fbpx
ಸಮಾಚಾರ

ಡಿಸೆಂಬರ್ 04: ಇಂದಿನ ಪಂಚಾಂಗ ಮತ್ತು ದಿನ ಭವಿಷ್ಯ.

ಡಿಸೆಂಬರ್ 4, 2023 ಸೋಮವಾರ
ವರ್ಷ : 1945, ಶೋಭಾಕೃತ
ತಿಂಗಳು : ಕಾರ್ತೀಕ, ಪಕ್ಷ : ಕೃಷ್ಣಪಕ್ಷ

Panchangam
ತಿಥಿ : ಸಪ್ತಮೀ : Dec 03 07:27 pm – Dec 04 09:59 pm; ಅಷ್ಟಮೀ : Dec 04 09:59 pm – Dec 06 12:37 am
ನಕ್ಷತ್ರ : ಮಖ: Dec 03 09:36 pm – Dec 05 12:35 am; ಪುಬ್ಬ: Dec 05 12:35 am – Dec 06 03:37 am
ಯೋಗ : ವೈಧೃತಿ: Dec 03 08:56 pm – Dec 04 09:47 pm; ವಿಷ್ಕಂಭ: Dec 04 09:47 pm – Dec 05 10:41 pm
ಕರಣ : ವಿಷ್ಟಿ: Dec 03 07:27 pm – Dec 04 08:42 am; ಬಾವ: Dec 04 08:42 am – Dec 04 10:00 pm; ಬಾಲವ: Dec 04 10:00 pm – Dec 05 11:19 am

Time to be Avoided
ರಾಹುಕಾಲ : 7:55 AM to 9:20 AM
ಯಮಗಂಡ : 10:44 AM to 12:09 PM
ದುರ್ಮುಹುರ್ತ : 12:32 PM to 01:17 PM, 02:47 PM to 03:32 PM
ವಿಷ : 09:36 AM to 11:24 AM
ಗುಳಿಕ : 1:34 PM to 2:58 PM

Good Time to be Used
ಅಮೃತಕಾಲ : 09:53 PM to 11:41 PM
ಅಭಿಜಿತ್ : 11:46 AM to 12:32 PM

Other Data
ಸೂರ್ಯೋದಯ : 6:31 AM
ಸುರ್ಯಾಸ್ತಮಯ : 5:47 PM

 

 

 

ಬಹು ಎತ್ತರಕ್ಕೆ ಬೆಳೆಯಬೇಕೆಂಬ ಆಸೆ ಒಳ್ಳೆಯದು. ಈ ನಡುವೆ ನಿಮ್ಮ ಏಳಿಗೆಗೆ ಸಹಕರಿಸಿದ ಅಧಿಕಾರಿಗಳನ್ನು ಮತ್ತು ಗೆಳೆಯರನ್ನು ಮರೆಯುವುದು ಒಳ್ಳೆಯದಲ್ಲ. ನಿಮ್ಮ ಬುದ್ಧಿವಂತಿಕೆಯು ಹೆಚ್ಚು ಉಪಯೋಗಕ್ಕೆ ಬರುವುದು.

ಯಶಸ್ಸು ಅಥವಾ ಅಪಯಶಸ್ಸುಗಳನ್ನು ಸಮಾನವಾಗಿ ಸ್ವೀಕರಿಸಿ. ದೊರಕಿದ ಅನುಭವ ಮುಂದೆ ನಿಮಗೆ ದಾರಿ ದೀಪವಾಗುವುದು. ನಾನು ತಿಳಿದುಕೊಂಡಿದ್ದೆ ಸತ್ಯ ಎಂಬ ಧೋರಣೆ ಒಳ್ಳೆಯದಲ್ಲ. ಪರರ ಅಭಿಪ್ರಾಯಗಳಿಗೂ ಬೆಲೆ ಕೊಡುವುದು ಒಳಿತು.

ನಿಮ್ಮ ಅಪರೂಪದ ಪ್ರತಿಭೆಯನ್ನು ಜನರು ಗುರುತಿಸುವ ಅದೃಷ್ಟದ ಕಾಲಘಟ್ಟವು ನಿಮ್ಮ ಪಾಲಿಗಿದೆ. ಹಾಗಾಗಿ ಮುನ್ನುಗ್ಗಿ ಕೆಲಸ ಕಾರ್ಯಗಳನ್ನು ಹಮ್ಮಿಕೊಳ್ಳಿ. ಜಯವಿರುವವರಿಗೆ ಭಯವಿಲ್ಲ ಎಂಬುದನ್ನು ಅರಿಯಿರಿ.

ಮಾತು ಎಲ್ಲೆ ಮೀರದಿರಲಿ. ಆನಾವಶ್ಯಕ ಅಪವಾದಗಳು ಬರುವ ಸಾಧ್ಯತೆ ಇದೆ. ನಿಮ್ಮ ಕೈಕೆಳಗಿನ ಅಧಿಕಾರಿಗಳೇ ನಿಮ್ಮನ್ನು ಪೇಚಿಗೆ ಸಿಲುಕಿಸುವರು. ಆಂಜನೇಯನ ಸ್ತೋತ್ರ ಪಠಿಸಿ. ಆತ್ಮಶಕ್ತಿಯನ್ನು ಹೆಚ್ಚಿಸಿಕೊಳ್ಳಿ.

 

ಬದಲಾವಣೆಯ ಮಾರ್ಗವನ್ನು ಬಯಸುವಿರಿ. ಕೆಲವು ಉತ್ತಮ ಗೆಳೆಯರು ನಿಮಗೆ ಸರಿಯಾದ ಮಾರ್ಗದರ್ಶನ ನೀಡುವರು. ನಿಮ್ಮ ಬರಹಗಳಿಗೆ ಜನರಿಂದ ಮೆಚ್ಚುಗೆ ವ್ಯಕ್ತವಾಗುವುದು ಮತ್ತು ಕೆಲವು ನಿಗೂಢ ವಿಚಾರಗಳು ನಿಮಗೆ ಗೋಚರಿಸುವುದು.

 

ಜೀವನದ ಹಲವು ಕಿರಿಕಿರಿಗಳ ನಡುವೆಯು ದೈವಕೃಪೆಯನ್ನು ಪಡೆಯುವ ನೀವು ಹಲವಾರು ಉನ್ನತವಾದ ಆಲೋಚನೆಗಳನ್ನು ಕಾರ್ಯರೂಪಕ್ಕೆ ತರುವಿರಿ. ಇದರಿಂದ ಜಗತ್ತಿಗೆ ನಿಮ್ಮ ಇನ್ನೊಂದು ಮುಖ ಅನಾವರಣವಾಗುವುದು ಮತ್ತು ಕೀರ್ತಿಯೂ ಲಭಿಸುವುದು.

 

ಸದಾ ಪಾದರಸದಂತೆ ಚುರುಕಾಗಿರುವ ನಿಮ್ಮನ್ನು ಕಂಡು ಹಲವರಿಗೆ ಅಚ್ಚರಿ. ನಿಮ್ಮ ಈ ಉತ್ಸಾಹಶೀಲತೆಯನ್ನು ಮೆಚ್ಚಿ ಹಲವರಿಂದ ಪ್ರಶಂಸೆಗೆ ಒಳಗಾಗುವಿರಿ. ವಿವಿಧ ಮೂಲಗಳಿಂದ ಹಣಕಾಸು ಬರುವುದು.

 

ನಿಮ್ಮ ಕಷ್ಟಕಾಲದಲ್ಲಿ ಯಾವಾಗಲು ಪರರು ಸಹಾಯ ಮಾಡುತ್ತಾರೆಂದು ಕೈಕಟ್ಟಿ ಕೂರುವುದು ಜಾಣರ ಲಕ್ಷ ಣವಲ್ಲ. ಕೆಲಸ ಕಾರ್ಯಗಳಲ್ಲಿ ಯಶಸ್ಸು ಸಾಧಿಸಲು ನಿಮ್ಮ ಪ್ರಯತ್ನ ಬಹಳವಾಗಿರಬೇಕು. ಆಗ ಮಾತ್ರ ಪರರು ನಿಮಗೆ ಸಹಾಯ ಹಸ್ತ ನೀಡುವರು.

 

ನಿಮ್ಮ ಮಾತುಗಳು ಇತರರು ಕೇಳುತ್ತಿಲ್ಲ ಅಥವಾ ನಿಮ್ಮ ಮಾತಿಗೆ ಬೆಲೆ ಕೊಡುತ್ತಿಲ್ಲ ಎಂಬ ಕೊರಗು ನಿಮ್ಮನ್ನು ಕಾಡುವುದು. ಅದಕ್ಕಾಗಿ ಚಿಂತಿಸುವ ಅವಶ್ಯಕತೆಯಿಲ್ಲ. ನಿಮ್ಮನ್ನು ನೀವು ಅರಿತುಕೊಳ್ಳಲು ಶುಭ ದಿನವಾಗಿದೆ.

ಯಾವ ಕೆಲಸ ಮಾಡಲು ಹೋದರೂ ಅದಕ್ಕೆ ನೂರೆಂಟು ವಿಘ್ನಗಳು. ಹಾಗಾಗಿ ನಿತ್ಯದ ಜೀವನ ನಡೆಸುವುದಾದರೂ ಹೇಗೆ ಎಂಬ ಚಿಂತೆ ನಿಮ್ಮನ್ನು ಕಾಡುವುದು. ಆದರೆ ಕುಲದೇವರ ಅನುಗ್ರಹದಿಂದ ನಿಮ್ಮ ಬಾಳಲ್ಲಿ ಬೆಳಕಿನ ಕಿರಣ ಮೂಡುವುದು.

 

 

ಯಾವುದೇ ಕಾರ್ಯ ರಾತ್ರಿ ಕಳೆದು ಬೆಳಕು ಆಗುವುದರೊಳಗೆ ಪೂರ್ಣಗೊಳ್ಳುವುದಿಲ್ಲ. ಎಲ್ಲದಕ್ಕೂ ಒಂದು ಕಾಲಮಿತಿ ಇರುತ್ತದೆ. ನಿಧಾನವಾದರೂ ನಿಮ್ಮ ಮನೋಕಾಮನೆಗಳು ಪೂರ್ಣಗೊಳ್ಳುವವು. ದೇವರಲ್ಲಿ ವಿಶ್ವಾಸವಿಡಿ. ಆತನು ನಿಮಗೆ ಸೂಕ್ತ ಮಾರ್ಗದರ್ಶನ ನೀಡುವನು.

ಅವಸರ ಅವಘಡಕ್ಕೆ ಮೂಲ ಎನ್ನುವಂತೆ ನೀವು ಮಾಡುವ ಕೆಲಸ ಕಾರ್ಯದಲ್ಲಿ ಅವಸರ ಬೇಡ. ತಾಳ್ಮೆಯಿಂದ ವ್ಯವಹರಿಸಿ. ಸಂಗಾತಿ ಸಲಹೆ ಸ್ವೀಕರಿಸಿ. ಮುದ್ದು ಮಗುವಿನ ಮಾತು ನಿಮಗೆ ಖುಷಿ ನೀಡುವುದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top