fbpx
ಸಮಾಚಾರ

ಡಿಸೆಂಬರ್ 02: ಇಂದಿನ ಪಂಚಾಂಗ ಮತ್ತು ದಿನ ಭವಿಷ್ಯ.

ಡಿಸೆಂಬರ್ 2, 2023 ಶನಿವಾರ
ವರ್ಷ : 1945, ಶೋಭಾಕೃತ
ತಿಂಗಳು : ಕಾರ್ತೀಕ, ಪಕ್ಷ : ಕೃಷ್ಣಪಕ್ಷ

Panchangam
ತಿಥಿ : ಪಂಚಮೀ : Dec 01 03:31 pm – Dec 02 05:14 pm; ಷಷ್ಠೀ : Dec 02 05:14 pm – Dec 03 07:27 pm
ನಕ್ಷತ್ರ : ಪುಷ್ಯ: Dec 01 04:40 pm – Dec 02 06:54 pm; ಆಶ್ಲೇಷ: Dec 02 06:54 pm – Dec 03 09:36 pm
ಯೋಗ : ಬ್ರಹ್ಮ: Dec 01 08:03 pm – Dec 02 08:18 pm; ಇಂದ್ರ: Dec 02 08:18 pm – Dec 03 08:56 pm
ಕರಣ : ತೈತುಲ: Dec 02 04:19 am – Dec 02 05:14 pm; ಗರಿಜ: Dec 02 05:14 pm – Dec 03 06:17 am; ವಾಣಿಜ: Dec 03 06:17 am – Dec 03 07:27 pm

Time to be Avoided
ರಾಹುಕಾಲ : 9:19 AM to 10:44 AM
ಯಮಗಂಡ : 1:33 PM to 2:58 PM
ದುರ್ಮುಹುರ್ತ : 08:00 AM to 08:45 AM
ವಿಷ : 09:08 AM to 10:55 AM
ಗುಳಿಕ : 6:29 AM to 7:54 AM

Good Time to be Used
ಅಮೃತಕಾಲ : 11:54 AM to 01:39 PM
ಅಭಿಜಿತ್ : 11:46 AM to 12:31 PM

Other Data
ಸೂರ್ಯೋದಯ : 6:30 AM
ಸುರ್ಯಾಸ್ತಮಯ : 5:47 PM

 

 

 

ಮೇಷ (Mesha)


ಈ ದಿನ ಸಂತೋಷವಾಗಿ ಕಳೆಯುವಿರಿ. ನೂತನ ವಸ್ತ್ರಾಭರಣಗಳ ಖರೀದಿ ಯೋಗ. ಮಧುರ ಪದಾರ್ಥ ಭಕ್ಷಣೆ. ಮನೋಲ್ಲಾಸ. ಹಮ್ಮಿಕೊಂಡ ಕಾರ್ಯಗಳು ಯಶಸ್ಸಿನತ್ತ ಸಾಗುವುದು. ಆರ್ಥಿಕ ಸ್ಥಿತಿ ಉತ್ತಮ.
 

ವೃಷಭ (Vrushabha)

ಮನುಜ ಬಯಸಿದ್ದು ಒಂದು ಆಗುವುದು ಮತ್ತೊಂದು. ಇದು ದೈವದ ನಿಯಮ. ಹಾಗಾಗಿ ನಿಮ್ಮ ಇಚ್ಛೆಯ ವಿರುದ್ಧ ಕಾರ್ಯಗಳು ನಡೆಯುವುದು. ಆರ್ಥಿಕ ಸ್ಥಿತಿ ಸಾಧಾರಣವಾಗಿರುತ್ತದೆ.

 

ಮಿಥುನ (Mithuna)

ಮನೋಕಾಮನೆಗಳು ಪೂರ್ಣಗೊಳ್ಳುವುದು. ವಿವಿಧ ಮೂಲಗಳಿಂದ ಹಣ ಹರಿದು ಬರುವುದು. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ ಕಂಡುಬರುವುದು. ಆರೋಗ್ಯ ಉತ್ತಮ.

 

ಕರ್ಕ (Karka)

ಪರರ ಜಗಳವನ್ನು ತೀರಿಸುವಲ್ಲಿ ಮಧ್ಯಸ್ಥಿಕೆ ವಹಿಸದಿರಿ. ಇದರಿಂದ ನಿಮಗೆ ತೊಂದರೆ ಆಗುವುದು. ನೀವು ನಿಮ್ಮ ಗಮನವನ್ನು ನಿಮ್ಮ ಕೆಲಸದ ಕಡೆ ಕೊಡಿ. ನೆಮ್ಮದಿಯ ಜೀವನವನ್ನು ಕಂಡುಕೊಳ್ಳುವಿರಿ.

ಸಿಂಹ (Simha)

ನಿಮ್ಮ ಆಶಾವಾದಕ್ಕೆ ಪುಷ್ಟಿ ದೊರೆಯಲಿದೆ. ಬಂದ ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳುವಲ್ಲಿ ಯಶಸ್ಸನ್ನು ಸಾಧಿಸಲಿದ್ದೀರಿ.

 

ಕನ್ಯಾರಾಶಿ (Kanya)

ಹೊಸ ಕೆಲಸದ ಬಗ್ಗೆ ಚಿಂತನೆಯಲ್ಲಿ ಯಶಸ್ಸು. ಹೆಂಚು, ಕಬ್ಬಿಣ ಸಿಮೆಂಟ್ ಮುಂತಾದ ಕಟ್ಟಡ ಸಾಮಗ್ರಿ ವ್ಯಾಪಾರಿಗಳಿಗೆ ಹೆಚ್ಚಿನ ಲಾಭ ದೊರಕಲಿದೆ. ಅತಿಯಾದ ಆತ್ಮವಿಶ್ವಾಸದಿಂದಾಗಿ ಹೆರವರನ್ನು ಕಡೆಗಣಿಸದಿರುವುದು ಉತ್ತಮ.

 

ತುಲಾ (Tula)

ಹಿಂದಿನ ಸಾಲಗಳಿಂದ ಮುಕ್ತರಾಗಲು ಹೊಸ ಮಾರ್ಗವೊಂದು ಗೋಚರಿಸಲಿದೆ. ಸ್ನೇಹಿತರ ಸಹಕಾರದಿಂದಾಗಿ ವ್ಯವಹಾರವನ್ನು ಉತ್ತಮ ಸ್ಥಿತಿಗೆ ಒಯ್ಯಲಿದ್ದೀರಿ. ದೂರದ ಪ್ರಯಾಣ ಅಷ್ಟೊಂದು ಉತ್ತಮವಾಗಿರಲಾರದು.

 

ವೃಶ್ಚಿಕ (Vrushchika)

ಹಣಕಾಸಿನ ವಿಚಾರದಲ್ಲಿ ಚೇತರಿಕೆ ಕಂಡುಬರುವುದು. ಮನೆ ಕಟ್ಟುವ ವಿಷಯವಾಗಿ ಮನೆಯವರೊಂದಿಗೆ ಕುಳಿತು ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುವಲ್ಲಿ ಯಶಸ್ಸು ಕಾಣುವಿರಿ. ಮನೆ ದೇವರ ಆರಾಧನೆಯಿಂದ ಹೆಚ್ಚಿನ ಫಲ ದೊರೆಯಲಿದೆ.

 

ಧನು ರಾಶಿ (Dhanu)

ನಿರೀಕ್ಷಿತ ಕಾರ್ಯಸಾಧನೆಗೆ ಅಡಚಣೆಗಳು ತೋರಿ ಬಂದಾವು. ಕಾರ್ಯಒತ್ತಡಗಳು ದೇಹಾಯಾಸಕ್ಕೆ ಕಾರಣವಾದೀತು. ದಾಂಪತ್ಯದಲ್ಲಿ ತುಸು ಚೇತರಿಕೆ ಕಂಡು ಬಂದು ಸಮಾಧಾನವಾಗಲಿದೆ.

 

ಮಕರ (Makara)

ಆರ್ಥಿಕ ವಿಚಾರದಲ್ಲಿ ಗಮನ ಹರಿಸುವಂತಾದೀತು. ವೃತ್ತಿರಂಗದಲ್ಲಿ ಹೆಚ್ಚಿನ ಹೊಂದಾಣಿಕೆ ಇರಲಿ. ವಾಹನ, ಆರೋಗ್ಯದ ಬಗ್ಗೆ ಜಾಗ್ರತೆ ವಹಿಸುವುದು. ಅತೀ ಅಗತ್ಯವಿದೆ. ದಿನಾಂತ್ಯ ಶುಭ.

 

ಕುಂಭರಾಶಿ (Kumbha)

ವೃತ್ತಿರಂಗದಲ್ಲಿ ಕಾರ್ಯಒತ್ತಡವು ಹೆಚ್ಚಲಿದೆ. ಅನಗತ್ಯ ದುಂದುವೆಚ್ಚದ ಬಗ್ಗೆ ಗಮನ ಹರಿಸಿರಿ. ಶುಭಕಾರ್ಯಗಳ ಮಾತುಕತೆ ಮುರಿದು ಬೀಳುವ ಸಾಧ್ಯತೆ ಇದೆ. ಮಾನಸಿಕ ನೆಮ್ಮದಿ ಇರದು.

 

ಮೀನರಾಶಿ (Meena)

ಅನಗತ್ಯ ವಿವಾದವೊಂದು ಎದುರಾಗಬಹುದು. ಜಾಗ್ರತೆ ವಹಿಸಿರಿ. ವೃತ್ತಿರಂಗದಲ್ಲಿ ಕಾಲೆಳೆೆಯುವ ಸಂಭವವಿದೆ. ವ್ಯಾಪಾರ, ವ್ಯವಹಾರಗಳು ಅಭಿವೃದ್ಧಿ ತಂದಾವು. ಸಂಚಾರದಲ್ಲಿ ಹೆ‌ಚ್ಚಿನ ಜಾಗ್ರತೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top