ನವೆಂಬರ್ 21, 2023 ಮಂಗಳವಾರ
ವರ್ಷ : 1945, ಶೋಭಾಕೃತ
ತಿಂಗಳು : ಕಾರ್ತೀಕ, ಪಕ್ಷ : ಶುಕ್ಲಪಕ್ಷ
Panchangam
ತಿಥಿ : ನವಮೀ : Nov 21 03:16 am – Nov 22 01:10 am; ದಶಮೀ : Nov 22 01:10 am – Nov 22 11:04 pm
ನಕ್ಷತ್ರ : ಶತಭಿಷ: Nov 20 09:26 pm – Nov 21 08:01 pm; ಪೂರ್ವಾ ಭಾದ್ರ: Nov 21 08:01 pm – Nov 22 06:37 pm
ಯೋಗ : ವ್ಯಾಘಾತ: Nov 20 08:35 pm – Nov 21 05:40 pm; ಹರ್ಷನ: Nov 21 05:40 pm – Nov 22 02:46 pm
ಕರಣ : ಬಾಲವ: Nov 21 03:16 am – Nov 21 02:13 pm; ಕುಲವ: Nov 21 02:13 pm – Nov 22 01:10 am; ತೈತುಲ: Nov 22 01:10 am – Nov 22 12:07 pm
Time to be Avoided
ರಾಹುಕಾಲ : 2:55 PM to 4:21 PM
ಯಮಗಂಡ : 9:14 AM to 10:40 AM
ದುರ್ಮುಹುರ್ತ : 08:40 AM to 09:26 AM, 10:49 PM to 11:40 PM
ವಿಷ : 02:03 AM to 03:33 AM
ಗುಳಿಕ : 12:05 PM to 1:30 PM
Good Time to be Used
ಅಮೃತಕಾಲ : 01:15 PM to 02:45 PM
ಅಭಿಜಿತ್ : 11:42 AM to 12:27 PM
Other Data
ಸೂರ್ಯೋದಯ : 6:24 AM
ಸುರ್ಯಾಸ್ತಮಯ : 5:46 PM
ಅನಿರೀಕ್ಷಿತವಾಗಿ ನಿಮ್ಮ ಹತ್ತಿರದ ಸಂಬಂಧಿಕರೇ ಮುಜುಗರವನ್ನು ಉಂಟು ಮಾಡುವ ಸಾಧ್ಯತೆ ಇದೆ. ಆದರೆ ನಿಮ್ಮ ಬುದ್ಧಿಚಾತುರ್ಯದಿಂದ ಎಲ್ಲವನ್ನೂ ಎದುರಿಸುವಿರಿ. ಅಂತಿಮ ಗೆಲುವು ನಿಮ್ಮದಾಗುವುದು.
ಹೊರಗಿನವರು ಬಂದು ನಿಮಗೆ ಸಹಾಯ ಮಾಡುವರೆಂಬ ಭ್ರಮೆ ಬೇಡ. ನಿಮ್ಮ ಜೀವನದ ಶಿಲ್ಪಿ ನೀವೇ. ಹಾಗಾಗಿ ಕಠಿಣ ಪರಿಶ್ರಮ ಮಾಡದೆ ವಿಧಿಯಿಲ್ಲ. ಆದಾಗ್ಯೂ ಭಗವಂತ ನಿಮ್ಮ ಕೋರಿಕೆಯನ್ನು ಈಡೇರಿಸುವನು.
ನಿಮ್ಮ ವ್ಯಕ್ತಿತ್ವದ ಸಿದ್ಧಿ ಗೆಲ್ಲುವ, ಜನರ ಪ್ರಶಂಸೆ ದೊರೆಯುವ ಕಾಲವಾಗಿದೆ. ಜಗತ್ತು ಬಹು ಸುಂದರವಾಗಿ ಕಾಣಿಸುವುದು. ಗುರು ಹಿರಿಯರ ಆಶೀರ್ವಾದ ನಿಮ್ಮ ಮೇಲೆ ಸದಾ ಇರುವುದರಿಂದ ತೊಂದರೆ ಇಲ್ಲ.
ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ. ಅಂತೆಯೇ ಆಗಸದಲ್ಲಿ ಕಾಣುವ ಕಾಮನಬಿಲ್ಲಿನ ಬಣ್ಣಗಳನ್ನು ನೋಡಿ ಅನಂದಿಸಬೇಕೇ ಹೊರತು ಅದನ್ನು ಪಡದೇ ತೀರುವೆನೆಂಬ ಹುಚ್ಚು ವ್ಯಾಮೋಹ ಬೇಡ.
ಬರೀ ಮಾತನಾಡುವವರೇ ಬಂದು ತಲೆ ತಿನ್ನುವ ಸಂಭವ ಹೆಚ್ಚು. ಚತುರರಾದ ನೀವು ಸಹನೆಯಿಂದ ಅವರನ್ನು ದೂರ ತಳ್ಳಿ. ಮಂಗಳ ಕಾರ್ಯಗಳಲ್ಲಿ ಭಾಗವಹಿಸುವ ನೀವು ಆಹಾರದ ಬಗ್ಗೆ ಗಮನ ಹರಿಸಿ. ಇಲ್ಲವೆ ಉದರ ಶೂಲೆ ಬರುವ ಸಾಧ್ಯತೆ ಇದೆ.
ಜನರ ನಡುವೆ ನಿಂತು ನಾಯಕತ್ವ ಪ್ರದರ್ಶಿಸುವ ಸಂದರ್ಭ ಬಂದರೆ ಸವಾಲು ಸ್ವೀಕರಿಸಿ. ಒಳಿತಾಗುವುದು. ಕುಟುಂಬದ ಸದಸ್ಯರೊಡನೆ ಸೌಹಾರ್ದಯುತವಾಗಿ ವರ್ತಿಸಿ. ಮನೆಯ ಹಿರಿಯರ ಆರೋಗ್ಯದ ಕಡೆ ಗಮನ ಕೊಡಿ.
ಕಾದು ಸುಸ್ತಾಗುವುದು ನೋವಿನ ವಿಷಯ. ಆದರೆ ಗಾಣದಲ್ಲಿ ಎಣ್ಣೆ ಬರುವ ಸಮಯದಲ್ಲಿ ಕಣ್ಣು ಮುಚ್ಚಿಕೊಂಡರೆ ಹೇಗೆ? ಬಹುದಿನದ ಕನಸು ಈಡೇರುವ ಸುವರ್ಣ ದಿನ ಇದಾಗಿದೆ. ಕುಲದೇವರನ್ನು ಪ್ರಾರ್ಥಿಸಿ. ಕಾಲನಾಮಕ ಪರಮಾತ್ಮನನ್ನು ನೆನೆಯಿರಿ.
ಕತ್ತಲು ಇದೆ, ಹಗಲು ಮೂಡಲಾರದು ಎಂಬ ನಿರಾಸೆ ಭಾವನೆಯು ನಿಮಗೆ ಥರವಲ್ಲ. ಧೈಯಂ ಸರ್ವತ್ರ ಸಾಧನಂ ಎಂದು ಮುನ್ನುಗ್ಗುವ ನೀವು ಇಂದೇಕೆ ಚಿಂತಿಸುವಿರಿ. ಯಾವುದನ್ನೂ ಚಿಂತಿಸುವ ಅಗತ್ಯವಿಲ್ಲ. ನಿಮ್ಮನ್ನು ರಕ್ಷಿಸಲು ದೇವರಿದ್ದಾನೆ .
ಸುಮ್ಮನೆ ಕಾಲಹರಣ ಮಾಡಬೇಡಿ. ನಿಶ್ಚಿತವಾದ ಗುರಿ ಹಾಗೂ ಧೈರ್ಯ ನಿಮಗೆ ರಕ್ಷ ಣೆ ನೀಡುವವು. ವಾಹನ ಖರೀದಿ ಯೋಗ ಇರುತ್ತದೆ. ಸಂಸಾರದಲ್ಲಿ ಸ್ವಲ್ಪ ವಿರಸ ಮೂಡುವ ಸಾಧ್ಯತೆ ಇರುವುದು. ಮನೋನಿಯಾಮಕ ರುದ್ರದೇವರನ್ನು ಭಜಿಸಿ.
ಮಾತಿನ ಚಾತುರ್ಯ ಇದ್ದರೂ ಸುಮ್ಮನೆ ಮೌನ ವಹಿಸುವುದು ಉತ್ತಮ. ಮಾತಿನಲ್ಲಿ ಮೃದುತ್ವ ರೂಢಿಸಿಕೊಳ್ಳಿ. ಸಂಗಾತಿಯ ಸಲಹೆ ಪಡೆಯಿರಿ. ಮಕ್ಕಳ ಆರೋಗ್ಯ ಉತ್ತಮವಾಗಿರುತ್ತದೆ. ಹಣಕಾಸಿನ ಸ್ಥಿತಿ ಸಾಧಾರಣವಾಗಿರುತ್ತದೆ.
ಮಕ್ಕಳಿಂದ ಸಂತೋಷದ ವಾರ್ತೆ ಕೇಳಲಿದ್ದೀರಿ. ಅವರಿಗೆ ನಿಮ್ಮ ಮಾರ್ಗದರ್ಶನ ಸೂಕ್ತವಾಗಿ ಸಿಗಲಿ. ಶ್ರೇಯಸ್ಸು ದೊರೆಯಲಿದೆ. ಮನೆಯಲ್ಲಿ ಸಂಭ್ರಮದ ವಾತಾವರಣ ಮೂಡಲಿದೆ. ಮನೆ ಮಂದಿಯೆಲ್ಲಾ ಕೂಡಿ ಕುಲದೇವರನ್ನು ಪ್ರಾರ್ಥನೆ ಮಾಡಿ.
ಹಲವಾರು ಯೋಜನೆಗಳನ್ನು ಹಾಕಿಕೊಳ್ಳುವ ಹಳೆಯ ಚಾಳಿ ಶುರು ಮಾಡದಿರಿ. ಅದಕ್ಕೆ ಇನ್ನೂ ಕಾಲ ಪಕ್ವವಾಗಿಲ್ಲ. ಸದ್ಯದರಲ್ಲಿಯೇ ಒಂದು ಮಹಾಯುದ್ಧದಲ್ಲಿ ಗೆಲ್ಲಬೇಕಿದೆ. ಆ ಬಗ್ಗೆ ಚಿಂತಿಸಿ ಕಾರ್ಯ ಪ್ರವೃತ್ತರಾಗಿ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
