fbpx

ನಾಯಕತ್ವದಿಂದ ವಿರಾಟ್ ಕೊಹ್ಲಿ ಕೆಳಗಿಳಿಯುತ್ತಾರಾ? ನೂತನ ಟೀಂ ನಿರ್ದೇಶಕ ಹೇಸನ್ ಹೇಳೋದೇನು?

ಈ ಸಲ ಕಪ್ ನಮ್ದೆ, ಮುಂದಿನ ಸಲ ಕಪ್ ನಮ್ದೆ ಅಂತಾ ಅಭಿಮಾನಿಗಳು ಕನಸು ಕಾಣುತ್ತಿದ್ದಾರೆ. ಆದರೆ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಏಳು ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಟ್ರೋಫಿ ಗೆಲ್ಲುವಲ್ಲಿ ವಿಫಲವಾಗಿದೆ. ಈ ಮಧ್ಯೆ ವಿರಾಟ್ ಕೊಹ್ಲಿಯ ನಾಯಕತ್ವದ ಬಗ್ಗೆ ಅಪಸ್ವರ ಎದ್ದಿತ್ತು. ಇದೀಗ ತಂಡದ ನೂತನ ಟೀಂ ನಿರ್ದೇಶಕ ಮೈಕ್ ಹೇಸನ್ ಮಾತನಾಡಿದ್ದು ಯಾವುದೇ ಕಾರಣಕ್ಕೂ ನಾಯಕತ್ವದ ಬದಲಾಣೆಯ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ.

ತಂಡದ ನಾಯಕತ್ವದಲ್ಲಿನ ಬದಲಾವಣೆಯ ಬಗ್ಗೆ ಸುದ್ದಿಗಾರರಿಗೆ ಉತ್ತರಿಸಿದ ಮೈಕ್, ‘ನಾವು ಕೆಲ ವಾರಗಳಿಂದ ಚರ್ಚಿಸಿದಂತೆ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಬದಲಾವಣೆ ತರುವ ಪ್ರಶ್ನೆಯೇ ಇಲ್ಲ, ವಿರಾಟ್ ಕೊಹ್ಲಿ ತಂಡದ ಪ್ರಬಲ ಅಸ್ತ್ರವಾಗಿದ್ದಾರೆ. ನಿರಂತರ ನಾಯಕತ್ವದಿಂದಾಗಿ ಯಾವ ಕ್ಷೇತ್ರಗಳನ್ನು ಸುಧಾರಿಸಬೇಕೆಂಬುದು ಅವರಿಗೆ ತಿಳಿದಿರುತ್ತದೆ. ಹೀಗಾಗಿ ನಾಯಕತ್ವದಲ್ಲಿ ಯಾವುದೇ ಬದಲಾವಣೆ ಇಲ್ಲ’ ಎಂದು ಸ್ಪಷ್ಟನೆ ನೀಡಿದ್ದಾರೆ.

ಒಂದೆಡೆ ಟ್ರೋಫಿ ಸೋಲಿನ ಹತಾಶೆಯಾದರೆ ಮತ್ತೊಂದೆಡೆ ತಂಡದ ಬಲ ಹೆಚ್ಚಿಸುವುದರ ಕುರಿತಾಗಿ ಹೇಸನ್ ಹೇಳಿಕೊಂಡಿದ್ದಾರೆ. ಹಲವು ಆಯ್ಕೆಗಳ ಹೊರತಾಗಿ ನಾವು ನಾಯಕತ್ವದ ಬದಲಾವಣೆ ಕುರಿತು ಚಿಂತಿಸುವುದನ್ನು ಬಿಟ್ಟಿದ್ದೇವೆ. ಕೆಲ ನಿರ್ದಿಷ್ಟ ಆಟಗಾರರನ್ನು ತೆಗೆದುಕೊಳ್ಳುವುದಕ್ಕೆ ಹೆಚ್ಚಿನ ಗಮನ ನೀಡಿವುದಾಗಿ ಹೇಳಿದ್ದಾರೆ. ಅಂದಹಾಗೆ ಆರ್‌ಸಿಬಿಗೆ ನ್ಯೂಜಿಲೆಂಡ್ ಮಾಜಿ ಕೋಚ್ ಹೆಸನ್ ನಿರ್ದೇಶಕರಾಗಿ, ಆಸ್ಟ್ರೇಲಿಯಾ ಮಾಜಿ ಕೋಚ್ ಸೈಮನ್ ಕಟಿಚ್ ಮುಖ್ಯಕೋಚ್‌ ಆಗಿ ಇತ್ತೀಚೆಗಷ್ಟೇ ಆಯ್ಕೆಯಾಗಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

To Top