fbpx

ಅಮೆರಿಕಾದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮೊಕದ್ದಮೆ ದಾಖಲು!

ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮೆರಿಕದ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಭಾಗವಹಿಸಲಿರುವ ಹೌಡಿ ಮೋದಿ ಕಾರ್ಯಕ್ರಮದ ಬಗ್ಗೆ ಇಡೀ ವಿಶ್ವವೇ ಕುತೂಹಲದಿಂದ ನೋಡುತ್ತಿದೆ. ಅಮೆರಿಕದಲ್ಲಿ ನೆಲೆಸಿರುವ ಭಾರತೀಯ ಮೂಲದವರೆಲ್ಲರ ಬಹುನಿರೀಕ್ಷೆಯ ಹೌಡಿ ಮೋದಿ ಕಾರ್ಯಕ್ರಮಕ್ಕಾಗಿ ಹೌಸ್ಟನ್​ನ ಎನ್​ಆರ್​ಜಿ ಸ್ಟೇಡಿಯಂನಲ್ಲಿ ಸಿದ್ಧತೆಗಳು ಭರದಿಂದ ಸಾಗಿವೆ.

ಈ ನಡುವೆ ಪ್ರಧಾನಮಂತ್ರಿ ನರೇಂದ್ರ ವಿರುದ್ಧ ಇಬ್ಬರು ಕಾಶ್ಮೀರ ಕಾರ್ಯಕರ್ತರು ಅಮೆರಿಕಾದ ಹೌಸ್ಟನ್ ನಲ್ಲಿ ಮೊಕದ್ದಮೆ ಹೂಡಿದ್ದಾರೆ. ಕಾಶ್ಮೀರಿಗಳ ಹಕ್ಕನ್ನು ಪ್ರಧಾನಿ ನರೇಂದ್ರ ಮೋದಿ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ಅಮೆರಿಕಾದಲ್ಲಿ ನೆಲೆಸಿರುವ ಇಬ್ಬರು ಕಾಶ್ಮೀರ ಕಾರ್ಯಕರ್ತರು ಅಮೆರಿಕಾದ ಹೌಸ್ಟನ್ ನಲ್ಲಿ ನರೇಂದ್ರ ಮೋದಿ ವಿರುದ್ಧ ಮೊಕದ್ದಮೆ ಹೂಡಿದ್ದಾರೆ.

ಹೌಸ್ಟನ್ ಕ್ರೋನಿಕಲ್ ನಲ್ಲಿ ಬಂದ ವರದಿ ಪ್ರಕಾರ, 73 ಪುಟಗಳ ಮೊಕದ್ದಮೆಯನ್ನು ಅಮೆರಿಕಾದಲ್ಲಿ ನೆಲೆಸಿರುವ ಕಾಶ್ಮೀರಿ ಕಾರ್ಯಕರ್ತರು ಮತ್ತು ಖಲಿಸ್ತಾನ್ ರೆಫೆರೆಂಡಮ್ ಫ್ರಂಟ್ ದಾಖಲಿಸಿದ್ದು ಅದರಲ್ಲಿ ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ತೆಗೆದುಹಾಕುವ ಮೂಲಕ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ, ಭಾರತೀಯ ಸೇನೆಯ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಕನ್ವಾಲ್ ಜೀತ್ ಸಿಂಗ್ ದಿಲ್ಲೊನ್ ಕಾಶ್ಮೀರಿಗಳ ಮೇಲೆ ಕ್ರೂರ, ಅಮಾನವೀಯ ವರ್ತನೆ ತೋರಿಸಿದ್ದಾರೆ, ಜಮ್ಮು-ಕಾಶ್ಮೀರದಲ್ಲಿ ಕಾನೂನುಬಾಹಿರ ಹತ್ಯೆ, ಸಂಘರ್ಷಗಳಿಗೂ ಕಾರಣರಾಗಿದ್ದಾರೆ ಎಂದು ಆರೋಪಿಸಿದ್ದಾರೆ.

1991ರ ಅಮಾಯಕರ ಹಿಂಸೆ ಸುರಕ್ಷತಾ ಕಾಯಿದೆಯಡಿ ಸಿವಿಲ್ ದೂರನ್ನು ದಾಖಲಿಸಲಾಗಿದ್ದು, ಹತ್ಯೆ, ಹಿಂಸೆ, ಅಮಾನವೀಯ ವರ್ತನೆ ಆರೋಪದ ಮೇಲೆ ವಿದೇಶಿ ಅಧಿಕಾರಿಗಳು ಮತ್ತು ರಾಜಕೀಯ ನಾಯಕರ ವಿರುದ್ಧ ಅಮೆರಿಕಾದಲ್ಲಿ ಸಲ್ಲಿಸುವ ಮೊಕದ್ದಮೆ ಇದಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

To Top