ರೈಲಿನ ಮೂಲಕ ಬರುವ ಪಾರ್ಸೆಲ್ ಗಳು ಅತ್ಯಂತ ಸುರಕ್ಷಿತವಾಗಿ ನಮ್ಮ ಕೈ ಸೇರುತ್ತದೆ ಎಂದು ನಾವು ಅಂದುಕೊಂಡಿದ್ದೆವು. ಆದರೆ ಅವುಗಳು ಯಾವ ರೀತಿ ಅಸುರಕ್ಷತೆಯಿಂದ ಕೂಡಿರುತ್ತದೆ ಎಂಬುದು ನಮಗೆ ತಿಳಿದಿರಲ್ಲ. ಇದೀಗ ರೈಲಿನಲ್ಲಿ ಬಂದ ಪಾರ್ಸೆಲ್‍ಗಳನ್ನು ಸಿಬ್ಬಂದಿ ಬಿಸಾಡುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗುತ್ತಿದೆ.
ಈ ಘಟನೆ ನಡೆದಿರುವುದು ಗುವಾಹಟಿ ರೈಲ್ವೆ ನಿಲ್ದಾಣದಲ್ಲಿ. ರೈಲಿನಲ್ಲಿ ಬಂದ ಪಾರ್ಸೆಲ್ ಗಳನ್ನು ಕೆಳಗಿಳಿಸುವಾಗ ಅಲ್ಲಿದ್ದ ಕೆಲಸದವರು ಬೇಜವಾಬ್ದಾರಿಯನ್ನು ತೋರಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗುತ್ತಿದ್ದು, ನೆಟ್ಟಿಗರು ಇದರ ವಿರುದ್ಧ ತಮ್ಮ ಆಕ್ರೋಶವನ್ನು ಹೊರಹಾಕುತ್ತಿದ್ದಾರೆ.
ಈ ಘಟನೆ ನಡೆದಿರುವುದು ಮಾರ್ಚ್ 22 ರಂದು. ಟ್ವಿಟ್ಟರ್ ನಲ್ಲಿ ವೈರಲ್ ಆಗುತ್ತಿರುವ ವಿಡಿಯೋ ದಲ್ಲಿ ” ರೈಲಿನಲ್ಲಿ ಬರುವ ನಿಮ್ಮ ಪಾರ್ಸೆಲ್‍ಗಳನ್ನು ಎಷ್ಟು ಚೆನ್ನಾಗಿ ಪರಿಗಣಿಸುತ್ತಾರೆ ಎಂಬುವುದನ್ನು ನೋಡಿ. ಇದು ನವದೆಹಲಿ ದಿಬ್ರುಗಢ ರಾಜಧಾನಿ ಎಕ್ಸ್‍ಪ್ರೆಸ್ (12424) ರೈಲು. ರೈಲಿನಿಂದ ಬಂದ ಅಮೆಜಾನ್, ಫ್ಲಿಪ್‍ಕಾರ್ಟ್ ಮುಂತಾದ ಎಲ್ಲಾ ಚಿಲ್ಲರೆ ವ್ಯಾಪಾರಿಗಳಿಂದ ಬಂದಿರುವ ಪಾರ್ಸೆಲ್ ಗಳ್ಳನ್ನು ಅಲ್ಲಿನ ಸಿಬ್ಬಂದಿ ಯಾವ ರೀತಿ ಬಿಸಾಡುತ್ತಿದ್ದಾರೆ ನೋಡಿ “ಎಂದು ಬರೆದಿದ್ದಾರೆ.
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಸ್ಪಷ್ಟನೆ ನೀಡಿರುವ ಈಶಾನ್ಯ ಫ್ರಾಂಟಿಯರ್ ರೈಲ್ವೆ “ಇದೊಂದು ಹಳೆಯ ವೀಡಿಯೋ. ಪಾರ್ಸೆಲ್‍ಗಳನ್ನು ಕೆಳಗಿಳಿಸುತ್ತಿರುವವರು ರೈಲ್ವೆ ಉದ್ಯೋಗಿಗಳಲ್ಲ ಗುವಾಹಟಿ ನಿಲ್ದಾಣದಲ್ಲಿ ರಾಜಧಾನಿ ಎಕ್ಸ್‍ಪ್ರೆಸ್‍ನಲ್ಲಿ ಬಂದ ಪಾರ್ಸೆಲ್‍ಗಳನ್ನು ಕೆಳಗಿಳಿಸುತ್ತಿರುವ ವ್ಯಕ್ತಿಗಳು ವಸ್ತುಗಳಿಗೆ ಸಂಬಂಧಪಟ್ಟವರಾಗಿದ್ದಾರೆ. ರೈಲ್ವೆಯು ವಿವಿಧ ಪಾರ್ಟಿಗಳಿಗೆ ಗುತ್ತಿಗೆ ಆಧಾರದ ಮೇಲೆ ಪಾರ್ಸೆಲ್ ಜಾಗವನ್ನು ಬುಕ್ಕಿಂಗ್ ನೀಡುತ್ತದೆ ” ಎಂದು ಟ್ವೀಟ್ ಮಾಡಿದೆ.