fbpx

ಈ ಭಾರಿ ಬಿಗ್​ಬಾಸ್ ಶೋಗೆ ಹೋಗ್ತಾರಾ ಶಾರ್ಮಿಳಾ ಮಾಂಡ್ರೆ? ಸ್ಪಷ್ಟನೆ ನೀಡಿದ ನಟಿ

ಇಂಥಾ ಬಿಗ್ ಬಾಸ್ ಮನೆಗೆ ಈ ಭಾರಿ ಅವರು ಹೋಗ್ತಾರಂತೆ ಇವರು ಹೋಗ್ತಾರಂತೆ ಎಂಬಂತ ರೂಮರುಗಳು ಸಾಮಾಜಿಕ ಜಾಲತಾಣದಲ್ಲಿ ಸಿಕಾಪಟ್ಟೆ ಹರಿದಾಡುತ್ತಿದ್ದು ಅದರಲ್ಲಿ ಮಂಡ್ಯದ ಶಂಕರೇಗೌಡ ಅವರ ಹೆಸರು ಕೂಡ ಸೇರ್ಪಡೆಯಾಗಿದೆ..

ಇಂಥಾ ಬಿಗ್ ಬಾಸ್ ಮನೆಗೆ ಈ ಭಾರಿ ಅವರು ಹೋಗ್ತಾರಂತೆ ಇವರು ಹೋಗ್ತಾರಂತೆ ಎಂಬಂತ ರೂಮರುಗಳು ಸಾಮಾಜಿಕ ಜಾಲತಾಣದಲ್ಲಿ ಸಿಕಾಪಟ್ಟೆ ಹರಿದಾಡುತ್ತಿದ್ದು ಅದರಲ್ಲಿ ನಟಿ ಶರ್ಮಿಳಾ ಮಾಂಡ್ರೆ ಅವರ ಹೆಸರು ಕೂಡ ಸೇರ್ಪಡೆಯಾಗಿದೆ.. ಬಿಗ್ ಬಾಸ್ ಮನೆಗೆ ಹೋಗುವ ಸ್ಪರ್ದಿಗಳ ಸಾಲಿನಲ್ಲಿ ತಮ್ಮ ಹೆಸರು ಇರುವ ಸುದ್ದಿ ನಟಿ ಶಾರ್ಮಿಳಾ ಮಾಂಡ್ರೆ ಕಣ್ಣಿಗೆ ಬಿದ್ದಿದು, ಕೂಡಲೇ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ತಮ್ಮ ಸೋ‍ಷಿಯಲ್ ಮೀಡಿಯಾದಲ್ಲಿ ಸತ್ಯವನ್ನು ತಿಳಿಸಿದ್ದಾರೆ. ಕಾರ್ಯಕ್ರಮದ ಸ್ಪರ್ಧಿ ಆಗಿಲ್ಲ ಎನ್ನುವದನ್ನು ತಿಳಿಸಿದ್ದಾರೆ.

 

 

ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಟ್ವೀಟ್ ಮಾಡಿರುವ ಶರ್ಮಿಳಾ ಮಾಂಡ್ರೆ “ನಾನು ರಿಯಾಲಿಟಿ ಟಿವಿ ಕಾರ್ಯಕ್ರಮದಲ್ಲಿ ಭಾಗವಹಿಸುತ್ತೇನೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ಅವೆಲ್ಲಾ ಸುಳ್ಳು ಎಂದು ಸ್ಪಷ್ಟಪಡಿಸುತ್ತಿದ್ದೇನೆ.. ನನ್ನ ಪ್ರೀತಿಯ ನಟನೆಗೆ ನನ್ನ ಮೊದಲ ಆದ್ಯತೆ ಇರುತ್ತದೆ ಹಾಗೆಯೆ ಇದೆ ವರ್ಷ ನನ್ನ ನಿರ್ಮಾಣ ಸಂಸ್ಥೆಯಲ್ಲಿಯೂ ತಲ್ಲೀನಳಾಗುತ್ತೇನೆ” ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ತಾವು ಕಾರ್ಯಕ್ರಮದ ಸ್ಪರ್ಧಿ ಆಗಿಲ್ಲ ಎನ್ನುವದನ್ನು ತಿಳಿಸಿದ್ದಾರೆ.

ಈ ಭಾರಿ ಕಲರ್ಸ್ ಕನ್ನಡಲ್ಲಿ:
ಕಳೆದ ಬಾರಿ ಕಲರ್ಸ್ ಸೂಪರ್ ವಾಹಿನಿಯಲ್ಲಿ ಬಿಗ್ ಬಾಸ್ ಪ್ರಸಾರವಾಗಿತ್ತು. ಅದಕ್ಕಿಂತ ಮೊದಲು ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಿತ್ತು. ಈ ಬಾರಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಆ ಮೂಲಕ ಮತ್ತೆ ಆರಂಭದ ಎರಡು ಆವೃತ್ತಿಗಳಲ್ಲಿ ಪ್ರಸಾರವಾದ ಕಲರ್ಸ್ ವಾಹಿನಿಯಲ್ಲೇ ಮತ್ತೆ ಪ್ರಸಾರವಾಗುತ್ತಿದೆ.

ಸದ್ಯ ಹರಿದಾಡುತ್ತಿರುವ ಸುದ್ದಿಯ ಪ್ರಕಾರ ಬಿಗ್ ಬಾಸ್ ಶೋನ ಏಳನೇ ಅವತರಣಿಕೆಗೆ ಈಗಾಗಲೇ ಸ್ಪರ್ಧಿಗಳನ್ನು ಆಯ್ಕೆಯ ಪ್ರಕ್ರಿಯೆ ನಡೆಯುತ್ತಿದ್ದು ಅದಕ್ಕೆ ಸಂಭಂದಪಟ್ಟ ಕೆಲಸಗಳನ್ನೂ ಈಗಾಗಲೇ ಶುರುವಿಟ್ಟುಕೊಂಡಿದ್ದರಂತೆ..ಈ ಮೂಲಕ ಎಲ್ಲೋ ಒಂದಿಷ್ಟು ಮಂದಿ ಪ್ರತಿಭಾವಂತರು, ರಿಟೇರ್‍ಮೆಂಟ್ ಸ್ಟೇಜಿನ ಕಲಾವಿದರು ಮತ್ತು ಕೆಲವೊಂದಷ್ಟು ತಿಕ್ಕಲುತಾಣಗಳು, ಅಸಹ್ಯಕಾರಿ ಸಣ್ಣತನಗಳನ್ನು ಮತ್ತೊಮ್ಮೆ ನೋಡೋ ಕಾಲ ಬರುತ್ತಿದೆ..

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

To Top