fbpx
ಸಮಾಚಾರ

ನವೆಂಬರ್ 22: ಇಂದಿನ ಪಂಚಾಂಗ ಮತ್ತು ದಿನ ಭವಿಷ್ಯ.

ಯಾರೋ ಒಬ್ಬರು ನಿಮ್ಮನ್ನು ಟೀಕಿಸಿಬಿಟ್ಟರು ಎಂದು ಕೊರಗದಿರಿ. ಟೀಕೆ,ಟಿಪ್ಪಣಿಗಳು ಮನುಜ ಜೀವನದಲ್ಲಿ ಬರುವ ಉಳಿಪೆಟ್ಟುಗಳು. ಆ ಪೆಟ್ಟುಗಳನ್ನು ತಿನ್ನದೆ ಇದ್ದಲ್ಲಿ ನೀವು ಪರಿಪೂರ್ಣ ವ್ಯಕ್ತಿ ಆಗಲಾರಿರಿ. ಆದಷ್ಟು ತಾಳ್ಮೆಯಿಂದ ಇರಿ.

ಕೆಲವೇ ಕೆಲವು ಒಳ್ಳೆಯ ಪ್ರಯತ್ನಗಳ ಮೂಲಕ ಈ ದಿನದ ಅಂತ್ಯಭಾಗದಲ್ಲಿ ಶುಭ ಫಲವನ್ನು ನಿರೀಕ್ಷಿಸಬಹುದು. ದೈಹಿಕ ಆರೋಗ್ಯದ ಕಡೆ ಗಮನ ನೀಡಿ. ಸಾಧ್ಯವಾದಲ್ಲಿ ವಿಷ್ಣು ಸಹಸ್ರನಾಮ ಪಾರಾಯಣ ಮಾಡಿ.

ಒಳ್ಳೆಯ ಗೆಳೆಯರು ನಿಮಗೆ ದೊರೆಯುತ್ತಾರೆ. ಆದರೆ ವ್ಯರ್ಥ ಮಾತುಕತೆಗಳಲ್ಲೇ ನಿಮ್ಮ ಅಮೂಲ್ಯ ಸಮಯವನ್ನು ಹಾಳು ಮಾಡುವವರಾದ್ದರಿಂದ ಅವರನ್ನು ನಯವಾದ ಮಾತುಗಳಿಂದ ದೂರ ಇಡುವುದು ಒಳ್ಳೆಯದು.

ಜನರನ್ನು ಹತ್ತಿರಕ್ಕೆ ಸೇರಿಸಿಕೊಳ್ಳಿ ಮತ್ತು ಅವರ ವಿಶ್ವಾಸವನ್ನು ಸಂಪಾದಿಸಿ. ಆದರೆ ಪಶ್ಚಾತ್ತಾಪ ಪಡುವಷ್ಟು ಹತ್ತಿರಕ್ಕೆ ಮಾತ್ರ ಅವರೆಲ್ಲ ಬಾರದಿರಲಿ ಮತ್ತು ಅವರು ನಿಮ್ಮ ಮೇಲೆ ಸವಾರಿ ಮಾಡದಂತೆ ಇರಲಿ.

 

ಎಲ್ಲಾ ಕೆಲಸಗಳು ವಿಳಂಬವಿಲ್ಲದೆ ಪೂರ್ಣಗೊಳ್ಳುವುದು. ಇದಕ್ಕೆಲ್ಲ ಗುರು, ಹಿರಿಯರ ಆಶೀರ್ವಾದವೇ ಕಾರಣವಾಗುವುದು. ಕೆಲಸ ಮುಗಿಯುವವರೆಗೂ ಸ್ವಲ್ಪ ತಾಳ್ಮೆಯಿಂದ ಇರುವುದು ಒಳ್ಳೆಯದು.

 

ಮಾನಸಿಕ ಯೋಚನೆಗಳು ಅನುಷ್ಠಾನಕ್ಕೆ ಅನುಕೂಲಕರವಾಗಿದ್ದರೆ ಕ್ಷೇಮ. ಆದರೆ ಅದರ ವಿರುದ್ಧವಾಗಿ ಚಿಂತಿಸಿ ಮಾನಸಿಕ ಸಮಸ್ಯೆಗಳನ್ನು ತಂದುಕೊಳ್ಳದಿರಿ. ವಿಷ್ಣು ಸಹಸ್ರನಾಮ ಪಾರಾಯಣ ಮಾಡುವುದರಿಂದ ಒಳಿತಾಗುವುದು.

 

ನಿತ್ಯದ ಪಡಿಪಾಟಲುಗಳು ಇದ್ದದ್ದೇ. ಆದರೆ ಅವುಗಳ ಮಧ್ಯೆಯೇ ಜೀವಿಸಿ ಅವುಗಳನ್ನು ಮೆಟ್ಟಿ ನಿಲ್ಲುವುದೇ ಜೀವನದ ಆಟ. ಕೆಲಸ ಕಾರ್ಯಗಳು ಮಂದ ಪ್ರಗತಿಯಲ್ಲಿ ಸಾಗಿದರೂ ಅಂತಿಮವಾಗಿ ಶುಭಫಲ ಕಾಣುವಿರಿ.

 

ಅನಿರೀಕ್ಷಿತವಾದ ಬೆಳವಣಿಗೆಯೊಂದರಲ್ಲಿ ಅಸಾಧ್ಯವಾದ ಸ್ನೇಹ ಕುದುರುವಂತಹದು. ಆ ಮೂಲಕ ನಿಮಗೆ ಹಣಕಾಸಿನ ನೆರವು ದೊರೆಯುವುದು ಮತ್ತು ಕುಟುಂಬ ವರ್ಗದವರ ಸಹಕಾರವೂ ದೊರೆಯುವುದು. ನಿಮ್ಮ ಮನೋಕಾಮನೆಗಳು ಪೂರ್ಣಗೊಳ್ಳುವುದು.

 

ಕೆಲಸದ ಒತ್ತಡದ ದೆಸೆಯಿಂದ ಗೊಂದಲದ ಗೂಡಾಗಿರುವ ಮನಸ್ಸಿನಲ್ಲಿ ಯಾವ ಕೆಲಸವನ್ನು ಮೊದಲು ಮುಗಿಸಬೇಕು ಎಂದು ಚಿಂತಿಸುವಿರಿ. ಮೊದಲು ಮಾಡಿಕೊಂಡ ಒಪ್ಪಂದದ ಕೆಲಸವನ್ನು ಬೇಗನೆ ಮುಗಿಸಿ ಮತ್ತೊಂದು ಕೆಲಸವನ್ನು ಕೈಗೆತ್ತಿಕೊಳ್ಳಿ.

ಮಾತು ಬೆಳ್ಳಿ ಮೌನ ಬಂಗಾರ ಎನ್ನುವ ಮಾತಿದೆ. ಹಾಗಾಗಿ ನೀವಾಡುವ ಮಾತುಗಳು ಹಿತಮಿತವಾಗಿರಲಿ. ಸೂಜಿಗೆ ಮುತ್ತು ಕೊಟ್ಟಂತೆ ನಿಮ್ಮ ಮಾತುಗಳು ಹೊರಗೆ ಬರಲಿ. ಇದರಿಂದ ಗೌರವ ಘನತೆ ನಿಮ್ಮದಾಗುವುದು.

 

ವೃಥಾ ಕಾಡುಹರಟೆಯಿಂದ ಸಮಯ ಕಳೆಯಲು ಸೂಕ್ತ ಸಮಯವಲ್ಲ. ಮೈತುಂಬಾ ಕೆಲಸಗಳು ಇದ್ದು, ಯಾವ ಕೆಲಸ ಮಾಡಲು ಹೋದರೂ ಟೀಕೆಗೆ ಗುರಿ ಆಗುವಿರಿ. ಆದರೆ ಬಂದದ್ದೆಲ್ಲಾ ಬರಲಿ ಗೋವಿಂದನ ದಯೆ ಇರಲಿ ಎಂದು ಭಾವಿಸಿರಿ.

 

ಮಿತ್ರರಿಂದ ಹಲವು ರೀತಿಯ ಬೆಂಬಲಗಳನ್ನು ಬಯಸಿದ್ದಲ್ಲಿ ನಿರಾಶರಾಗಬೇಕಾಗುವುದು. ನಿಮ್ಮ ಆತ್ಮಬಲದ ಮೇಲೆ ಕಾರ್ಯವನ್ನು ಹಮ್ಮಿಕೊಳ್ಳಿ. ಧೈರ್ಯವಂತರಿಗೆ ಮಾತ್ರ ಭಗವಂತ ಸಹಾಯ ಮಾಡುವನು. ದೂರದ ಪ್ರಯಾಣವನ್ನು ಮುಂದೂಡುವುದು ಒಳ್ಳೆಯದು.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top