fbpx

ರೆಬೆಲ್ ಸ್ಟಾರ್ ಅಂಬರೀಷ್ ಸಹೋದರ ವಿಧಿವಶ!

ನಟ ರೆಬೆಲ್ ಸ್ಟಾರ್ ಅಂಬರೀಶ್ ಅವರ ಸೋದರ ಎಂ ಎಚ್​ ಆನಂದ್ ಕುಮಾರ್​(76) ಅವರು ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಆನಂದ್ ಕುಮಾರ್ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಆನಂದ್ ಕುಮಾರ್ ಅವರು ಮೈಸೂರಿನಲ್ಲಿ ವಾಸವಾಗಿದ್ದರು ಎನ್ನಲಾಗಿದೆ. ಇಂದು ಅವರಿಗೆ ಹೃದಯಾಘಾತವಾಗಿದ್ದು, ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾರೆ.

ಆನಂದ್ ಕುಮಾರ್ ಅವರು ಪತ್ನಿ ಮತ್ತು ಮೂವರು ಮಕ್ಕಳನ್ನು ಅಗಲಿದ್ದಾರೆ. ಓರ್ವ ಮಗ ಅಮೇರಿಕಾದಲ್ಲಿ ನೆಲೆಸಿರುವುದರಿಂದ ಅಂತ್ಯಕ್ರಿಯೆ ಸೋಮವಾರ ಮೈಸೂರಿನಲ್ಲಿ ನಡೆಯಲಿದೆ.

ಮೂವರು ಸಹೋದರರು ವರ್ಷಕೊಬ್ಬರಂತೆ ಸಾವನ್ನಪ್ಪಿದ್ದಂತಾಗಿದೆ. ಅಂಬರೀಶ್ ಅವರ ಅಣ್ಣ ಡಾ. ಹರೀಶ್ (69) 2017 ನವೆಂಬರ್ 24ರಂದು ಸಾವನ್ನಪ್ಪಿದ್ದರು. ಸಹೋದರನನ್ನು ಕಳೆದುಕೊಂಡ ಸರಿಯಾಗಿ ಒಂದು ವರ್ಷದ ಬಳಿಕ ಅದೇ ದಿನಾಂಕದಂದು ಅಂಬರೀಶ್ ಕೂಡ ಕೊನೆಯುಸಿರೆಳೆದಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

To Top