fbpx

ಪ್ರತಿಷ್ಠಿತ ದಾದಾಸಾಹೇಬ್​ ಫಾಲ್ಕೆ ಪ್ರಶಸ್ತಿ ಸ್ವೀಕರಿಸಿದ ರಾಕಿಂಗ್​ ಸ್ಟಾರ್ ಯಶ್!

ದಾದಾ ಸಾಹೇಬ್ ಫಾಲ್ಕೆ ಸೌತ್ ಫಿಲ್ಮ್ ಅವಾರ್ಡ್ಸ್ 2019- ಕಾರ್ಯಕ್ರಮ ಹೈದರಾಬಾದ್ ನಲ್ಲಿ ಅದ್ದೂರಿಯಾಗಿ ನಡೀತು. ಕೆಜಿಎಫ್‌ ಚಿತ್ರದ ನಟನೆಗಾಗಿ ನಟ ರಾಕಿಂಗ್ ಸ್ಟಾರ್ ಯಶ್‌ಗೆ ಔಟ್ ಸ್ಟ್ಯಾಂಡಿಂಗ್ ಪರ್ಫಾರ್ಮೆರ್ ಪ್ರಶಸ್ತಿ ಲಭಿಸಿದೆ. ಹೌದು, ಔಟ್​ ಸ್ಟ್ಯಾಂಡಿಂಗ್​ ಪರ್ಫಾಮೆನ್ಸ್​ ಆಫ್​ ದಿ ಇಯರ್​ ಕ್ಯಾಟಗರಿಯಲ್ಲಿ ರಾಕಿಂಗ್​ ಸ್ಟಾರ್ ಯಶ್​ “ದಾದಾ ಸಾಹೇಬ್ ಫಾಲ್ಕೆ ‌ಸೌತ್ 2019’’ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.

ಇನ್ನು ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಿದ ನಂತರ ಕನ್ನಡದಲ್ಲಿ ಮಾತು ಶುರು ಮಾಡಿದ ಯಶ್, ಕನ್ನಡ ಮತ್ತು ತೆಲುಗಿನಲ್ಲಿ ‘ಕೆಜಿಎಫ್’ ಸಿನಿಮಾ ಡೈಲಾಗ್ ಹೇಳಿ, ಕಾರ್ಯಕ್ರಮಕ್ಕೆ ಬಂದಿರುವ ಅಭಿಮಾನಿಗಳನ್ನು ರಂಜಿಸಿದರು. ‘ಕೆಜಿಎಫ್’ ಸಿನಿಮಾವನ್ನು ತೆಲುಗು ಜನ ದೊಡ್ಡ ಮಟ್ಟದಲ್ಲಿ ಸ್ವೀಕರ ಮಾಡಿದ್ದಾರೆ ಎಂದು ಧನ್ಯವಾದ ತಿಳಿಸಿದರು.

ಇನ್ನು ಇದೇ ವೇಳೆ ಕೆಜಿಎಫ್-2 ಬಿಡುಗಡೆ ಬಗ್ಗೆಯೂ ಮಾಹಿತಿ ಬಿಟ್ಟುಕೊಟ್ಟ ಯಶ್, 2020ರ ಏಪ್ರಿಲ್ ಅಥವಾ ಮೇನಲ್ಲಿ ಕೆಜಿಎಫ್-2 ಬಿಡುಗಡೆ ಸಾಧ್ಯತೆ ಇದೆ ಎಂದು ಹೇಳಿದರು. ಉಳಿದಂತೆ ಜೀವಮಾನ ಶ್ರೇಷ್ಠ ಸಾಧನೆಗಾಗಿ ತೆಲುಗು ನಟ ಮೋಹನ್‌ ಬಾಬುಗೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಹಾಗೂ ತೆಲುಗು ನಟಿ ಕೀರ್ತಿ ಸುರೇಶ್ (ಮಹಾ ನಟಿ) ಸಿನಿಮಾದ ಅಧ್ಭುತ ನಟನೆಗಾಗಿ ಈ ವಿಶೇಷ ಪ್ರಶಸ್ತಿಗಳನ್ನು ನೀಡಲಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

To Top