fbpx

“ಶಾಲಾ ಮಕ್ಕಳಿಗೆ ತೊಂದರೆಯಾಗುವ ರೀತಿಯಲ್ಲಿ ಕಚೇರಿ ಮಾಡಿಲ್ಲ” ಸಂಸದ ತೇಜಸ್ವಿ ಸೂರ್ಯ.

ಮಾಜಿ ಸಂಸದ ದಿವಂಗತ ಅನಂತ್ ಕುಮಾರ್ ಬಳಸುತ್ತಿದ್ದ ಕಚೇರಿಯನ್ನು ನಿರಾಕರಿಸಿ ಮಕ್ಕಳ ಗ್ರಂಥಾಲಯ ಜಾಗದಲ್ಲಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ತಮ್ಮ ಅಧಿಕೃತ ಕಚೇರಿ ಪ್ರಾರಂಭ ಮಾಡುತ್ತಿರುವುದು ಇದೀಗ ವಿವಾದಕ್ಕೆ ಕಾರಣವಾಗಿದೆ. ಕ್ಷೇತ್ರದ ಜನರ ಜೊತೆಗೆ ಜಯನಗರ ಕಾಂಗ್ರೆಸ್ ಶಾಸಕಿ ಸೌಮ್ಯಾರೆಡ್ಡಿ ಸಹ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಂಸದರಾಗಿ ಆಯ್ಕೆಯಾದ ಬಳಿ ಸಂಸದರ ಕಚೇರಿ ಕೊಡಿ ಎಂದು ತೇಜಸ್ವಿ ಸೂರ್ಯ ಬಿಬಿಎಂಪಿಗೆ ಮನವಿ ಮಾಡಿದ್ದರು. ಈ ವೇಳೆ ಅನಂತಕುಮಾರ್ ಅವರ ಕಚೇರಿಯನ್ನು ಬಳಕೆ ಮಾಡಲು ನಿರಾಕರಿಸಿದ ಪರಿಣಾಮ ಅವರಿಗೆ ಜಯನಗರದ ಸಾರ್ವಜನಿಕ ಲೈಬ್ರರಿ ಆವರಣದಲ್ಲಿ ಕಚೇರಿ ತೆರೆಯಲು ಅನುಮತಿ ನೀಡಲಾಗಿದೆ.

ಬಿಬಿಎಂಪಿಗೆ ಸೇರಿದ್ದ ಜಾಗದಲ್ಲಿ ಎರಡು ಅಂತಸ್ತಿನ ಗ್ರಂಥಾಲಯ ಕಟ್ಟಡವಿದೆ. ಮೊದಲ ಹಾಗೂ ಎರಡನೇ ಅಂತಸ್ತಿನ ಕೊಠಡಿಯಲ್ಲಿ ದಿನಪತ್ರಿಕೆ ಹಾಗೂ ಪುಸ್ತಕಗಳ ಓದಿಗೆ ಅವಕಾಶವಿದೆ. ನೆಲ ಮಹಡಿಯಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗಾಗಿ ನಿತ್ಯವೂ ಸಂಜೆ ಉಚಿತ ತರಬೇತಿ ಶಿಬಿರ ನಡೆಸಲಾಗುತ್ತದೆ. ನೆಲಮಹಡಿ ಜಾಗವನ್ನೇ ಸಂಸದ ಕಚೇರಿಯನ್ನಾಗಿ ಪರಿವರ್ತಿಸಲಾಗುತ್ತಿದೆ. ಇದಕ್ಕೆ ಬಿಬಿಎಂಪಿ ಈಗಾಗಲೇ ಅನುಮತಿ ನೀಡಿದ್ದು, ನವೀಕರಣ ಕೆಲಸ ಆರಂಭವಾಗಿದೆ. ಇದರಿಂದಾಗಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ತರಬೇತಿ ಶಿಬಿರ ಸ್ಥಗಿತಗೊಳ್ಳಲಿದೆ.

ಇಡೀ ಬೆಂಗಳೂರಿನಲ್ಲೇ ಗ್ರಂಥಾಲಯ ಸಂಖ್ಯೆ ಭಾರೀ ಕಡಿಮೆ. ಜಯನಗರದಲ್ಲಂತೂ ಇರುವುದು ಕೆಲವೇ ಗ್ರಂಥಾಲಯಗಳು. ಬಡ ಮಕ್ಕಳಿಗೆ ಎಸ್‌ಎಸ್‌ಎಲ್‌ಸಿ ಟ್ಯೂಷನ್ ಮಾಡಲು ಈ ಕಟ್ಟಡವನ್ನು ಉಪಯೋಗಿಸುತ್ತಿದ್ದೆವು. ಐಎಎಸ್/ಐಪಿಎಸ್/ಕೆಎಎಸ್ ಪರೀಕ್ಷೆಗೆ ಸಿದ್ಧರಾಗುವ ಅಭ್ಯರ್ಥಿಗಳಿಗೂ ಈ ಗ್ರಂಥಾಲಯ ಉಪಯೋಗವಾಗುತ್ತಿತ್ತು ಎಂದು ಬಿಬಿಎಂಪಿ ಫ್ಯಾಕ್ಟ್ಸ್​​​ ಎಂಬ ಪೇಜ್​​ನಲ್ಲಿ ಬರೆದುಕೊಂಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

To Top