fbpx

ಕರ್ನಾಟಕ 15 ಕ್ಷೇತ್ರದ ಉಪಚುನಾವಣೆಗೆ ದಿನಾಂಕ ಘೋಷಣೆ: ಅನರ್ಹರಿಗೆ ಶುರುವಾಯ್ತು ಟೆನ್ಶನ್!

ಕರ್ನಾಟಕದ 15 ಅನರ್ಹ ಶಾಸಕರ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗೆ ದಿನಾಂಕ ಘೋಷಣೆಯಾಗಿದೆ. ಅಕ್ಟೋಬರ್​ 21ರಂದು ಚುನಾವಣೆಗೆ ದಿನಾಂಕ ಫಿಕ್ಸ್​ ಆಗಿದೆ. ಅಕ್ಟೋಬರ್ 24 ರಂದು ಫಲಿತಾಂಶ ಪ್ರಕಟವಾಗಲಿದೆ.

17 ಕ್ಷೇತ್ರಗಳ ಪೈಕಿ 15 ಕ್ಷೇತ್ರಗಳಿಗೆ ಚುನಾವಣೆ ಘೋಷಣೆಯಾಗಿದ್ದು ಮುನಿರತ್ನ ಅವರ ಕ್ಷೇತ್ರವಾಗಿರುವ ರಾಜರಾಜೇಶ್ವರಿ ನಗರ ಮತ್ತು ಪ್ರತಾಪ್ ಗೌಡ ಪಾಟೀಲ್ ಅವರ ಮಸ್ಕಿ ಕ್ಷೇತ್ರಗಳಿಗೆ ಉಪಚುನಾವಣೆ ಇಲ್ಲ. ಸಂಬಂಧಿತ ಕ್ಷೇತ್ರಗಳಲ್ಲಿ ಇಂದಿನಿಂದಲೇ ಚುನಾವಣಾ ನೀತಿ ಸಂಹಿತಿ ಜಾರಿಗೆ ಬರಲಿದೆ.

ಮಹತ್ವದ ದಿನಾಂಕಗಳು:
1. ನಾಮಪತ್ರ ಸಲ್ಲಿಕೆ ಅಧಿಸೂಚನೆ – ಸೆಪ್ಟೆಂಬರ್ 23
2. ನಾಮಪತ್ರ ಸಲ್ಲಿಕೆ ಅಂತ್ಯ – ಸೆಪ್ಟೆಂಬರ್ 30
3. ನಾಮಪತ್ರ ಪರಿಶೀಲನೆ – ಅಕ್ಟೋಬರ್ 1
4. ನಾಮಪತ್ರ ವಾಪಸ್: ಅಕ್ಟೋಬರ್.3
5. ಮತದಾನ ಅಕ್ಟೋಬರ್ 21
6. ಫಲಿತಾಂಶ ಅಕ್ಟೋಬರ್ 24

ಉಪ ಚುನಾವಣೆ ನಡೆಯಲಿರುವ ಕ್ಷೇತ್ರಗಳು:
1)ಗೋಕಾಕ್, 2)ಅಥಣಿ, 3)ಕಾಗವಾಡ, 4)ಹಿರೆಕೆರೂರು, 5)ಯಲ್ಲಾಪುರ, 6)ಯಶವಂತಪುರ್, 7)ವಿಜಯನಗರ, 8)ಶಿವಾಜಿನಗರ, 9)ಹೊಸಕೋಟೆ, 10)ಹುಣಸೂರು, 11)ಕೆಆರ್ ಪೇಟೆ, 12)ಮಹಾಲಕ್ಷ್ಮಿ ಲೇಔಟ್, 13)ಕೆಆರ್ ಪುರ, 14)ರಾಣೇಬೆನ್ನೂರು, 15)ಚಿಕ್ಕಬಳ್ಳಾಪುರ

ಅನರ್ಹರಿಗೆ ಟೆನ್ಷನ್:
ಅಕ್ಟೋಬರ್ 4 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದು, ಅನರ್ಹರಲ್ಲಿ ಈಗ ನಡುಕ ಶುರುವಾಗಿದೆ. ಸೋಮವಾರ ಅನರ್ಹ ಶಾಸಕರ ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಗೆ ಬರಲಿದ್ದು, ಚುನಾವಣೆ ಘೋಷಣೆಯಾದ ಹಿನ್ನೆಲೆಯಲ್ಲಿ ಈ ವಿಚಾರಣೆ ಬಹಳ ಮಹತ್ವ ಪಡೆದಿದೆ. ಸೋಮವಾರ ಪ್ರಕರಣ ಇತ್ಯರ್ಥವಾಗಿ ಅನರ್ಹರ ಪರ ತೀರ್ಪು ಬಂದರೆ ಅವರು ನಿರಾಳರಾಗಬಹುದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

To Top