fbpx

ಕಿಚ್ಚನ ‘ಕಡಗ, ಬಳೆ’ ಟ್ವೀಟ್ ಗೆ ನೆಟ್ಟಿಗರ ವಿರೋಧ!

ನಾನು ಹಾಗೂ ನನ್ನ ಸ್ನೇಹಿತರು ಕೈಗೆ ಹಾಕಿರುವುದು ಕಡಗ ಬಳೆ ಅಲ್ಲ ಎಂದು ಸುದೀಪ್​ ಟ್ವೀಟ್ ಮಾಡಿದ್ದರು. ಈ ಟ್ವೀಟ್ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗುತ್ತಿದೆ. ಸುದೀಪ್ ಟ್ವೀಟ್ ಗೆ ಹಲವರು ವಿರೋಧ ವ್ಯಕ್ತಪಡಿಸಿದ್ದಾರೆ.

 

 

ಪೈಲ್ವಾನ್ ಚಿತ್ರದ ಪೈರಸಿ ವಿಚಾರವಾಗಿ ಟ್ವೀಟ್ ಮಾಡಿದ್ದ ಸುದೀಪ್ ಅವರು ‘ನಾನು ಹಾಗೂ ನನ್ನ ಸ್ನೇಹಿತರು, ಕೈಗೆ ಹಾಕಿರುವುದು ಕಡಗ, ಬಳೆ ಅಲ್ಲ. ನನಗೆ ನನ್ನ ಸಿನಿಮಾ ಬಿಟ್ಟರೆ ಬೇರೆನುಗೊತಿಲ್ಲ. ನನ್ನ ಮೌನ, ನನ್ನ ತಾಳ್ಮೆ, ಎರಡನ್ನು ಪರೀಕ್ಷಿಸಿದ್ದಾರೆ. ಸಂಪೂರ್ಣ ಪೈಲ್ವಾನ್ ತಂಡದ ಶ್ರಮವನ್ನು ಹಾಳುಮಾಡಲು ತಮ್ಮ ಶಕ್ತಿಯನ್ನು ಹಾಕಿದ್ದಾರೆ. ಇದರ ಹಿಂದಿರುವ ವ್ಯಕ್ತಿಗಳ ನೆಮ್ಮದಿಯ ನಿದ್ರೆ,ಇನ್ನು ಕೆಲವು ದಿನಗಳು ಮಾತ್ರ,’ ಎಂದು ಬರೆದುಕೊಂಡಿದ್ದರು.

 


ಈ ಟ್ವೀಟ್ ವಿರುದ್ಧ ನೆಟ್ಟಿಗರು ವಿರುದ್ಧ ವ್ಯಕ್ತಪಡಿಸಿದ್ದು ಕಿಚ್ಚನಿಗೆ ಬುದ್ದಿಮಾತು ಹೇಳಿದ್ದಾರೆ. ‘ಬಳೆ, ಕಡಗ’ ಪದ ಬಳಸುವುದು ಮಹಿಳೆಗೆ ಅಗೌರವ ತೋರಿದಂತೆ, ಮಹಿಳೆಯನ್ನ ಅಶಕ್ತಗಳು ಎಂದು ಬಿಂಬಿಸಿದಂತೆ ಎಂದು ಕಿಡಿಕಾರುತ್ತಿದ್ದಾರೆ. ಈ ಬಗ್ಗೆ ಹಲವು ಮಹಿಳೆಯರು ವಿರೋಧ ವ್ಯಕ್ತಪಡಿಸಿದ್ದಾರೆ. ಬಳೆ ತೊಟ್ಟವರು ಶಕ್ತಿ ಇಲ್ಲದವರು, ಕಡಗ ತೊಟ್ಟವರು ಮಾತ್ರ ಸಬಲರು ಎನ್ನುವ ಅರ್ಥವನ್ನು ಟ್ವೀಟ್​ ನೀಡುತ್ತಿದೆ ಎಂದು ಆರೋಪಿಸಿ ಸುದೀಪ್​ ವಿರುದ್ಧ ಮಹಿಳೆಯರು ಕೆಂಡಾಮಂಡಲವಾಗಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

To Top