fbpx

‘ಕೆಜಿಎಫ್ 2’ ಸಿನಿಮಾದಲ್ಲಿ ‘ಅಧೀರ’ ಪಾತ್ರದ ರಹಸ್ಯ ಬಿಚ್ಚಿಟ್ಟ ಸಂಜಯ್ ದತ್

2018ರಲ್ಲಿ ಬಿಡುಗಡೆಯಾಗಿದ್ದ ಕೆಜಿಎಫ್ ಚಾಪ್ಟರ್ 1 ಚಿತ್ರ ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಸಾರ್ವಕಾಲಿಕ ದಾಖಲೆ ಮಾಡಿತ್ತು. ಕೆಜಿಎಫ್-2 ಚಿತ್ರತಂಡ ಸರಳವಾಗಿ ಮುಹೂರ್ತ ಮಾಡಿಕೊಂಡು ಚಿತ್ರೀಕರಣವನ್ನು ಆರಂಭಿಸಿದೆ. ಈ ನಡುವೆ ಸೋಶಿಯಲ್ ಮೀಡಿಯಾದಲ್ಲಿ ಕೆಜಿಎಫ್-2 ಚಿತ್ರದ ಶೂಟಿಂಗ್ ಸೆಟ್ ಫೋಟೋಗಳು ಸದ್ದು ಮಾಡಿದ್ದವು. ಕೆಜಿಎಫ್ ನಿರೀಕ್ಷೆಗಳ ಪರ್ವತವನ್ನೇ ಹುಟ್ಟಿಸಿದ್ದು, ಚಿತ್ರಕ್ಕಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಇದೀಗ ಕೆಜಿಎಫ್ 2ಗಾಗಿ ದೇಶವೇ ಎದುರು ನೋಡುತ್ತಿದೆ.

ಈಗ ‘ಕೆಜಿಎಫ್​ 2’ ಸಿನಿಮಾ ಮೇಲೆ ಜನರು ಬೆಟ್ಟದಷ್ಟು ನಿರೀಕ್ಷೆ ಹೊಂದಿದ್ದಾರೆ. ಈ ನಿರೀಕ್ಷೆಯನ್ನು ಸಿನಿಮಾ ತಲುಪಲಿದೆ ಎಂದು ಸಿನಿಮಾದ ಖಳನಾಯಕ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಸಂಜಯ್​ ದತ್​ ಹೇಳಿದ್ದಾರೆ. ಈಗ ಆಂಗ್ಲ ಮಾಧ್ಯಮವೊಂದಕ್ಕೆ ಅವರು ಸಂದರ್ಶನ ನೀಡಿದ್ದು, ಈ ವೇಳೆ ‘ಕೆಜಿಎಫ್​ ಚಾಪ್ಟರ್​ 2’ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

“ಅಗ್ನಿಪತ್ ಚಿತ್ರದ ನಂತರ ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಂಡಿರಲಿಲ್ಲ. ಉತ್ತಮ ವಿಲನ್ ಪಾತ್ರಕ್ಕಾಗಿ ಕಾಯುತ್ತಿದ್ದೆ. ಈ ಸಮಯದಲ್ಲಿ ಕೆಜಿಎಫ್-2 ಸಿಕ್ಕಿತ್ತು. ಇದು ಪಕ್ಕ ಆಕ್ಷನ್ ಸಿನಿಮಾ. ‘ಕೆಜಿಎಫ್​ 2’ ಸಿನಿಮಾದಲ್ಲಿ ನನ್ನ ಪಾತ್ರದ ಬಗ್ಗೆ ಕೇಳಿದಾಗ ನಿಜಕ್ಕೂ ಖುಷಿ ಪಟ್ಟೆ. ಬಹಳ ಕಾಲದಿಂದ ಇಂಥ ಪಾತ್ರಕ್ಕಾಗಿ ಕಾಯುತ್ತಿದೆ. ಇದು ನನಗೆ ಸಿಕ್ಕ ಶ್ರೇಷ್ಠ ವಿಲನ್​ ಪಾತ್ರ,” ಎಂದು ಮೆಚ್ಚುಗೆಯ ಮಾತುಗಳನ್ನಾಡಿದರು ಸಂಜಯ್​ ದತ್​.

“ಅಗ್ನಿಪತ್ ಚಿತ್ರದಲ್ಲಿನ ಪಾತ್ರಕ್ಕಿಂತನೂ ಅಧೀರನ ಪಾತ್ರ ಮತ್ತಷ್ಟು ಭಯಾನಕವಾಗಿರಲಿದೆ ಎನಿಸುತ್ತೆ. ನಾನು ಕನ್ನಡ ಕಲಿಯಬೇಕಾದ ಅಗತ್ಯತೆ ಇದಿಯೋ ನನಗೆ ಗೊತ್ತಿಲ್ಲ. ಮೇಕರ್ಸ್ ನಿರ್ಧರಿಸಿದರೆ ನಾನು ಖಂಡಿತವಾಗಿಯೂ ಡೈಲಾಗ್ ಡಿಲವರಿ ಮಾಡಲು ಬಯಸುತ್ತೇನೆ” ಎಂದು ಹೇಳಿದ್ದಾರೆ.

ಪರ ಭಾಷಿಗರು ಕನ್ನಡಕ್ಕೆ ಬಂದಾಗ ಕಂಠದಾನಿಗಳಿಂದ ಡಬ್​ ಮಾಡಿಸುವುದು ವಾಡಿಕೆ. ಆದರೆ, ಸಂಜಯ್​ ದತ್​ಗೆ ಕನ್ನಡದಲ್ಲಿ ತಾವೇ ಡೈಲಾಗ್​ ಹೇಳಬೇಕೆನ್ನುವ ಆಸೆ ಇದೆಯಂತೆ. ಈ ವಿಚಾರವನ್ನು ಸ್ವತಃ ಅವರೇ ಹೇಳಿಕೊಂಡಿದ್ದಾರೆ. ಈ ಮೂಲಕ ಅವರೇ ಡಬ್​ ಮಾಡುವ ಸೂಚನೆ ನೀಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

To Top