fbpx

“ರಾಷ್ಟ್ರಪತಿಗಳಿಂದ ತುಘಲಕ್ ದರ್ಬಾರ್”: ಶಾಸಕ ರೇಣುಕಾಚಾರ್ಯ ಎಡವಟ್ಟು ಹೇಳಿಕೆ!

ಉಪಚುನಾವಣೆ ಘೋಷಣೆಯಾದ ಬೆನ್ನಲ್ಲೇ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಅವರು ಮಾತನಾಡುವ ಭರದಲ್ಲಿ ಎಡವಟ್ಟು ಹೇಳಿಕೆ ನೀಡಿದ್ದಾರೆ. ಮಾಜಿ ಸ್ಪೀಕರ್ ರಮೇಶ್ ಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದ ಶಾಸಕ ಎಂ.ಪಿ.ರೇಣುಕಾಚಾರ್ಯ ಅವರು, ರಾಷ್ಟ್ರಪತಿಗಳು ತುಘಲಕ್ ದರ್ಬಾರ್ ನಡೆಸಿದರು ಎಂದು ಎಡವಟ್ಟು ಮಾಡಿಕೊಂಡಿದ್ದಾರೆ.

ರೆಬಲ್​ ಶಾಸಕರನ್ನು ಅನರ್ಹಗೊಳಿಸಿದ ಸ್ಪೀಕರ್​ ರಮೇಶ್​ ಕುಮಾರ್​ ಅವರ ವಿರುದ್ಧ ಕಿಡಿಕಾರಿದ ರೇಣುಕಾಚಾರ್ಯ, ರಾಷ್ಟ್ರಪತಿಗಳು ತುಘಲಕ್​ ಆಡಳಿತ ನಡೆಸುತ್ತಿದ್ದಾರೆ ಎಂದು ಹೇಳಿದರು. ಕೂಡಲೇ ತಮ್ಮ ತಪ್ಪಿನ ಅರಿವಾಗಿ ಸಭಾಧ್ಯಕ್ಷರು.. ” ಎಂದು ಸರಿಯಾಗಿ ಹೇಳಿದರು. ಇದೆ ವೇಳೆ “15 ಕ್ಷೇತ್ರಕ್ಕೆ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಪಕ್ಷ ತೀರ್ಮಾನ ಮಾಡಲಿದೆ. 15 ಕ್ಕೆ 15 ಬಿಜೆಪಿ ಗೆಲ್ಲುತ್ತೆ ವಿಶ್ವಾಸವಿದೆ. ಜನರು ಸಹ ನಮಗೆ ಆಶೀರ್ವಾದ ಮಾಡುತ್ತಾರೆ” ಎಂದು ಅವರು ಹೇಳಿದರು.

ನಗರದಲ್ಲಿ ಮಾತನಾಡಿದ ಅವರು, ತಮ್ಮ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕೆಲಸ ನಡೆಯುತ್ತಿಲ್ಲ ಅಂತ ಅಸಮಾಧಾನದಿಂದ ಕಾಂಗ್ರೆಸ್ ಹಾಗೂ ಜೆಡಿಎಸ್‍ನ 17 ಜನ ಶಾಸಕರು ರಾಜೀನಾಮೆ ನೀಡಿದರು. ಸುಪ್ರೀಂಕೋರ್ಟ್ ಇದನ್ನು ಎತ್ತಿ ಹಿಡಿದಿದೆ. ಆದರೆ ರಾಜೀನಾಮೆಯನ್ನು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅಂಗೀಕರಿಸದೆ ಕಾಂಗ್ರೆಸ್ ಏಜೆಂಟ್‍ರಂತೆ ವರ್ತಿಸಿ ಶಾಸಕರನ್ನು ಅನರ್ಹಗೊಳಿಸಿದರು. ಆದರೆ ನಾನು ಮಾತ್ರ ಅವರನ್ನು ಅನರ್ಹರು ಅಂತ ಕರೆಯುವುದಿಲ್ಲ. ಎಂದು ಹೇಳಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

To Top