fbpx

ಕೊಹ್ಲಿ ಅಭಿಮಾನಿಗಳಿಗೆ ಬಿಗ್ ಶಾಕ್: T20 ಕ್ರಿಕೆಟ್​ಗೆ ವಿದಾಯ ಹೇಳ್ತಾರಾ ವಿರಾಟ್​?

ಭಾರತ ಕ್ರಿಕೆಟ್ ತಂಡದ ಶ್ರೇಷ್ಠ ಆಟಗಾರ ಎಂದರೆ ಅದು ವಿರಾಟ್ ಕೊಹ್ಲಿ. ಆದರೆ ಕಳೆದ ಕೆಲವು ವರ್ಷಗಳಿಂದ ರನ್ ಮೆಷಿನ್ ಎಂದೇ ಪ್ರಖ್ಯಾತಿಗಳಿಸಿರುವ ವಿರಾಟ್ ಅವರ ಬ್ಯಾಟ್ ಇಂದ ರನ್ ಬರುತ್ತಲೇ ಇಲ್ಲ. ಇದಲ್ಲದೆ ಇದೀಗ ಟೀಮ್ ಇಂಡಿಯಾ ಸುತ್ತ ಒಂದು ವಿಷಯ ಹರಿದಾಡುತ್ತಿದೆ. ಇದು ವಿರಾಟ್ ಅಭಿಮಾನಿಗಳಲ್ಲಿ ಆತಂಕ ಸೃಷ್ಟಿಸಿದೆ.

ಕಳೆದ ಕೆಲವು ವರ್ಷಗಳಿಂದ ವಿರಾಟ್ ಕಳಪೆ ಪ್ರದರ್ಶನ ತೋರುತ್ತಿದ್ದಾರೆ. ಇತ್ತೀಚಿಗೆ ನಡೆದ ಏಷ್ಯಾ ಕಪ್ ನಲ್ಲಿ ಹಾಂಗ್​ಕಾಂಗ್​ ತಂಡದ ವಿರುದ್ಧ ಅರ್ಧಶತಕ ಸಿಡಿಸಿದ್ದಾರೆ. ಅದು ಬರೋಬ್ಬರಿ 6 ತಿಂಗಳ ನಂತರ. ಹೀಗಾಗಿ ಸಹಜವಾಗಿ ಇವರ ಫಾರ್ಮ್ ಬಗ್ಗೆ ಚರ್ಚೆಗಳು ಮತ್ತು ಅನುಮಾನ ಹುಟ್ಟಿಕೊಂಡಿದೆ.

ಇತ್ತೀಚಿಗೆ ಕೊಹ್ಲಿ ಫಾರ್ಮ್​ ಬಗ್ಗೆ ಅನೇಕ ಕ್ರಿಕೆಟಿಗರು ಮಾತನಾಡುತ್ತಿದ್ದರು. ಮೊದಲಿಗೆ ವಿರಾಟ್ ಗೆ ವಿಶ್ರಾಂತಿಯ ಅವಶ್ಯಕತೆ ಇದೆ ಎಂದು ಹೇಳಿ ಇವರು ಕೆಲವು ತಿಂಗಳುಗಳ ಕಾಲ ವಿಶ್ರಾಂತಿ ತೆಗೆದುಕೊಂಡರು. ಇದಾಗಿಯೂ ಸಹ ಇವರು ಹೇಳಿಕೊಳ್ಳುವಂತಹ ಪ್ರದರ್ಶನ ತೋರುತ್ತಿಲ್ಲ. ಹೀಗಾಗಿ ಬಿಸಿಸಿಐ ಹಾಗೂ ಭಾರತೀಯ ಕ್ರಿಕೆಟ್ ಮಂಡಳಿಯ ಆಯ್ಕೆ ಸಮಿತಿ ಸಹ ಇದರ ಬಗ್ಗೆ ಚಿಂತಿಸುತ್ತಿದೆ ಎನ್ನಲಾಗುತ್ತಿದೆ.

ಹಲವು ಮೂಲಗಳ ಪ್ರಕಾರ ವಿರಾಟ್ ಕೊಹ್ಲಿ ಟಿ20 ಕ್ರಿಕೆಟ್‌ಗೆ ನಿವೃತ್ತಿ ಘೋಷಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಮುಂಬರುವ ವಿಶ್ವಕಪ್ ಬಳಿಕ ವಿರಾಟ್ ಟಿ20 ಕ್ರಿಕೆಟ್‌ಗೆ ನಿವೃತ್ತಿ ಘೋಷಿಸುವ ಸಾದ್ಯತೆಯಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.ಆದರೆ ಇದರ ಕುರಿತು ಅಧಿಕೃತ ಮಾಹಿತಿ ಬಂದಿಲ್ಲ. ಹೀಗಾಗಿ ಇದರ ಕುರಿತು ಸ್ವತಃ ವಿರಾಟ್ ತಿಳಿಸುತ್ತಾರಾ ಅಥವಾ ಬಿಸಿಸಿಐ ಈ ವಿಷಯವನ್ನು ತಿಳಿಸುತ್ತಾರಾ ಎಂದು ಕಾದು ನೋಡಬೇಕು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

To Top