fbpx

ಬರೋಬ್ಬರಿ 1 ಕೋಟಿ ಗೆದ್ದ ಸರ್ಕಾರಿ ಶಾಲೆ ಬಿಸಿಯೂಟ ತಯಾರಕಿ!

ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟ ತಯಾರಿಸಿಕೊಡುವ ಬಡ ಮಹಿಳೆಯೊಬ್ಬರು ಇದೀಗ ಹಿಂದಿಯ ಜನಪ್ರಿಯ ಕಾರ್ಯಕ್ರಮ ಕೌನ್ ಬನೇಗಾ ಕರೋಡಪತಿ ಕಾರ್ಯಕ್ರಮದಲ್ಲಿ ಬರೋಬ್ಬರಿ 1 ಕೋಟಿ ರು. ಬಹುಮಾನ ಗೆಲ್ಲುವ ಮೂಲಕ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ. ಬಿಗ್ ಬಿ ಅಮಿತಾಬ್ ಬಚ್ಚನ್ ನಡೆಸಿಕೊಡುವ ಕೌನ್ ಬನೇಗಾ ಕರೋಡ್‍ಪತಿ 11ನೇ ಆವೃತ್ತಿಯ ಕಾರ್ಯಕ್ರಮದಲ್ಲಿ ಮಹಾರಾಷ್ಟ್ರದ ಬಬಿತಾ ತಾಡೆ ಅವರು 1 ಕೋಟಿ ಗೆದ್ದು ಕೋಟ್ಯಧಿಪತಿಯಾಗಿದ್ದಾರೆ.

 

 

ಕಷ್ಟನಷ್ಟಗಳ ನಡುವೆಯೇ ಅಪಾರ ಜ್ಞಾನಗಳಿಸಿರುವ ಬಬಿತಾ 15 ಪ್ರಶ್ನೆಗಳಿಗ ಉತ್ತರ ನೀಡುವ ಭರ್ಜರಿ 1 ಕೋಟಿ ಗೆದ್ದುಕೊಂಡಿದ್ದಾರೆ. ಈ ಕಾರ್ಯಕ್ರಮದ ಈ ವಾರ ಬುಧವಾರ ಹಾಗೂ ಗುರುವಾರ ರಾತ್ರಿ 9 ಗಂಟೆಗೆ ಪ್ರಸಾರವಾಗಲಿದೆ. ಒಟ್ಟು ಹದಿನೈದು ಪ್ರಶ್ನೆಗಳಿಗೆ ಉತ್ತರಿಸಿರುವ ಬಬಿತಾ ಕೈಗೆ ₹ 1 ಕೋಟಿ ಚೆಕ್ ಸಿಕ್ಕಿದೆ. ಇನ್ನು ಒಂದೇ ಒಂದು ಪ್ರಶ್ನೆಗೆ ಉತ್ತರಿಸಿದ್ದರೆ ₹ 7 ಕೋಟಿ ಬಹುಮಾನ ಸಿಗುತ್ತಿತ್ತು. ಆದರೆ 7 ಕೋಟಿ ಪ್ರಶ್ನೆಗೆ ಉತ್ತರ ಗೊತ್ತಿಲ್ಲದ ಕಾರಣ ಆಟವನ್ನು ನಿಲ್ಲಿಸಿದರು

ಈ ಶೋನಲ್ಲಿ ಸಾಕಷ್ಟು ಹಣ ಸಿಕ್ಕಿದರೆ ಏನು ಮಾಡ್ತೀರಿ ಎಂದು ಬಬಿತಾರನ್ನು ಅಮಿತಾಬ್ ಕೇಳಿದ್ದಕ್ಕೆ, “ಮೊದಲು ಫೋನ್ ಒಂದನ್ನು ತೆಗೆದುಕೊಳ್ಳಬೇಕೆಂದಿದ್ದೇನೆ. ಯಾಕೆಂದರೆ ನಮ್ಮ ಮನೆಯಲ್ಲಿ ಇರೋದು ಒಂದೇ ಫೋನು. ಎಲ್ಲರೂ ಅದನ್ನೇ ಬಳಸುತ್ತಿದ್ದಾರೆ” ಎಂದಿದ್ದಾರೆ. ಈ ಉತ್ತರ ಕೇಳಿ ಸ್ವತಃ ಅಮಿತಾಭ್ ಶಾಕ್ ಆದರು. ಯಾಕೆಂದರೆ ಬಹಳಷ್ಟು ಮಂದಿ ಮನೆ ಕಟ್ಟಬೇಕು, ಅಪಾರ್ಟ್‍ಮೆಂಟ್ ತಗೋಬೇಕು, ಮದುವೆ ಮಾಡಬೇಕು ಎಂದು ಹೇಳಿದರೆ ಇವರು ಫೋನ್ ತಗೊಳ್ತೀನಿ ಎಂದು ಹೇಳಿದ್ದು ಅಚ್ಚರಿ ಮೂಡಿಸಿತ್ತು. ಕಡೆಗೆ ಅವರೇ ಒಂದು ಫೋನನ್ನು ಉಡುಗೊರೆಯಾಗಿ ನೀಡಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

To Top