತ್ರಪಿಂಡದ ಕಲ್ಲುಗಳಿಗೆ ಕಾರಣವಾಗುತ್ತದೆ. ನೀವು ಉಪ್ಪಿನ ಆಹಾರವನ್ನು ಪ್ರೀತಿಸುತಿದ್ದರೆ ಅದನ್ನು ಕ್ರಮೇಣ ಬಿಡುವುದು ಉತ್ತಮ ಇಲ್ಲವಾದಲ್ಲಿ ಅದು ನಿಮ್ಮನು ಸಾವಿನ ಕೂಪಕೆ ತಳ್ಳುವುದು ಖಚಿತ .
3ದಿನ 8 ಲೋಟ ನೀರನ್ನು ಕುಡಿಯಿರಿ:ದಿನ 8 ಲೋಟ ನೀರನ್ನು ಕುಡಿಯುವುದರಿಂದ ನಿಮ್ಮ ದೇಹವನ್ನು ಜಲೀಕರಿಸಲು ಸಹಾಯ ಮಾಡುತ್ತದೆ,ನಿಮ್ಮ ದೇಹವನ್ನು ಯಾವುದೇ ಸಮಸ್ಯೆ ಇಲ್ಲದಂತೆ ಕಾಪಾಡುತ್ತದೆ.ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಕುಡಿಯುವುದರಿಂದ ನೀರು ನಿಮ್ಮ ಮೂತ್ರಪಿಂಡಗಳಲ್ಲಿ ಇರುವ ತ್ಯಾಜ್ಯವನ್ನು ತೊಳೆಯಲು ಸಹಾಯ ಮಾಡುತ್ತದೆ , ನಿಮ್ಮ ಅರೋಗ್ಯವನ್ನು ಕಾಪಾಡಿಕೊಳ್ಳಲು ಸಾಕಷ್ಟು ನೀರನ್ನು ಕುಡಿಯಿರಿ.
4ಮದ್ಯಪಾನ ಸೇವನೆ ನಿಲ್ಲಿಸಿ:ನಿಮ್ಮ ಮೂತ್ರಪಿಂಡವನ್ನು ಹಾನಿಯಿಂದ ಕಾಪಾಡಿಕೊಳ್ಳಲು ,ಮದ್ಯಪಾನ ಸೇವನೆ ನಿಲ್ಲಿಸಿ, ಆಲ್ಕೊಹಾಲ್ ನಿಮ್ಮ ದೇಹದಲ್ಲಿನ ತ್ಯಾಜ್ಯ ವಸ್ತುಗಳನ್ನು ಹೊರಹಾಕದಂತೆ ತಡೆಗಟ್ಟುತ್ತದೆ ಇದರಿಂದ ಮೂತ್ರಪಿಂಡವು ಹಾನಿಗೊಳ್ಳು ತ್ತದೆ ಆದ್ದರಿಂದ ನಿಮಗೆ ಮದ್ಯಪಾನ ಕುಡಿಯುವ ಅಭ್ಯಾಸವಿದ್ದರೆ ಮದ್ಯಪಾನ ಸೇವನೆ ನಿಲ್ಲಿಸಿ..
ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ:
ಸಂಶೋಧಕರು ಮೂತ್ರಪಿಂಡದ ಕಾಯಿಲೆಯು ಹೆಚ್ಚಿನ ಜಡ ಜೀವನಶೈಲಿಯಿಂದ ಸಂಭವಿಸುತ್ತದೆ ಎಂದು ಹೇಳಿದ್ದಾರೆ. ಬೊಜ್ಜು ರಕ್ತದೊತ್ತಡವನ್ನು ಹೆಚ್ಚಿಸುತ್ತದೆ ಮತ್ತು ಮೂತ್ರಪಿಂಡದ ತೊಂದರೆಗಳಿಗೆ ಕಾರಣವಾಗುತ್ತದೆ ಆದ್ದರಿಂದ ಆದಷ್ಟು ವಾಕಿಂಗ್, ಜಾಗಿಂಗ್ ಮತ್ತು ಇತರ ದೈನಂದಿನ ಚಟುವಟಿಕೆಗಳಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳುವುದು ಉತ್ತಮ.
ಸಿಹಿ ತಿನ್ನುವುದನ್ನು ಕಡಿಮೆಮಾಡಿ:ಸಿಹಿ ತಿನ್ನುವುದು ಅಧಿಕ ರಕ್ತದೊತ್ತಡ ಮತ್ತು ಮಧುಮೇಹ ಸಮಸ್ಯೆಗೆ ಕಾರಣ , ಈ ಸಮಸ್ಯೆಗಳು ಮೂತ್ರಪಿಂಡದ ಕಾಯಿಲೆಗೆ ಮೂಲ ಕಾರಣ ವಾಗಿದೆ. ಸಿಹಿ ತಿನ್ನುವುದರ ಬದಲು ನೈಸರ್ಗಿಕ ಹಣ್ಣು ತರಕಾರಿಗಳನ್ನು ತಿನ್ನುವುದನ್ನು ರೂಢಿಮಾಡಿಕೊಂಡು ನಿಮ್ಮ ಅರೋಗ್ಯ ಕಾಪಾಡಿಕೊಳ್ಳಿ.
ಚೆನ್ನಾಗಿ ನಿದ್ರೆಮಾಡಿ:ನಮ್ಮ ದೇಹದ ಅರೋಗ್ಯಕ್ಕೆ ಸಾಕಷ್ಟು ನಿದ್ರೆ ಬೇಕು ಆದರಲ್ಲೂ ಮೂತ್ರಪಿಂಡವು ಚೆನ್ನಾಗಿ ಕಾರ್ಯನಿರ್ವಯಿಸಲು ನಿದ್ರೆ ಬಹಳ ಮುಖ್ಯ , ಕಡಿಮೆ ನಿದ್ರೆ ನಿಮ್ಮ ಮೂತ್ರಪಿಂಡದ ಒಟ್ಟಾರೆ ಕ್ರಿಯೆಯನ್ನು ಹಾಳುಮಾಡುತ್ತದೆ ಅದರಿಂದ ಸಾಕಷ್ಟು ಚೆನ್ನಾಗಿ ನಿದ್ರೆಮಾಡಿ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
